AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಕೋಟಿ ಕ್ಲಬ್ ಸೇರಿದ ‘ಮಂಜುಮ್ಮೇಲ್ ಬಾಯ್ಸ್’; ಈ ಸಾಧನೆ ಮಾಡಿದ ಮೊದಲ ಸಿನಿಮಾ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಶಿ, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಾಹಿರ್ ಅವರು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

200 ಕೋಟಿ ಕ್ಲಬ್ ಸೇರಿದ ‘ಮಂಜುಮ್ಮೇಲ್ ಬಾಯ್ಸ್’; ಈ ಸಾಧನೆ ಮಾಡಿದ ಮೊದಲ ಸಿನಿಮಾ
ಮಂಜುಮ್ಮೇಲ್ ಬಾಯ್ಸ್
ರಾಜೇಶ್ ದುಗ್ಗುಮನೆ
|

Updated on: Mar 20, 2024 | 12:20 PM

Share

ಕಳೆದ ತಿಂಗಳು ಫೆಬ್ರವರಿ 22ರಂದು ರಿಲೀಸ್ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ (Manjummel Boys) 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಸಿನಿಮಾ ಈ ಸಾಧನೆ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ ಅನ್ನೋದು ವಿಶೇಷ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜನರಿಗೆ ಇಷ್ಟ ಆಗಿದೆ.

2006ರಲ್ಲಿ ಕೇರಳದ ಮಂಜುಮ್ಮೇಲ್ ಗ್ರಾಮದ ಗೆಳೆಯರು ಕೊಡೈಕ್ಕೆನಲ್​ನಲ್ಲಿರುವ ಗುಣ ಗುಹೆಗೆ ಪ್ರವಾಸ ತೆರಳುತ್ತಾರೆ. ಗ್ರೂಪ್​ನಲ್ಲಿ ಇರುವ ಎಲ್ಲರೂ ಪ್ರಯಾಣದುದ್ದಕ್ಕೂ ಕೂಗಾಟ, ಚೀರಾಟ ಮಾಡುತ್ತಿರುತ್ತಾರೆ. ಈ ಗುಹೆಯಲ್ಲಿರುವ ಆಳದ ಕಂದಕದಲ್ಲಿ ಇವರ ಗುಂಪಿನ ಸುಭಾಷ್ ಎನ್ನುವ ಯುವಕ ಬೀಳುತ್ತಾನೆ. ಆತನ ಹೇಗೆ ಹೊರ ತರಲಾಗುತ್ತದೆ ಎನ್ನುವುದೇ ಸಿನಿಮಾದ ಕಥೆ. ಈ ಚಿತ್ರವನ್ನು ಸಾಕಷ್ಟು ನೈಜವಾಗಿ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ಚಿದಂಬರಮ್ ಅವರು ಮಾಡಿದ್ದಾರೆ.

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಲಯಾಳಂ ಮಾತ್ರವಲ್ಲದೆ ತಮಿಳಿನಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ವಿಶವಾದ್ಯಂತ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಿಂದಲೇ ಈ ಚಿತ್ರಕ್ಕೆ 50 ಕೋಟಿ ರೂಪಾಯಿ ಹರಿದು ಬಂದಿದೆ. ಇದೇ ರೀತಿ ‘ಬ್ರಮಾಯುಗಂ’ ಹಾಗೂ ‘ಪ್ರೇಮಲು’ ಸಿನಿಮಾ ಕೂಡ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ‘ಮಂಜುಮ್ಮೇಲ್ ಬಾಯ್ಸ್’ ಬಜೆಟ್ 5 ಕೋಟಿ, ಗಳಿಸಿದ್ದು 180 ಕೋಟಿ ರೂಪಾಯಿ; ಏನಿದೆ ಚಿತ್ರದಲ್ಲಿ?

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಶಿ, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಾಹಿರ್ ಅವರು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More