‘ಅಣ್ಣನಿಗಾಗಿ ಹುಡುಗಿ ವೇಷ ಹಾಕಿದೆ, ಎಲ್ಲ ಸೇವೆ ಮಾಡಿದೆ ಆದರೆ….’
Manchu Manoj: ತೆಲುಗು ಚಿತ್ರರಂಗದ ಸ್ಟಾರ್ ಕುಟುಂಬಗಳಲ್ಲಿ ಮಂಚು ಕುಟುಂಬವೂ ಒಂದು. ಮೋಹನ್ ಬಾಬು ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದವರು. ಇದೀಗ ಅವರ ಮಕ್ಕಳು ಆಸ್ತಿಗಾಗಿ ಹಾದಿ-ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಮಂಚು ಮನೋಜ್, ಇದೀಗ ಅಣ್ಣ ಮಂಚು ವಿಷ್ಣು ಮೇಲೆ ನಾನಾ ಆರೋಪಗಳನ್ನು ಮಾಡಿದ್ದಾರೆ.

ತೆಲುಗು ಚಿತ್ರರಂಗದ (Tollywood) ಸ್ಟಾರ್ ಕುಟುಂಬಗಳಲ್ಲಿ ಮಂಚು ಕುಟುಂಬವೂ ಒಂದು. ಮೋಹನ್ ಬಾಬು (Mohan Babu) ಒಂದು ಕಾಲದಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ಅವರ ಮೂವರು ಮಕ್ಕಳು ಸಹ ಈಗ ಸಿನಿಮಾ ತಾರೆಯರು. ಮಂಚು ವಿಷ್ಣು, ಮಂಚು ಮನೋಜ್ ಮತ್ತು ಮಂಚು ಲಕ್ಷ್ಮಿ. ಆದರೆ ಇತ್ತೀಚೆಗೆ ಮಂಚು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಮಂಚು ಮನೋಜ್ (Manchu Manoj), ಅಣ್ಣ ಮಂಚು ವಿಷ್ಣು (Manchu Vishnu) ಮತ್ತು ತಂದೆ ಮೋಹನ್ ಬಾಬು ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಸ್ತಿ ಕಲಹದಿಂದಾಗಿ ಕುಟುಂಬ ಛಿದ್ರವಾಗಿದೆ.
ಮಂಚು ಮೋಹನ್ ಬಾಬು, ವಿಷ್ಣು ಇರುವ ಮನೆಗೆ ತಮಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮಂಚು ಮನೋಜ್ ಆರೋಪ ಮಾಡಿದ್ದು, ಕಳೆದ ಕೆಲ ತಿಂಗಳಿನಿಂದಲೂ ಜಗಳಗಳು ನಡೆಯುತ್ತಲೇ ಇವೆ. ಎರಡೂ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲು ಸಹ ಹತ್ತಿ ಬಂದಿದ್ದಾರೆ. ನ್ಯಾಯಾಲಯದಲ್ಲಿಯೂ ಪ್ರಕರಣಗಳು ನಡೆಯುತ್ತಿವೆ. ನಿನ್ನೆ ಮಂಚು ಮನೋಜ್, ವಿಷ್ಣು ಮನೆ ಪ್ರವೇಶಿಸಲು ಪ್ರಯತ್ನಿಸಿದ್ದು, ಈ ವೇಳೆಯಲ್ಲಿ ಸಾಕಷ್ಟು ಹೈಡ್ರಾಮಾ ನಡೆದಿದೆ. ತಮ್ಮ ಮೇಲೆ ಹಾಗೂ ತಮ್ಮ ಬಾಡಿಗಾರ್ಡ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಚು ಮನೋಜ್ ಆರೋಪ ಮಾಡಿದ್ದಾರೆ.
ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಮಂಚು ಮನೋಜ್, ‘ಈ ಕುಟುಂಬಕ್ಕಾಗಿ ನಾನು ಸಾಕಷ್ಟು ಮಾಡಿದ್ದೇನೆ. ಅಪ್ಪ (ಮೋಹನ್ ಬಾಬು) ಅಣ್ಣನನ್ನು ನಾವು ಹೀರೋ ಆಗಿ ಸ್ಥಾಪಿಸಬೇಕು ಅದಕ್ಕಾಗಿ ನೀನು ಸಿನಿಮಾದಲ್ಲಿ ಮಹಿಳೆಯ ವೇಷ ಹಾಕಬೇಕು ಎಂದರು, ನನಗೆ ಇಷ್ಟ ಇಲ್ಲದಿದ್ದರೂ ಅಣ್ಣನಿಗಾಗಿ ಒಪ್ಪಿಕೊಂಡೆ. ಅಣ್ಣನ ಸಿನಿಮಾದಲ್ಲಿ ಫೈಟ್ಸ್ ಕಂಪೋಸ್ ಮಾಡಿದೆ, ಗ್ರಾಫಿಕ್ಸ್ ಮಾಡಿಕೊಟ್ಟೆ, ಮ್ಯೂಸಿಕ್ ಮಾಡಿಕೊಟ್ಟೆ, ಮಾಡಬಾರದ ಸೇವೆಗಳನ್ನೆಲ್ಲ ಮಾಡಿದೆ. ಆದರೆ ಈಗ ನನ್ನನ್ನೇ ದೂರ ಇಟ್ಟಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದೂಡಿದ ಮಂಚು ಮನೋಜ್, ಯಾವುದರ ಭಯ?
‘ನಾನು ಗ್ರಾಫಿಕ್ಸ್ ಓದಿದರೆ ಅಣ್ಣ ನನ್ನ ಹೆಸರಲ್ಲಿ ಗ್ರಾಫಿಕ್ಸ್ ಕಂಪೆನಿ ತೆರೆದ, ನಮ್ಮ ಅಪ್ಪ ಚಿತ್ರಮಂದಿರ ಮಾಡಿದರೆ ಅಣ್ಣ ಅದರಲ್ಲಿ ಸಮೋಸಾ ಮಾರುತ್ತಿದ್ದಾನೆ. ಬೇರೆಯವರ ಶ್ರಮದ ಮೇಲೆ ಬದುಕುವುದು ಅವನಿಗೆ ಅಭ್ಯಾಸವಾಗಿದೆ. ಸಿನಿಮಾ, ಕಾಲೇಜು ಸಂಸ್ಥೆಗಾಗಿ ನಾನು ಸಾಕಷ್ಟು ದುಡಿದಿದ್ದೇನೆ ಆದರೆ ಈ ವರೆಗೆ ಕುಟುಂಬದಿಂದ ಒಂದೇ ಒಂದು ರೂಪಾಯಿ ಹಣವನ್ನೂ ಸಹ ನಾನು ತೆಗೆದುಕೊಂಡಿಲ್ಲ. ಈಗಲೂ ಸಹ ನಾನು ಚರ್ಚೆಗೆ ಸಿದ್ಧ ಇದ್ದೇನೆ. ಆದರೆ ಅವರಿಗೆ ಅದು ಬೇಕಾಗಿಲ್ಲ’ ಎಂದಿದ್ದಾರೆ ಮಂಚು ಮನೋಜ್.
ಬೆಳ್ಳಿ ತೆರೆಯ ಮೇಲೆ ಹೋರಾಟ ಮಾಡೋಣ ಎಂದುಕೊಂಡು ಮಂಚು ವಿಷ್ಣುವಿನ ‘ಕಣ್ಣಪ್ಪ’ ಸಿನಿಮಾದ ಎದುರಾಗಿ ನನ್ನ ‘ಭೈರವ’ ಸಿನಿಮಾ ಬಿಡುಗಡೆ ಮಾಡೋಣ ಎಂದುಕೊಂಡೆ. ಇದು ಗೊತ್ತಾಗುತ್ತಿದ್ದಂತೆ ‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದ. ನನ್ನ ಸಿನಿಮಾ ಎದುರು ಬಂದರೆ ತನಗೆ ಸಮಸ್ಯೆ ಆಗುತ್ತದೆಯೆಂದು ಗೊತ್ತಾದ ಕೂಡಲೇ ನನ್ನ ಮೇಲೆ ಪರೋಕ್ಷ ದಾಳಿ ಪ್ರಾರಂಭ ಮಾಡಿದ್ದಾನೆ. ಈಗ ಮನೆಯ ಒಳಗೆ ಹೋದರೆ ಅಲ್ಲಿ ಮನೆಯವರು ಯಾರೂ ಇಲ್ಲ, ಎಲ್ಲ ರೌಡಿಗಳನ್ನು ಕರೆದುಕೊಂಡು ಬಂದು ಇಟ್ಟಿದ್ದಾರೆ’ ಎಂದಿದ್ದಾರೆ ಮಂಚು ಮನೋಜ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ