ಕೆಲವೇ ನಿಮಿಷಗಳ ಶೂಟ್​ಗೆ ಮೈಕ್ ಟೈಸನ್ ಪಡೆದಿದ್ದು 25 ಕೋಟಿ ರೂಪಾಯಿ; ಇದು ಯಾರ ಐಡಿಯಾ?

ಮೈಕ್ ಟೈಸನ್ ಅವರು ಬಾಕ್ಸಿಂಗ್​ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ, ಈಗಿನ ಜನರೇಷನ್​ನವರಿಗೆ ಮೈಕ್ ಟೈಸನ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅನೇಕರಿಗೆ ಅವರು ಯಾರು ಎಂಬುದೇ ಗೊತ್ತಿಲ್ಲ.

ಕೆಲವೇ ನಿಮಿಷಗಳ ಶೂಟ್​ಗೆ ಮೈಕ್ ಟೈಸನ್ ಪಡೆದಿದ್ದು 25 ಕೋಟಿ ರೂಪಾಯಿ; ಇದು ಯಾರ ಐಡಿಯಾ?
ಟೈಸನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 31, 2022 | 3:51 PM

ಪುರಿ ಜಗನ್ನಾಥ್ (Puri Jagannadh) ನಿರ್ದೇಶನದ, ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಸಿನಿಮಾ (Liger Movie) ಬಾಕ್ಸ್ ಆಫೀಸ್​ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. ವಿಮರ್ಶೆಯಲ್ಲಿ ಚಿತ್ರ ಸೋತ ಬೆನ್ನಲ್ಲೇ ಸಿನಿಮಾಗೆ ಹಿನ್ನಡೆ ಆಯಿತು. ಈ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಮೈಕ್ ಟೈಸನ್ ಅವರ ಆಗಮನ ಆಗುತ್ತದೆ. ಅವರು ಸಿನಿಮಾದಲ್ಲಿ ನಿಜಕ್ಕೂ ಅಗತ್ಯವಿತ್ತೇ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡೋದು ಸಹಜ. ಈ ಚಿತ್ರಕ್ಕಾಗಿ ಮೈಕ್ ಟೈಸನ್ (Mike Tyson) ಅವರು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

ಮೈಕ್ ಟೈಸನ್ ಅವರು ಬಾಕ್ಸಿಂಗ್​ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ, ಈಗಿನ ಜನರೇಷನ್​ನವರಿಗೆ ಮೈಕ್ ಟೈಸನ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅನೇಕರಿಗೆ ಅವರು ಯಾರು ಎಂಬುದೇ ಗೊತ್ತಿಲ್ಲ. ಈ ಕಾರಣಕ್ಕೆ ಚಿತ್ರದಲ್ಲಿ ಅವರನ್ನು ಹಾಕಿಕೊಂಡರೆ ಹೆಚ್ಚು ಮೈಲೇಜ್ ಸಿಗಲಿದೆ ಎಂಬ ನಿರ್ದೇಶಕ ಪುರಿ ಜಗನ್ನಾಥ್ ಅವರ ಆಲೋಚನೆ ತಲೆಕೆಳಗಾಗಿದೆ.

ಮೈಕ್ ಟೈಸನ್ ಅವರನ್ನು ಸಿನಿಮಾದಲ್ಲಿ ಹಾಕಿಕೊಳ್ಳಬೇಕು ಎಂಬ ಆಲೋಚನೆ ಮೊದಲು ಬಂದಿದ್ದು ಪುರಿ ಜಗನ್ನಾಥ್​ಗೆ. ಈ ಐಡಿಯಾವನ್ನು ‘ಲೈಗರ್’ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಅವರು ಸಂಪೂರ್ಣವಾಗಿ ವಿರೋಧಿಸಿದ್ದರು. ಮೈಕ್ ಟೈಸನ್​ ಸಿನಿಮಾದಲ್ಲಿ ನಟಿಸಿದರೆ ಯಾವುದೇ ರೀತಿಯಲ್ಲಿ ಉಪಯೋಗ ಆಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ, ಇದನ್ನು ಕೇಳುವ ಸ್ಥಿತಿಯಲ್ಲಿ ಪುರಿ ಜಗನ್ನಾಥ್ ಇರಲಿಲ್ಲ. ವಿಜಯ್ ದೇವರಕೊಂಡ ಕೂಡ ಈ ಆಲೋಚನೆಗೆ ಅಷ್ಟಾಗಿ ಬೆಂಬಲ ನೀಡಿಲ್ಲ. ಆದರೆ, ಎಷ್ಟೇ ಖರ್ಚಾದರೂ ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಬೇಕು ಎಂದು ಪುರಿ ಹಠ ಹಿಡಿದರು.

ಇದನ್ನೂ ಓದಿ
Image
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Image
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

ಮೈಕ್ ಟೈಸನ್ ಈ ಚಿತ್ರದಲ್ಲಿ ನಟಿಸೋಕೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಮೆರಿಕಕ್ಕೆ ಬಂದು ಸಿನಿಮಾ ಶೂಟಿಂಗ್ ಮಾಡಬೇಕು ಎಂಬ ಷರತ್ತು ಇಟ್ಟಿದ್ದರು. ಈ ಕಾರಣಕ್ಕೆ ಇಡೀ ತಂಡದವರು ಅಮೆರಿಕಕ್ಕೆ ತೆರಳಿದ್ದರು. ಇದರಿಂದ ಸಿನಿಮಾ ಬಜೆಟ್ ಹೆಚ್ಚಿದೆ.

ಇದನ್ನೂ ಓದಿ: ‘ಲೈಗರ್​​ಗೋಸ್ಕರ ಎಣ್ಣೆ ಬಿಟ್ಟೆ, ಈವರೆಗೂ ಮುಟ್ಟಿಲ್ಲ’: ವಿಜಯ್ ದೇವರಕೊಂಡ

ಪ್ರತಿ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಉತ್ತಮವಾಗಿ ಮೂಡಿ ಬಂದರೆ ಪ್ರೇಕ್ಷಕರು ಥ್ರಿಲ್ ಆಗುತ್ತಾರೆ. ಸಿನಿಮಾ ಸಪ್ಪೆಯಾಗಿ, ಕ್ಲೈಮ್ಯಾಕ್ಸ್ ಕೂಡ ಸಪ್ಪೆ ಎಂದರೆ ಪ್ರೇಕ್ಷಕರಿಗೆ ಬೇಸರ ಆಗೋದು ಸಹಜ. ‘ಲೈಗರ್’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಮೈಕ್ ಟೈಸನ್ ಬದಲು ಬೇರೆ ಯಾರಾದರೂ ಇದ್ದಿದ್ದರೆ ಸಿನಿಮಾ ಉತ್ತಮ ರೀತಿಯಲ್ಲಿ ಮೂಡಿ ಬರುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.