ಮಲಯಾಳಂನ ನಟ ಶರತ್ ಚಂದ್ರನ್ ಇನ್ನಿಲ್ಲ; ಸಣ್ಣ ವಯಸ್ಸಿಗೆ ನಿಧನ ಹೊಂದಿದ ಹೀರೋ

| Updated By: ರಾಜೇಶ್ ದುಗ್ಗುಮನೆ

Updated on: Jul 30, 2022 | 10:26 AM

ಶರತ್ ಚಂದ್ರನ್ ಅವರು ಕೊಚ್ಚಿ ಮೂಲದವರು. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಐಟಿ ಜಾಬ್ ಮಾಡುತ್ತಿದ್ದರು. ನಂತರ ನಟನೆ ಬಗ್ಗೆ ಆಸಕ್ತಿ ತೋರಿದರು.

ಮಲಯಾಳಂನ ನಟ ಶರತ್ ಚಂದ್ರನ್ ಇನ್ನಿಲ್ಲ; ಸಣ್ಣ ವಯಸ್ಸಿಗೆ ನಿಧನ ಹೊಂದಿದ ಹೀರೋ
ಶರತ್
Follow us on

ಇತ್ತೀಚೆಗೆ ಮಲಯಾಳಂ ಚಿತ್ರರಂಗಕ್ಕೆ (Malayalam Film Industry) ಒಂದಾದ ಮೇಲೆ ಒಂದರಂತೆ ಆಘಾತಗಳು ಎದುರಾಗುತ್ತಿವೆ. ಇತ್ತೀಚೆಗೆ ಅಲ್ಲಿನ ವಿಲನ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮಲಯಾಳಂ ಹೀರೋ ಶರತ್ ಚಂದ್ರನ್ (Sarat Chandran) ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಶರತ್​ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಶರತ್ ನಿಧನದಿಂದ ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ಶರತ್ ಚಂದ್ರನ್ ಅವರು ಕೊಚ್ಚಿ ಮೂಲದವರು. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಐಟಿ ಜಾಬ್ ಮಾಡುತ್ತಿದ್ದರು. ನಂತರ ನಟನೆ ಬಗ್ಗೆ ಆಸಕ್ತಿ ತೋರಿದರು. ‘ಅಂಗಮಾಲಿ ಡೈರೀಸ್​’ ಸಿನಿಮಾ ಮೂಲಕ ಶರತ್ ಜನಪ್ರಿಯತೆ ಹೆಚ್ಚಿತು. ಇದಲ್ಲದೆ ‘ಮೆಕ್ಸಿಕನ್​ ಅಪರಾತ’ (2017), ‘ಸಿಐಎ: ಕಾಮ್ರೇಡ್​ ಇನ್ ಅಮೆರಿಕ’ (2017), ‘ಕೂಡೆ’ (2018) ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ನಟ ಆ್ಯಂಟನಿ ಅವರು ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಶರತ್ ಫೋಟೋ ಪೋಸ್ಟ್ ಮಾಡಿ ‘ರಿಪ್ ಬ್ರದರ್​​’ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಕಮೆಂಟ್ ಬಾಕ್ಸ್​​ನಲ್ಲಿ ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿಲ್ಲ.

ಇದನ್ನೂ ಓದಿ
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಶರತ್ ಚಂದ್ರನ್ ಅವರು ಐಟಿ ಜಾಬ್ ಬಿಟ್ಟ ನಂತರ ಡಬ್ಬಿಂಗ್ ಆರ್ಟಿಸ್ಟ್​ ಆಗಿ ಕೆಲಸ ಮಾಡಿದರು. ನಂತರ ಅವರು ಚಿತ್ರರಂಗದಲ್ಲಿ ಮಿಂಚಿದರು. 2021ರಲ್ಲಿ ಅವರ ನಟನೆಯ ಕೊನೆಯ ಸಿನಿಮಾ ತೆರೆಗೆ ಬಂತು. 2017ರಲ್ಲಿ ತೆರೆಗೆ ಬಂದ ‘ಅಂಗಮಾಲಿ ಡೈರೀಸ್​’ ಸಿನಿಮಾಗೆ ಲಿಜೊ ಜೋಸ್​ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಆ್ಯಂಟನಿ ಕೂಡ ನಟಿಸಿದ್ದರು. ಶರತ್ ಚಂದ್ರನ್ ಅವರ ಸಾವಿನ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು ನಿಧನ ಹೊಂದಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ಆಗಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊಟ್ಟ ಹಣ ಕೇಳಿದ್ದಕ್ಕೆ ಕೊಲೆ ಯತ್ನ; ಮಲಯಾಳಂ ನಟನ ಬಂಧನ

ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ 43 ವರ್ಷದ ಪ್ರಸಾದ್ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿವೀನ್ ಪೌಳಿ ನಟನೆಯ ‘ಆ್ಯಕ್ಷನ್ ಹೀರೋ ಬಿಜು’ದಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದರು.