Milana Nagaraj Wedding: ಪ್ರೇಮಿಗಳ ದಿನದಂದೇ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಮದುವೆ

Milana Nagaraj: ನಮ್ಮ ಮದುವೆಯ ಪೂಜಾ ಕಾರ್ಯಕ್ರಮ ಶುರುವಾಗಿದೆ ಎಂಬ ತಲೆಬರಹದಡಿ ವಿಡಿಯೋ ಹಂಚಿಕೊಂಡಿರುವ ಮಿಲನಾ ನಾಗರಾಜ್, ಆ ವಿಡಿಯೋದಲ್ಲಿ ದೇವರ ಗುಡಿಯೊಂದರಲ್ಲಿ ಪೂಜೆ ಮಾಡುತ್ತಿರುವುದು ಕಂಡುಬಂದಿದೆ.

Milana Nagaraj Wedding: ಪ್ರೇಮಿಗಳ ದಿನದಂದೇ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಮದುವೆ
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 09, 2021 | 8:21 PM

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ (Sandalwood) ಇತ್ತೀಚೆಗೆ ಸೆನ್ಸೇಷನಲ್ ಮೂಡಿಸಿದ ಜೋಡಿಗಳ ಸಾಲಿನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇದ್ದಾರೆ (Milana Nagaraj and Darling Krishna). ಲವ್​ ಮಾಕ್ಟೇಲ್ (Love Mocktail) ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಇಬ್ಬರೂ ನಿಜ ಜೀವನದಲ್ಲಿ ಹಸೆಮಣೆಗೇರುವ ಕಾಲ ಸನ್ನಿಹಿತವಾಗಿದೆ. ತಮ್ಮ ಮದುವೆಯ ಬಗ್ಗೆ ಕಳೆದ ವರ್ಷಾಂತ್ಯದಲ್ಲೇ ದಿನ ನಿಗದಿ ಮಾಡಿದ್ದ ಇವರು ಮುಂದಿನ ಭಾನುವಾರ (ಫೆಬ್ರವರಿ 14) ಪ್ರೇಮಿಗಳ ದಿನಾಚರಣೆಯಂದೇ (Valentine’s Day) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಮದುವೆಗೆ ಸಂಬಂಧಿಸಿದ ಪೂಜಾ ಕಾರ್ಯಗಳು ಆರಂಭವಾಗಿದ್ದು ಮಿಲನಾ ನಾಗರಾಜ್​ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಮದುವೆಯ ಪೂಜಾ ಕಾರ್ಯಕ್ರಮ ಶುರುವಾಗಿದೆ ಎಂಬ ತಲೆಬರಹದಡಿ ವಿಡಿಯೋ ಹಂಚಿಕೊಂಡಿರುವ ಮಿಲನಾ ನಾಗರಾಜ್, ಆ ವಿಡಿಯೋದಲ್ಲಿ ದೇವರ ಗುಡಿಯೊಂದರಲ್ಲಿ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ತಲೆಯ ಮೇಲೆ ಬುತ್ತಿಯೊಂದನ್ನು ಹೊತ್ತು ದೇವರ ಗುಡಿ ಪ್ರವೇಶಿಸಿರುವ ಮಿಲನಾ, ಬಾಳೆ ಎಲೆ ಹಾಸಿದ್ದಲ್ಲಿಗೆ ಹೋಗಿ ದೇವರ ಮೂರ್ತಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ.

ಲವ್​ ಮಾಕ್ಟೈಲ್​ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಈ ಜೋಡಿ, ಸದ್ಯದಲ್ಲೇ ಲವ್​ ಮಾಕ್ಟೈಲ್​ 2 ಸಿನಿಮಾದ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುವುದು ಈಗಾಗಲೇ ನಿರ್ಧರಿತವಾಗಿದೆ. ಪ್ರೇಮಿಗಳ ದಿನಾಚರಣೆಯಂದು ವೈವಾಹಿಕ ಜೀವನಕ್ಕೆ ಪ್ರವೇಶ ನೀಡುತ್ತಿರುವ ಇವರಿಬ್ಬರಿಗೂ ಅಭಿಮಾನಿಗಳು ಈಗಾಗಲೇ ಶುಭ ಹಾರೈಸಿದ್ದು, ಸುಂದರ ಜೋಡಿ ಸದಾ ಸಂತಸದಿಂದಿರಲಿ ಎಂದು ಶುಭ ಹಾರೈಸಿದ್ದಾರೆ. ಈ ಮೂಲಕ ಚಂದನವನದ ಚೆಂದದ ಜೋಡಿ ನವ ಬದುಕು ಆರಂಭಿಸುವ ಕಾಲ ಹತ್ತಿರಕ್ಕೆ ಬಂದಿದೆ.

Vikrant Rona: 3ಡಿ ರೂಪದಲ್ಲಿ ತೆರೆಗಪ್ಪಳಿಸಲಿದೆ ಆರಡಿ ಕಟೌಟ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ

Published On - 8:00 pm, Tue, 9 February 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್