AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಲಯಾಳಂ ಇಂಡಸ್ಟ್ರಿ ಎಂದರೆ ಬ್ಲ್ಯೂ ಸಿನಿಮಾಗಳು ಎನ್ನುವ ಕಲ್ಪನೆ ಇತ್ತು’; ರಾಮ್ ಗೋಪಾಲ್ ವರ್ಮಾ

ಈ ವರ್ಷ ರಿಲೀಸ್ ಆದ ‘ಪ್ರೇಮುಲು’, ‘ಭ್ರಮಯುಗಂ’, ‘ಆವೇಶಂ’, ‘ಆಡುಜೀವಿತಂ’, ‘ಫ್ಯಾಮಿಲಿ’, ‘ಮಂಜುಮ್ಮೇಲ್ ಬಾಯ್ಸ್’ ಸೇರಿ ಅನೇಕ ಸಿನಿಮಾಗಳು ಜನ ಮೆಚ್ಚುಗೆ ಪಡೆದಿವೆ. ಈ ಯಶಸ್ಸನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ರಾಮ್ ಗೋಪಾಲ್ ವರ್ಮಾ ಅವರು ಮಲಯಾಳಂ ಚಿತ್ರರಂಗವನ್ನು ಹೊಗಳಿದ್ದಾರೆ.  

‘ಮಲಯಾಳಂ ಇಂಡಸ್ಟ್ರಿ ಎಂದರೆ ಬ್ಲ್ಯೂ ಸಿನಿಮಾಗಳು ಎನ್ನುವ ಕಲ್ಪನೆ ಇತ್ತು’; ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ
ರಾಜೇಶ್ ದುಗ್ಗುಮನೆ
|

Updated on: Aug 05, 2024 | 7:31 AM

Share

ಮಲಯಾಳಂ ಚಿತ್ರರಂಗದ ಬಗ್ಗೆ ಮೊದಲು ಜನರಿಗೆ ಇದ್ದ ಭಾವನೆ ಬೇರೆ. ಮಲ್ಲು ಸಿನಿಮಾಗಳು ಎಂದರೆ ಪಡ್ಡೆಗಳು ಕಣ್ಣರಳಿಸುತ್ತಿದ್ದರು. ಆದರೆ, ಮಲಯಾಳಂ ಚಿತ್ರರಂಗ ಇತ್ತೀಚೆಗೆ ದೊಡ್ಡ ಯಶಸ್ಸು ಕಂಡಿದೆ. ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕಾಗಿದೆ. ಈ ವರ್ಷ ಮಲಯಾಳಂನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಗೆದ್ದಿವೆ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಅವರ ಯಶಸ್ಸನ್ನು ಕೊಂಡಾಡಿದ್ದಾರೆ.

ಈ ವರ್ಷ ರಿಲೀಸ್ ಆದ ಪ್ರೇಮುಲು, ಭ್ರಮಯುಗಂ, ಆವೇಶಂ, ಆಡು ಜೀವಿತಂ, ಫ್ಯಾಮಿಲಿ, ಮಂಜುಮ್ಮೇಲ್ ಬಾಯ್ಸ್ ಸೇರಿ ಅನೇಕ ಸಿನಿಮಾಗಳು ಜನ ಮೆಚ್ಚುಗೆ ಪಡೆದಿವೆ. ಈ ಯಶಸ್ಸನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ರಾಮ್ ಗೋಪಾಲ್ ವರ್ಮಾ ಅವರು ಮಲಯಾಳಂ ಚಿತ್ರರಂಗವನ್ನು ಹೊಗಳಿದ್ದಾರೆ.

‘ಕೆಲವು ಚಿತ್ರಗಳು ಒಂದರ ನಂತರ ಒಂದರಂತೆ ಬಂದು ಎಲ್ಲವನ್ನೂ ಬದಲಾಯಿಸಿದೆ. ಮಲಯಾಳಂ ಸಿನಿಮಾ ಎಂದರೆ ನೀಲಿ ಚಿತ್ರ ಎಂದು ತಿಳಿದ ಕಾಲವೊಂದಿತ್ತು. ಹಿಂದೆ, ನಾನು ವಿಜಯವಾಡದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ನಾವು ಮಲಯಾಳಂ ಚಲನಚಿತ್ರಗಳನ್ನು ನೋಡುತ್ತಿರಲಿಲ್ಲ. ಏಕೆಂದರೆ ಅವರು ಅಲ್ಲಿ ಬರುವುದೆಲ್ಲ ಅದೇ ರೀತಿಯ (ನೀಲಿ ಚಿತ್ರ) ಸಿನಿಮಾಗಳು ಎನ್ನವು ಅಭಿಪ್ರಾಯ ನಮ್ಮದಾಗಿತ್ತು. ಮಲಯಾಳಂ ಇಂಡಸ್ಟ್ರಿಯಿಂದ ಅತ್ಯುತ್ತಮ ಚಿತ್ರಗಳು ಬರುತ್ತಿವೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೇವೆ. ಆ ಸಮಯದಲ್ಲಿ ಅಂತಹ ಒಳ್ಳೆಯ ಚಿತ್ರಗಳು ಇರಲಿಲ್ಲವೆಂದಲ್ಲ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಇದನ್ನೂ ಓದಿ: ‘ಮಲಯಾಳಂ ರೀತಿಯ ಸಿನಿಮಾ ಮಾಡೋಕೆ ಅವರಿದ್ದಾರೆ, ನಾವು ನಮ್ಮ ಕಥೆ ಹೇಳಬೇಕು’; ರಾಜ್ ಬಿ. ಶೆಟ್ಟಿ

ಮುಂದಿನ 10 ವರ್ಷಗಳಲ್ಲಿ ಚಿತ್ರರಂಗ ಹೇಗಿರಬಹುದು ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಲಾರೆ ಎಂದಿದ್ದಾರೆ. ‘ಮುಂದಿನ 6 ತಿಂಗಳಲ್ಲಿ ಏನಾಗುತ್ತದೆ ಎಂದು ಹೇಳೋದೆ ಕಷ್ಟ, ಹೀಗಿರುವಾಗ 10 ವರ್ಷಗಳದ್ದನ್ನು ಹೇಗೆ ಹೇಳಲಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!