‘ಪೆದ್ದಿ’ ರಿಲೀಸ್, ಮಗನ ಸಿನಿಮಾ ಬಗ್ಗೆ ಚಿರಂಜೀವಿಗೆ ಅದೆಷ್ಟು ಕಾಳಜಿ
Peddi movie cast: ‘ಪೆದ್ದಿ’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮ್ ಚರಣ್ಗೆ ಇದೆ. ಇದೇ ಕಾರಣಕ್ಕೆ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ‘ಪೆದ್ದಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಸಮಯದಲ್ಲಿಯೂ ಸಹ ಚಿರಂಜೀವಿ ಸಾಕಷ್ಟು ಇನ್ವಾಲ್ವ್ ಆಗಿದ್ದರು. ಸಿನಿಮಾದ ಬಿಡುಗಡೆಗೆ ವಿತರಕರು ಸಮಸ್ಯೆ ಸೃಷ್ಟಿಸಿದಾಗಲೂ ಚಿರಂಜೀವಿ ಖುದ್ದು ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನದಂದು ‘ಪೆದ್ದಿ’ ಬಗ್ಗೆ ಟ್ವೀಟ್ ಮಾಡಿದ್ದಾರೆ.

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಸ್ವತಃ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆಗಳಿವೆ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ ನಟಿಸಿರುವ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಹಾಗಾಗಿ ‘ಪೆದ್ದಿ’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮ್ ಚರಣ್ಗೆ ಇದೆ. ಇದೇ ಕಾರಣಕ್ಕೆ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ‘ಪೆದ್ದಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಸಮಯದಲ್ಲಿಯೂ ಸಹ ಚಿರಂಜೀವಿ ಸಾಕಷ್ಟು ಇನ್ವಾಲ್ವ್ ಆಗಿದ್ದರು. ಸಿನಿಮಾದ ಬಿಡುಗಡೆಗೆ ವಿತರಕರು ಸಮಸ್ಯೆ ಸೃಷ್ಟಿಸಿದಾಗಲೂ ಚಿರಂಜೀವಿ ಖುದ್ದು ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನದಂದು ‘ಪೆದ್ದಿ’ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ನಮ್ಮ ಪೆದ್ದಿ, ನನ್ನ ಪ್ರೀತಿಯ ರಾಮ್ ಚರಣ್ ಮತ್ತು ಇಡೀ ಚಿತ್ರತಂಡ ಹಾಗೂ ಕಲಾವಿದರಿಗೆ ಈ ಅದ್ಭುತ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಅಭಿನಂದನೆಗಳು! ನಾನು ಶೂಟಿಂಗ್ ನಿಮಿತ್ತ ಪೊಲ್ಲಾಚಿಯಲ್ಲಿದ್ದರೂ ಸಹ, ನನ್ನ ಮನಸೆಲ್ಲಾ ‘ಪೆದ್ದಿ’ ಚಿತ್ರದ ಮೇಲೆಯೇ ಇದೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾಕ್ಕಾಗಿ ಚರಣ್ ಪಟ್ಟ ಶ್ರಮ, ತೋರಿಸಿದ ಕಾಳಜಿ ಮತ್ತು ಭಕ್ತಿ ಎಲ್ಲವನ್ನೂ ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ಈ ದಿನ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ ಮತ್ತು ಪ್ರಶಂಸೆಯನ್ನು ನೋಡುತ್ತಿದ್ದರೆ ಒಬ್ಬ ತಂದೆಯಾಗಿ ಮಾತ್ರವಲ್ಲದೆ, ಒಬ್ಬ ನಟನಾಗಿಯೂ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.
ಮುಂದುವರೆದು, ‘‘ಪೆದ್ದಿ’ ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗಲು ಆತ (ರಾಮ್ ಚರಣ್) ಹಗಲಿರುಳು ಪಟ್ಟ ಶ್ರಮ, ಹಠ ಮತ್ತು ಪ್ರಾಮಾಣಿಕತೆ ಪ್ರತಿ ದೃಶ್ಯದಲ್ಲೂ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಆ ಕಷ್ಟಕ್ಕೆ ಸಿಕ್ಕ ಪ್ರತಿಫಲವೇ ಈ ಮಹಾ ವಿಜಯ. ಇಂತಹ ಒಂದು ಅದ್ಭುತವಾದ ಕಥೆಯನ್ನು ಬರೆದು, ಅಷ್ಟೇ ಅದ್ಭುತವಾಗಿ ತೆರೆಯ ಮೇಲೆ ದೃಶ್ಯರೂಪಕ್ಕೆ ತಂದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದಿದ್ದಾರೆ.
ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?
ಹಾಗೆಯೇ, ಈ ಚಿತ್ರವನ್ನೇ ಇಷ್ಟು ಬೃಹತ್ ಮಟ್ಟದಲ್ಲಿ, ಯಾವುದೇ ತರಹದ ರಾಜಿ ಮಾಡಿಕೊಳ್ಳದೆ ನಿರ್ಮಿಸಿದ ನಿರ್ಮಾಪಕ ವೆಂಕಟ್ ಸತೀಶ್ ಕೀಲಾರು ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಈ ಪ್ರತಿಷ್ಠಿತ ಚಿತ್ರದಲ್ಲಿ ನಟಿಸಿದ ನನ್ನ ಆತ್ಮೀಯ ಸ್ನೇಹಿತ, ‘ಕರುನಾಡ ಚಕ್ರವರ್ತಿ’ ಶ್ರೀ ಶಿವರಾಜ್‌ಕುಮಾರ್ ಅವರಿಗೆ ಹಾಗೂ ಅಪ್ಪಲಸೂರಿ ಪಾತ್ರದಲ್ಲಿ ಅದ್ಭುತವಾಗಿ ಜೀವಿಸಿದ ನನ್ನ ಸಹೋದರ ಸಮಾನರಾದ ಜಗಪತಿ ಬಾಬು ಅವರಿಗೆ ಅಭಿನಂದನೆಗಳು’ ಎಂದು ನಟರನ್ನು ಅಭಿನಂದಿಸಿದ್ದಾರೆ.
ಅದ್ಭುತವಾದ ಹಾಡುಗಳು ಮತ್ತು ಹೃದಯ ಸ್ಪರ್ಶಿ ಹಿನ್ನೆಲೆ ಸಂಗೀತವನ್ನು ನೀಡಿದ ಎಆರ್ ರೆಹಮಾನ್ ಅವರಿಗೆ, ತಮ್ಮ ಅದ್ಭುತ ಛಾಯಾಗ್ರಹಣದಿಂದ ಪ್ರತಿ ಫ್ರೇಮ್ ಅನ್ನು ಅತ್ಯದ್ಭುತವಾಗಿ ಮಲಿಸಿದ ರತ್ನವೇಲು ಅವರಿಗೆ, ಅಮೋಘವಾದ ಕಲಾ ನಿರ್ದೇಶನ ನೀಡಿದ ಅವಿನಾಶ್ ಕೊಲ್ಲಾ ಅವರಿಗೆ, ತಮ್ಮ ಅದ್ಭುತ ಎಡಿಟಿಂಗ್ ಕೌಶಲ್ಯದಿಂದ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಎಡಿಟರ್ ನವೀನ್ ನೂಲಿ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದು ತಂತ್ರಜ್ಞರಿಗೆ ಧನ್ಯವಾದ ಹೇಳಿದ್ದಾರೆ.
‘ಈ ಚಿತ್ರದ ಯಶಸ್ಸಿನ ಭಾಗವಾಗಿರುವ ಜಾನ್ಹವಿ ಕಪೂರ್, ದಿವ್ಯೇಂದು, ಇತರ ನಟ-ನಟಿಯರು, ತಾಂತ್ರಿಕ ಪ್ರವೀಣರು ಹಾಗೂ ವೃದ್ಧಿ ಸಿನಿಮಾಸ್, ಮೈತ್ರಿ ಮೂವಿ ಮೇಕರ್ಸ್ , ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ‘ಪೆದ್ದಿ’ ಸಾಧಿಸಿದ ಈ ಘನ ವಿಜಯವು ತೆಲುಗು ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಲಿ ಮತ್ತು ಮುಂದೆಯೂ ಇನ್ನೂ ಮರೆನ್ನೋ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಮನಸ್ಸುಪೂರ್ವಕವಾಗಿ ಹಾರೈಸುತ್ತೇನೆ’ ಎಂದಿದ್ದಾರೆ ನಟ ಚಿರಂಜೀವಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




