ಕಾಜಲ್​ ಸೊಂಟ ಮುಟ್ಟಿದ ಯುವಕ: ವಿಡಿಯೋ ವೈರಲ್​

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟಿ ಕಾಜಲ್​ ಅಗರ್​ವಾಲ್​ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಅನುಚಿತವಾಗಿ ವರ್ತಿಸಿದ್ದಾನೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಕಿಡಿಗೇಡಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಈ ಘಟನೆಯಿಂದ ಕಾಜಲ್ ಅಗರ್​ವಾಲ್​ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಕಾಜಲ್​ ಸೊಂಟ ಮುಟ್ಟಿದ ಯುವಕ: ವಿಡಿಯೋ ವೈರಲ್​
ಕಾಜಲ್​ ಸೊಂಟ ಮುಟ್ಟಿದ ಯುವಕ
Edited By:

Updated on: May 17, 2024 | 2:34 PM

ನಟಿ ಕಾಜಲ್​ ಅಗರ್​ವಾಲ್​ (Kajal Aggarwal) ಅವರಿಗೆ ಬೇಸರ ತರಿಸುವಂತಹ ಘಟನೆ ನಡೆದಿದೆ. ಇತ್ತೀಚೆಗೆ ಹೈದರಾಬಾದ್​ನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಅವರು ತೆರಳಿದ್ದರು. ಅಲ್ಲಿ ಜನಸಂದಣಿ ಸೇರಿತ್ತು. ಈ ವೇಳೆ ಕಾಜಲ್​ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಕಾಜಲ್​ ಅವರನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಇದರಿಂದ ನಟಿಗೆ ಶಾಕ್​ ಆಗಿದೆ. ಕೂಡಲೇ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಸಂದರ್ಭದ ವಿಡಿಯೋ (Kajal Aggarwal Viral Video) ವೈರಲ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಜನರು ಆ ವ್ಯಕ್ತಿಗೆ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ.

ಕಾಜಲ್​ ಅಗರ್​ವಾಲ್​ ಅವರು ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿಬೀಳುತ್ತಾರೆ. ಹೈದರಾಬಾದ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬನು ಸೊಂಟಕ್ಕೆ ಕೈ ಹಾಕಿದ್ದಾನೆ! ಇದು ಕಾಜಲ್​ ಅವರಿಗೆ ಕಿರಿಕಿರಿ ಉಂಟು ಮಾಡಿದೆ.

ವೈರಲ್ ವಿಡಿಯೋ:

ನಟಿಯರಿಗೆ ಈ ರೀತಿ ಮುಜುಗರ ಆಗುವಂತಹ ಘಟನೆ ನಡೆದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ನಟಿ ಅಪರ್ಣಾ ಬಾಲಮುರಳಿ ಅವರಿಗೂ ಇದೇ ರೀತಿ ಆಗಿತ್ತು. ಹಾಗೆಯೇ ಸಾರಾ ಅಲಿ ಖಾನ್​, ಅಹಾನಾ ಕುಮಾರ್​ ಮುಂತಾದ ನಟಿಯರು ಕೂಡ ಕಿಡಿಗೇಡಿಗಳ ಕಾಟ ಅನುಭವಿಸಿದ್ದರು. ಅಭಿಮಾನಿಗಳು ಎಂಬ ಸಲಿಗೆಯಿಂದ ಹತ್ತಿರಕ್ಕೆ ಬಿಟ್ಟುಕೊಂಡರೆ ಈ ರೀತಿ ಆದಾಗ ನಟಿಯರಿಗೆ ಬೇಸರ ಉಂಟಾಗುತ್ತದೆ.

ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್​ ಅಗರ್​ವಾಲ್​; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ

ಕಾಜಲ್​ ಅಗರ್​ವಾಲ್​ ಅವರಿಗೆ ಈಗ 38 ವರ್ಷ ವಯಸ್ಸು. ಈಗಲೂ ಅವರು ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಮಗಧೀರ’ ರೀತಿಯ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಮದುವೆ ನಂತರವೂ ಅವರ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಬಹುನಿರೀಕ್ಷಿತ ‘ಇಂಡಿಯನ್​ 2’ ಸಿನಿಮಾಗೆ ಅವರು ನಾಯಕಿ ಆಗಿದ್ದಾರೆ. ಅಲ್ಲದೇ, ಇನ್ನೂ ಅನೇಕ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ‘ಉಮಾ’, ‘ಸತ್ಯಭಾಮಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 2.7 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us