AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪತ್ನಿಯಿಂದ ದೂರು; ಖ್ಯಾತ ಹೀರೋನ ಬಂಧನ ಮಾಡಿದ ಪೊಲೀಸರು

Malayalam actor: ಮಲಯಾಳಂ ನಟ ಬಾಲ ಹಾಗೂ ಅವರ ಮ್ಯಾನೇಜರ್ ರಾಜೇಶ್ ಅನ್ನು ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ. ಬಾಲ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಬಾಲ ಅವರ ಕಾರು ಚಾಲಕ ಬಾಲ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಿದ್ದಾರೆ.

ಮಾಜಿ ಪತ್ನಿಯಿಂದ ದೂರು; ಖ್ಯಾತ ಹೀರೋನ ಬಂಧನ ಮಾಡಿದ ಪೊಲೀಸರು
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 15, 2024 | 5:51 PM

Share

ಮಲಯಾಳಂ ನಟ ಬಾಲಕುಮಾರ್ ಅವರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮಾಜಿ ಪತ್ನಿ ಅಮೃತಾ ಸುರೇಶ್ ಅವರು ಬಾಲಕುಮಾರ್ ವಿರುದ್ಧ ದೂರನ್ನು ನೀಡಿದ್ದರು. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು. ಅದರಂತೆ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ. ಬಾಲಕುಮಾರ್​ನ ಚಾಲಕ ನೀಡಿದ ಹೇಳಿಕೆಯನ್ನು ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಕೇರಳದ ಎರ್ನಾಕುಲಂ ಪೊಲೀಸರು ಬಾಲಕುಮಾರ್ ಅವರನ್ನು ಬಂಧಿಸಿದ್ದಾರೆ. ಬಾಲ ಅವರ ಕಾರು ಚಾಲಕನೇ ನಟನ ವಿರುದ್ಧ ಸಾಕ್ಷಿಗಳನ್ನು ನೀಡಿದ್ದಾರೆ. ಬಾಲ ಅವರು ಅಮೃತಾ ಅವರಿಗೆ ಕಿರಕುಳ ನೀಡಿದ್ದು ಈ ವಿಡಿಯೋದಲ್ಲಿ ಕಾಣಿಸಿದೆ. 12 ವರ್ಷದ ಮಗಳು ಅವಂತಿಕಾ ಎದುರಲ್ಲೇ ಈ ರೀತಿಯ ಘಟನೆಗಳು ನಡೆದಿವೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬಾಲಾ ಅವರು ಮಾಜಿ ಪತ್ನಿ ವಿರುದ್ಧ ಕೆಲವು ಪೋಸ್ಟ್​ಗಳನ್ನು ಕೂಡ ಹಾಕುತ್ತಿದ್ದಾರೆ.

ಸದ್ಯದ ವರದಿಗಳು ಹೇಳುವಂತೆ ಬಾಲಾ ಹಾಗೂ ಅವರ ಮ್ಯಾನೇಜರ್ ರಾಜೇಶ್ ಇಬ್ಬರೂ ಬಂಧನಕ್ಕೆ ಒಳಗಾಗಿದ್ದಾರೆ. ಅವರನ್ನು ಕೋರ್ಟ್ ಎದುರು ಹಾಜರು ಪಡಿಸಲಾಗಿದೆ. ಬಾಲಾ ಅವರು ನಾನಾ ರೀತಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದರು. ಎಲ್ಲವೂ ನಟಿಯ ವಿರುದ್ಧವೇ ಇರುತ್ತಿತ್ತು. ಇದರಿಂದ ಅಮೃತಾ ಬೇರೆ ದಾರಿ ಕಾಣದೆ ದೂರು ನೀಡಿದ್ದಾರೆ. ‘ಬಾಲ ಅವರು ವಿಚ್ಛೇದನ ಪಡೆಯುವಾಗ ಹಾಕಿಕೊಂಡಿದ್ದ ಷರತ್ತುಗಳನ್ನು ತಪ್ಪಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ರಣಬೀರ್​ ಕಪೂರ್​ ಹೊಸ ಲುಕ್ ವೈರಲ್; ‘ಧೂಮ್​ 4’ ಸಿನಿಮಾ ಟಾಕ್​ ಶುರು

‘ನನ್ನ ಹಾಗೂ ನನ್ನ 12 ವರ್ಷದ ಮಗಳನ್ನು ಸಾಕಷ್ಟು ಡಿಸ್ಟರ್ಬ್ ಮಾಡುತ್ತಿದ್ದಾನೆ. ಆನ್​ಲೈನ್​​ನಲ್ಲಿ ಸಂದರ್ಶನಗಳನ್ನು ನೀಡಿ ಅವರು ತೊಂದರೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಅವರು. ಈಗ ನಟನ ವಿರುದ್ಧ ಹಾಕಿರುವ ಎಲ್ಲಾ ಪ್ರಕರಣಗಳು ಜಾಮೀನು ರಹಿತದ್ದೇ ಆಗಿವೆ ಅನ್ನೋದನ್ನು ಇಲ್ಲಿ ಗಮನಿಸಬೇಕು. ‘ನನ್ನ ಮಗಳನ್ನು ನೋಡಲು ನನಗೆ ಮಾಜಿ ಪತ್ನಿ ಅಮೃತಾ ಅವಕಾಶ ನೀಡುತ್ತಿಲ್ಲ’ ಎಂದಿದ್ದರು ಬಾಲ. ಆ ಬಳಿಕ ಅಪ್ರಾಪ್ತೆ ವಿಡಿಯೋ ಮಾಡಿ ಹಾಕಿ ತಂದೆಯಿಂದ ಆಗುತ್ತಿರುವ ಸಮಸ್ಯೆಗಳು ಏನು ಎಂಬುದನ್ನು ಹೇಳಿದ್ದರು. ಈಗ ಅವರು ಬಂಧನಕ್ಕೆ ಒಳಗಾಗಿದ್ದಾರೆ.

ಬಾಲಾ ಅವರು ಮಲಯಾಳಂ ಫಿಲ್ಮ್ ಇಂಡಸ್ಟ್ರಿಯ ಸದಸ್ಯರಲ್ಲಿ ಒಬ್ಬರು. ಇವರ ತಾತ ಅರುಣಾಚಲಾ ಅವರು ಸ್ಟುಡಿಯೋ ಒಂದನ್ನು ಹೊಂದಿದ್ದರು. ಬಾಲಾ ತಂದೆ 350 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇವರ ಸಹೋದರ ಶಿವ ಅವರು ಸಿನಿಮಾಟೋಗ್ರಾಫರ್. ಬಾಲಾ ಅವರು 2002ರಲ್ಲೇ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ತೆಲುಗು ಸಿನಿಮಾ ಮಾಡಿದ್ದ ಅವರು, ನಂತರ ಮಲಯಾಳಂ ಸಿನಿಮಾಗಳನ್ನು ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us