ಬಾಲ್ಯದಲ್ಲಿ ತಮ್ಮನ್ನು ರಿಜೆಕ್ಟ್ ಮಾಡಿದವರ ಜೊತೆಯೇ ನಟಿಸೋ ಅವಕಾಶ ಪಡೆದ ತಮನ್ನಾ
ಹೊಸ ವೆಬ್ ಸರಣಿಯನ್ನು ಪ್ರಕಟಿಸಿದ ನಂತರ ತಮನ್ನಾ ಒಂದು ವಿಚಾರ ಹೇಳಿಕೊಂಡಿದ್ದಾರೆ. ಅವರು ಸಣ್ಣವರಿರುವಾಗ ಡ್ಯಾನ್ಸ್ ರಿಯಾಲಿಟಿ ಶೋ ‘ಬೂಗೀ ವೂಗೀ'ಗಾಗಿ ಆಡಿಷನ್ ನೀಡಿದ್ದರು. ಆದರೆ, ಜಾವೇದ್ ಜಾಫ್ರಿ ತಂಡದಿಂದ ತಿರಸ್ಕರಿಸಲ್ಪಟ್ಟಿದ್ದರು.
‘ಬಾಹುಬಲಿ’ (Bahubali Movie) ಸೇರಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನಟಿ ತಮನ್ನಾ ನೀಡಿದ್ದಾರೆ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚೆಗೆ ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಈಗ ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಸಣ್ಣ ವಯಸ್ಸಿನಲ್ಲಿ ಯಾರಿಂದ ತಾವು ರಿಜೆಕ್ಟ್ ಆದರೋ ಅವರ ಜೊತೆಯೇ ಸಿನಿಮಾ ಮಾಡೋ ಅವಕಾಶವನ್ನು ಅವರು ಗಳಿಸಿದ್ದಾರೆ.
ಮಾರ್ಚ್ 19ರಂದು ಅಮೆಜಾನ್ ಪ್ರೈಮ್ ವಿಡಿಯೋ ಕಾರ್ಯಕ್ರಮ ನಡೆದಿದೆ. ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಲಾಗಿದೆ. ‘ಮಿರ್ಜಾಪುರ್ 3’, ‘ಪಂಚಾಯತ್ 3’ ಸೇರಿ ಹಲವು ಸೀರಸ್ ಅಮೇಜಾನ್ ಪ್ರೈಮ್ ವಿಡಿಯೋ ಅಡಿಯಲ್ಲಿ ಸಿದ್ಧವಾಗುತ್ತಿದ್ದು, ಈ ವರ್ಷ ರಿಲೀಸ್ ಆಗೋ ಸಾಧ್ಯತೆ ಇದೆ. ಅದೇ ರೀತಿ ತಮನ್ನಾ ನಟನೆಯ ಹೊಸ ಸೀರಸ್ಗೆ ‘ಡೇರಿಂಗ್ ಪಾರ್ಟ್ನರ್ಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಡಯಾನಾ ಮತ್ತು ಜಾವೇದ್ ಜಾಫ್ರಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ವೆಬ್ ಸರಣಿಯನ್ನು ಪ್ರಕಟಿಸಿದ ನಂತರ ತಮನ್ನಾ ಒಂದು ವಿಚಾರ ಹೇಳಿಕೊಂಡಿದ್ದಾರೆ. ಅವರು ಸಣ್ಣವರಿರುವಾಗ ಡ್ಯಾನ್ಸ್ ರಿಯಾಲಿಟಿ ಶೋ ‘ಬೂಗೀ ವೂಗೀ’ಗಾಗಿ ಆಡಿಷನ್ ನೀಡಿದ್ದರು. ಆದರೆ, ಜಾವೇದ್ ಜಾಫ್ರಿ ತಂಡದಿಂದ ತಿರಸ್ಕರಿಸಲ್ಪಟ್ಟಿದ್ದರು. ‘ನನ್ನ ಬಾಲ್ಯದ ನೆನಪು ಇದು. ನಾನು ಬೂಗಿ ವೂಗಿ ರಿಯಾಲಿಟಿ ಶೋನಿಂದ ರಿಜೆಕ್ಟ್ ಆಗಿದೆ. ರಿಜೆಕ್ಟ್ ಆದ ಬಳಿಕ ನನ್ನ ಪಯಣ ಬಹಳ ದೀರ್ಘವಾಗಿದೆ. ಈಗ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ’ ಎಂದರು ಅವರು. ಈ ಹೇಳಿಕೆಯನ್ನು ಕೇಳಿ ಜಾವೇದ್ ಜಾಫ್ರಿ ದಿಗ್ಭ್ರಮೆಗೊಂಡಿದ್ದಾರೆ. ತಮ್ಮ ರಿಯಾಲಿಟಿ ಶೋಗೆ ತಮನ್ನಾ ಕೂಡ ಆಡಿಷನ್ಗೆ ಬಂದಿದ್ದಾರೆ ಎಂಬುದೇ ಅವರಿಗೆ ತಿಳಿದಿರಲಿಲ್ಲ.
‘ಡೇರಿಂಗ್ ಪಾರ್ಟ್‌ನರ್ಸ್’ ಕಥೆ ಏನು?
ತಮನ್ನಾ ಅವರ ವೆಬ್ ಸೀರೀಸ್ ‘ಡೇರಿಂಗ್ ಪಾರ್ಟ್‌ನರ್ಸ್’ ಇಬ್ಬರು ಆತ್ಮೀಯ ಸ್ನೇಹಿತರ ಕಥೆಯಾಗಿದೆ. ಲೋಕದ ಬಗ್ಗೆ ತಲೆಕೆಡಿಸಿಕೊಳ್ಳದೆ ಇಬ್ಬರೂ ಮದ್ಯದ ಕಂಪನಿ ಆರಂಭಿಸುವ ಧೈರ್ಯ ತೋರುತ್ತಾರೆ. ಈ ಅವಧಿಯಲ್ಲಿ ಅವರು ಯಾವ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸೀರಿಸ್ನಲ್ಲಿ ತೋರಿಸಲಾಗುತ್ತಿದೆ. ಕರಣ್ ಜೋಹರ್ ಅವರ ಧರ್ಮ ಎಂಟರ್‌ಟೇನ್‌ಮೆಂಟ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸರಣಿಯನ್ನು ಅರ್ಚಿತ್ ಕುಮಾರ್, ನಿಶಾಂತ್ ನಾಯಕ್ ನಿರ್ದೇಶಿಸಿದ್ದಾರೆ. ಡಯಾನಾ ಪೆಂಟಿ ‘ಡೇರಿಂಗ್ ಪಾರ್ಟ್‌ನರ್ಸ್’ ಮೂಲಕ OTT ಜಗತ್ತಿನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿಯ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಶೀಘ್ರವೇ ವಿಜಯ್ ಜೊತೆ ತಮನ್ನಾ ಮದುವೆ, ವಾರಗೆಯ ನಟಿಯರಿಗಂತಲೂ ಭಿನ್ನವಾಗಿರಲಿದೆ ವಿವಾಹ
2023ರಲ್ಲಿ ತಮನ್ನಾ ನಟನೆಯ ಹಲವು ಸಿನಿಮಾಗಳು ರಿಲೀಸ್ ಆದವು. ‘ಜೈಲರ್’ ಚಿತ್ರದಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು. ‘ಸ್ತ್ರೀ 2’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿಸುತ್ತಿದ್ದಾರೆ. ವಿಜಯ್ ವರ್ಮಾ ಜೊತೆ ಅವರು ಪ್ರೀತಿಯಲ್ಲಿ ಇದ್ದಾರೆ. ಇವರ ಮದುವೆ ಈ ವರ್ಷವೇ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ