AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಳಹಸ್ತಿಯಲ್ಲಿ ಆರಂಭವಾಯಿತು ‘ಕಣ್ಣಪ್ಪ’: ಕುಟುಂಬ ಸಮಸ್ಯೆಗಳ ನಡುವೆ ಸಿನಿಮಾ ಮಾಡುತ್ತಿರುವ ವಿಷ್ಣು

Manchu Vishnu: ಕೆಲವು ದಿನಗಳ ಹಿಂದೆ ಸಹೋದರರ ಜಗಳದಿಂದಾಗಿ ಸುದ್ದಿಯಾಗಿದ್ದ ಮಂಚು ವಿಷ್ಣು ಸಿನಿಮಾಗಳ ಕಡೆಗೆ ಮರಳಿದ್ದು, ಇದೀಗ ಡಾ.ರಾಜ್​ಕುಮಾರ್ ನಟನೆಯ ದಶಕಗಳಷ್ಟು ಹಳೆಯ ಸಿನಿಮಾದ ಕತೆಯನ್ನು ಹೊಸದಾಗಿ ಸಿನಿಮಾ ಮಾಡುತ್ತಿದ್ದಾರೆ.

ಕಾಳಹಸ್ತಿಯಲ್ಲಿ ಆರಂಭವಾಯಿತು 'ಕಣ್ಣಪ್ಪ': ಕುಟುಂಬ ಸಮಸ್ಯೆಗಳ ನಡುವೆ ಸಿನಿಮಾ ಮಾಡುತ್ತಿರುವ ವಿಷ್ಣು
ಮಂಚು ವಿಷ್ಣು
ಮಂಜುನಾಥ ಸಿ.
|

Updated on: Aug 20, 2023 | 7:51 PM

Share

ತೆಲುಗು ನಟ ಮಂಚು ವಿಷ್ಣು (Manchu Vishnu) ತಮ್ಮ ಕುಟುಂಬದ ಸಮಸ್ಯೆಗಳಿಂದಾಗಿ ಕೆಲ ದಿನಗಳ ಹಿಂದೆ ಸುದ್ದಿಯಲ್ಲಿದ್ದರು. ತೆಲುಗಿನ ಹಿರಿಯ ಸ್ಟಾರ್ ನಟ ಮೋಹನ್​ಬಾಬು ಪುತ್ರರಾದ ಮಂಚು ವಿಷ್ಣು ಹಾಗೂ ಅವರ ಸಹೋದರ ಮಂಚು ಮನೋಜ್ (Manchu Manoj) ನಡುವಿನ ಸೋದರ ಕಲಹ ಬೀದಿಗೆ ಬಂದಿತ್ತು. ಮಂಚು ಮನೋಜ್, ತಮ್ಮ ಅಣ್ಣ ಮಂಚು ವಿಷ್ಣು ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಹಲ್ಲೆ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ನಂತರವೂ ಪರಸ್ಪರರ ಬಗ್ಗೆ ಮಾಧ್ಯಮಗಳ ಮುಂದೆ, ಸಾಮಾಜಿಕ ಜಾಲತಾಣದಲ್ಲಿ ಹೀಗಳೆದುಕೊಂಡಿದ್ದರು. ಮೋಹನ್​ಬಾಬ್ ಸಹ ಮಕ್ಕಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲದರ ನಡುವೆ ಮಂಚು ವಿಷ್ಣು ಹೊಸ ಸಿನಿಮಾವನ್ನು ಪ್ರಾರಂಭಿಸಿದ್ದಾರೆ. ಅದೂ ಭಕ್ತಿ ರಸ ಪ್ರಧಾನ ಸಿನಿಮಾ ಮೂಲಕ.

ಡಾ ರಾಜ್​ಕುಮಾರ್ ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾದಲ್ಲಿ ಮಾಡಿದ್ದ ಪಾತ್ರವನ್ನು ಆಧರಿಸಿ ಮಂಚು ವಿಷ್ಣು ಇದೀಗ ಸಿನಿಮಾ ಮಾಡುತ್ತಿದ್ದಾರೆ. ಹೌದು ಶಿವನ ಮಹಾನ್ ಭಕ್ತ ಕಣ್ಣಪ್ಪನ ಕತೆಯನ್ನು ಸಿನಿಮಾ ಮಾಡಲಾಗುತ್ತಿದ್ದು ಮಂಚು ವಿಷ್ಣು ಬೇಟೆಗಾರ ಕಣ್ಣಪ್ಪನ ಪಾತ್ರದಲ್ಲಿ ನಟಿಸಲಿದ್ದಾರೆ. ಬೇಡರ ಕಣ್ಣಪ್ಪನ ಕತೆ ತಲೆಮಾರುಗಳಿಂದಲೂ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಮುದ್ರಿತವಾಗಿದೆ. ಹಲವಾರು ನಾಟಕ, ಸಿನಿಮಾಗಳಲ್ಲಿಯೂ ಕಣ್ಣಪ್ಪನ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಆಧುನಿಕ ಯುವಗ ಯುವಕ-ಯುವತಿಯರಿಗೆ ಮತ್ತೊಮ್ಮೆ ಕಣ್ಣಪ್ಪನ ಕತೆಯನ್ನು ತೋರಿಸಲೆಂದು ಹೊಸ ತಂತ್ರಜ್ಞಾನ, ದೊಡ್ಡ ಬಜೆಟ್ ಅನ್ನು ಬಳಸಿಕೊಂಡು ಕಣ್ಣಪ್ಪನ ಕತೆಯನ್ನು ಮತ್ತೊಮ್ಮೆ ತೆರೆಯ ಮೇಲೆ ತರಲಾಗುತ್ತಿದೆ.

‘ಕಣ್ಣಪ್ಪ’ ಎಂದು ಸಿನಿಮಾಕ್ಕೆ ಹೆಸರಿಟ್ಟಿದ್ದು ಮಂಚು ವಿಷ್ಣು ಬೇಟೆಗಾರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಭಾರತದ ಕೆಲವು ಒಳ್ಳೆಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ‘ಕಣ್ಣಪ್ಪ’ ಸಿನಿಮಾವನ್ನು ’24 ಫ್ರೇಮ್ಸ್ ಫ್ಯಾಕ್ಟರಿ’ ಮತ್ತು ‘ಎವಿಎ ಎಂಟರ್‌ಟೈನ್‌ಮೆಂಟ್’ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಟ, ರಾಜಕಾರಣಿ ಡಾ. ಮೋಹನ್ ಬಾಬು ಸಿನಿಮಾದ ನಿರ್ಮಾಪಕರಾಗಿದ್ದಾರೆ. ಮಗನಿಗಾಗಿ ಭಕ್ತಿ ಪ್ರಧಾನ ಸಿನಿಮಾ ಮಾಡಲು ಮೋಹನ್​ಬಾಬು ಮುಂದಾಗಿದ್ದಾರೆ.

ಇದನ್ನೂ ಓದಿ:Manchu Vishnu: ಮನೆಗೆ ನುಗ್ಗಿ ಸಂಬಂಧಿ ಮೇಲೆ ನಟ ಮಂಚು ವಿಷ್ಣು ಹಲ್ಲೆ, ವಿಡಿಯೋ ವೈರಲ್

‘ಕಣ್ಣಪ್ಪ’ ಸಿನಿಮಾ ವ್ಯಕ್ತಿಯ ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದೆ. ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಸಿನಿಮಾ ಒಳಗೊಂಡಿದೆ. ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ವಿಷ್ಣು ಮಂಚು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ಇದುವರೆಗೂ ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ವಿಷ್ಣು ಮಂಚು, ಇದೇ ಮೊದಲ ಬಾರಿಗೆ ಪೌರಾಣಿಕ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ‘ಕಣ್ಣಪ್ಪ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

ತೆಲುಗಿನ ಜನಪ್ರಿಯ ಲೇಖಕರಾ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ನೀಡಿದ್ದಾರೆ. ಈ ಹಿಂದೆ ಸ್ಟಾರ್ ಪ್ಲಸ್ ಗಾಗಿ ಮಹಾಭಾರತ ಧಾರಾವಾಹಿ ಸರಣಿ ನಿರ್ದೇಶನ ಮಾಡಿದ್ದ ಮುಖೇಶ್ ಕುಮಾರ್ ಸಿಂಗ್, ‘ಕಣ್ಣಪ್ಪ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ