
ಮೋಹನ್ಲಾಲ್ (Mohanlal) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ಇಂದು (ಮೇ 21) ಜನ್ಮದಿನ. ಅವರ ಬಗ್ಗೆ ಹಲವು ಅಪರೂಪದ ವಿಚಾರಗಳು ಇವೆ. ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲೂ ಅವರು ಶ್ರಮವಹಿಸಿ ನಟನೆ ಮಾಡುತ್ತಾ ಇದ್ದಾರೆ. ವಿಶೇಷ ಎಂದರೆ ಒಂದೇ ವರ್ಷ ಮೋಹನ್ಲಾಲ್ ನಟನೆಯ 34 ಚಿತ್ರಗಳು ರಿಲೀಸ್ ಆದವು! ಈ ಪೈಕಿ 25 ಚಿತ್ರಗಳು ಸೂಪರ್ ಹಿಟ್ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
1980ರಲ್ಲಿ ರಿಲೀಸ್ ಆದ ‘ಮಂಜಿಲ್ ವಿರಿಂಜ ಪೂಕ್ಕಲ್’ ಸಿನಿಮಾದಲ್ಲಿ ಮೋಹನ್ಲಾಲ್ ಅವರು ನಟಿಸಿದರು. ಇದು ಅವರ ನಟನೆಯ ಮೊದಲ ಚಿತ್ರ. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಬರೋಬ್ಬರಿ 45 ವರ್ಷಗಳ ಕಾಲ ಮೋಹನ್ಲಾಲ್ ಅವರು ಬಣ್ಣದ ಬದುಕಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಮೊದಲ ಸಿನಿಮಾದ ಬಳಿಕ ಅವರಿಗೆ ಸಾಕಷ್ಟು ಆಫರ್ಗಳು ಬಂದವು. ಎಲ್ಲವನ್ನೂ ಮಾಡಿದರು ಮೋಹನ್ಲಾಲ್.
1983ರಲ್ಲಿ ಮೋಹನ್ಲಾಲ್ ನಟನೆಯ 25ಕ್ಕೂ ಅಧಿಕ ಸಿನಿಮಾ ರಿಲೀಸ್ ಆಯಿತು. 1984ರಲ್ಲಿ 20ಕ್ಕೂ ಹೆಚ್ಚು ಚಿತ್ರ ತೆರೆಗೆ ಬಂತು. 1985ರಲ್ಲೂ 20ಕ್ಕೂ ಹೆಚ್ಚು ಚಿತ್ರ ರಿಲೀಸ್ ಆಯಿತು. 1986 ಅವರಿಗೆ ಗೋಲ್ಡನ್ ಪೀರಿಯಡ್ ಆಗಿತ್ತು ಎನ್ನಿ. ಆ ವರ್ಷ ಅವರ ನಟನೆಯ 34 ಸಿನಿಮಾಗಳು ರಿಲೀಸ್ ಆದವು. ಇದರಲ್ಲಿ ಸಕ್ಸಸ್ ರೇಟ್ ಹೆಚ್ಚಿತ್ತು. ಏಕೆಂದರೆ ಅವರ 25 ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡವು.
ಮೋಹನ್ಲಾಲ್ ಅವರ ‘ವಾನಪ್ರಸ್ತಮ್’ ಹೆಸರಿನ ಸಿನಿಮಾ ಕಮಾಲ್ ಮಾಡಿತು. ಈ ಚಿತ್ರ ಮೂರು ರಾಷ್ಟ್ರ ಪ್ರಶಸ್ತಿ ಆರು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದು ಅವರ ವೃತ್ತಿಜೀವನದಲ್ಲಿ ಮೆಚ್ಚಿಕೊಂಡಿತು. ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಸಿಕ್ಕಿದೆ.
ಇದನ್ನೂ ಓದಿ: ‘ಎಂಪುರಾನ್’ ಗೆಲ್ಲುತ್ತಿದ್ದಂತೆ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ ಮೋಹನ್ಲಾಲ್
ಮೋಹನ್ಲಾಲ್ ಅವರು ಪ್ರೊಫೆಷನಲ್ ವ್ರೆಸ್ಲರ್ ಆಗಿದ್ದರು. ಅವರು ಕೇರಳ ಸ್ಟೇಟ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ (1977-78) ಭಾಗಿ ಆಗಿ ಗೆದ್ದರು. ಅವರು 31 ಹಾಡುಗಳನ್ನು ಹಾಡಿದ್ದು, ಅವೆಲ್ಲವೂ ಅವರದ್ದೇ ಚಿತ್ರಕ್ಕಾಗಿ ಹಾಡಿದ ಹಾಡುಗಳಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.