ಒಟಿಟಿಗೆ ಬರೋಕೆ ರೆಡಿ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

‘ಮಂಜುಮ್ಮೇಲ್ ಬಾಯ್ಸ್’ ಕರ್ನಾಟಕದ ಕೆಲವೇ ಕೆಲವು ನಗರಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ, ಈ ಸಿನಿಮಾ ನೋಡಬೇಕು ಎಂದು ಅಂದುಕೊಂಡ ಅನೇಕರಿಗೆ ಚಿತ್ರ ನೋಡೋಕೆ ಸಾಧ್ಯವಾಗಿಲ್ಲ. ಅಂಥವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡೋಕೆ ಶೀಘ್ರವೇ ಅವಕಾಶ ಸಿಗಲಿದೆ.

ಒಟಿಟಿಗೆ ಬರೋಕೆ ರೆಡಿ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
ಮಂಜುಮ್ಮೇಲ್ ಬಾಯ್ಸ್
Edited By:

Updated on: Mar 26, 2024 | 1:15 PM

ಮಲಯಾಳಂ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂದರೆ ಅದು ‘ಮಂಜುಮ್ಮೇಲ್ ಬಾಯ್ಸ್’ (Manjummel Boys).  ನೈಜ ಘಟನೆ ಆಧರಿಸಿ ಸಿದ್ಧವಾದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ತುಂಬಾನೇ ನ್ಯಾಚುರಲ್ ಆಗಿ ಸಿನಿಮಾ ಮೂಡಿ ಬಂದಿದೆ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ಸಿನಿಮಾ ಹೆಚ್ಚು ಇಷ್ಟ ಆಗಿದೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾನ ಒಟಿಟಿಯಲ್ಲಿ ನೋಡಬೇಕು ಎಂದು ಅನೇಕರು ಕಾದಿದ್ದಾರೆ. ಅವರಿಗೆ ಖುಷಿ ಸುದ್ದಿ ಸಿಕ್ಕಿದೆ. ಈ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆಗಿದೆ.

‘ಮಂಜುಮ್ಮೇಲ್ ಬಾಯ್ಸ್’ ಮಲಯಾಳಂ ಸಿನಿಮಾ. ಬೆಂಗಳೂರಿನಲ್ಲೂ ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಿದೆ. ಆದರೆ, ಕರ್ನಾಟಕದ ಕೆಲವೇ ಕೆಲವು ನಗರಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಹೀಗಾಗಿ, ಈ ಸಿನಿಮಾ ನೋಡಬೇಕು ಎಂದು ಅಂದುಕೊಂಡ ಅನೇಕರಿಗೆ ಚಿತ್ರ ನೋಡೋಕೆ ಸಾಧ್ಯವಾಗಿಲ್ಲ. ಅಂಥವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡೋಕೆ ಶೀಘ್ರವೇ ಅವಕಾಶ ಸಿಗಲಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಮೂಲಕ ‘ಮಂಜುಮ್ಮೇಲ್ ಬಾಯ್ಸ್’ ವೀಕ್ಷಣೆಗೆ ಲಭ್ಯವಾಗಲಿದೆ. ಏಪ್ರಿಲ್ 5ರಿಂದ ಸಿನಿಮಾ ಪ್ರಸಾರ ಕಾಣಲಿದೆ ಎನ್ನಲಾಗಿದೆ. ಮಲಯಾಳಂ ಜೊತೆ ತಮಿಳು, ಕನ್ನಡದಲ್ಲೂ ಸಿನಿಮಾ ನೋಡಬಹುದು ಎಂದು ಹೇಳಲಾಗುತ್ತಿದೆ. ಡಿಸ್ನಿ ಕಡೆಯಿಂದ ಈ ಬಗ್ಗೆ ಘೋಷಣೆ ಆದ ಬಳಿಕ ಈ ವಿಚಾರದ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಆಗೋ ಬಹುತೇಕ ಪರಭಾಷೆಯ ಸಿನಿಮಾಗಳು ಕನ್ನಡದಲ್ಲೂ ಲಭ್ಯವಿದೆ. ಹೀಗಾಗಿ, ‘ಮಂಜುಮ್ಮೇಲ್ ಬಾಯ್ಸ್’ ಕನ್ನಡದಲ್ಲೂ ಪ್ರಸಾರ ಆಗಲಿದೆ ಎಂಬುದು ಕೆಲವರು ಊಹೆ.

ಇದನ್ನೂ ಓದಿ: 200 ಕೋಟಿ ಕ್ಲಬ್ ಸೇರಿದ ‘ಮಂಜುಮ್ಮೇಲ್ ಬಾಯ್ಸ್’; ಈ ಸಾಧನೆ ಮಾಡಿದ ಮೊದಲ ಸಿನಿಮಾ

ನೈಜ ಘಟನೆ

2006ರಲ್ಲಿ ಕೊಚ್ಚಿ ಸಮೀಪದ ಮಂಜುಮ್ಮೇಲ್ ಊರಿನ ಯುವಕರು ಟ್ರಿಪ್​ ತೆರಳಬೇಕು ಎಂದು ನಿರ್ಧರಿಸುತ್ತಾರೆ. ಅವರು ಹೋಗೋದು ಕೊಡೈಕೆನಲ್​ಗೆ. ಅಲ್ಲಿ ಸಾಕಷ್ಟು ಸಮಯ ಕಳೆದ ಬಳಿಕ ಗುಣಾ ಕೇವ್​ಗೆ ಹೋಗುತ್ತಾರೆ. ಅಲ್ಲಿ ಇರುವ ಆಳದ ಗುಂಡಿಯಲ್ಲಿ ಈ ಗುಂಪಿನ ಓರ್ವ ಬೀಳುತ್ತಾನೆ. ಆ ಗುಂಡಿಯಲ್ಲಿ ಬಿದ್ದ ಯಾರೂ ಎದ್ದು ಬಂದ ದಾಖಲೆಯೇ ಇಲ್ಲ. ನಂತರ ಗೆಳೆಯರೇ ಆತನ ರಕ್ಷಣೆಗೆ ಮುಂದಾಗುತ್ತಾರೆ. ಆತ ಉಳಿಯುತ್ತಾನೆಯೋ ಅಥವಾ ಇಲ್ಲವೋ ಎಂಬುದು ಸಿನಿಮಾದ ಕಥೆ.

ಭರ್ಜರಿ ಗಳಿಕೆ

ಫೆಬ್ರವರಿ 22ರಂದು ‘ಮಂಜುಮ್ಮೇಲ್ ಬಾಯ್ಸ್’ ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಐದು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದೆ. ಈ ಸಿನಿಮಾ ಈವರೆಗೆ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಈ ಚಿತ್ರವನ್ನು ಚಿದಂಬರಂ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಸೌಬಿನ್ ಶಾಹಿರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us