ಎಲ್2 ಟ್ರೈಲರ್: ದೇವರ ರಾಜ್ಯವನ್ನು ರಕ್ಷಿಸಲು ಬರುತ್ತಿದ್ದಾನೆ ‘ಎಂಪುರಾನ್’
L2 Empuraan: 2019 ರಲ್ಲಿ ಬಿಡುಗಡೆ ಆಗಿದ್ದ ಮೋಹನ್ಲಾಲ್ ನಟನೆಯ ಲುಸೀಫರ್ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಮಲಯಾಳಂ ಮಾತ್ರವೇ ಅಲ್ಲದೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ತೆಲುಗಿಗೆ ರೀಮೇಕ್ ಸಹ ಆಗಿತ್ತು. ಇದೀಗ ಇದೇ ಸಿನಿಮಾದ ಎರಡನೇ ಭಾಗ ಬರುತ್ತಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಮಲಯಾಳಂ ನಟನೆಯ ಮೋಹನ್ಲಾಲ್ ನಟನೆಯ ‘ಲುಸೀಫರ್’ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು. ರಾಜಕೀಯ ಷಡ್ಯಂತ್ಯಗಳು, ಕೌಟುಂಬಿಕ ತಾಕಲಾಟ, ಸಂಬಂಧಗಳ ನಡುವಿನ ಸಿಕ್ಕುಗಳು, ಭಾವುಕತೆ, ರಾಷ್ಟ್ರೀಯತೆ ಜೊತೆಗೆ ಅದ್ಧೂರಿ ಆಕ್ಷನ್ ಎಲ್ಲವೂ ಇತ್ತು. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾ ನಿರ್ದೇಶಿಸಿ, ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗ ಬರುತ್ತಿದೆ. 2019 ರ ‘ಲುಸೀಫರ್’ ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಕತೆ ಮತ್ತೆ ಶುರುವಾಗಿದೆ.
‘ಎಲ್ 2: ಎಂಪುರಾನ್’ ಎಂದು ಈ ಸಿನಿಮಾಕ್ಕೆ ಹೆಸರಿಡಲಾಗಿದ್ದು, ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ. 2019 ರಲ್ಲಿ ಬಿಡುಗಡೆ ಆಗಿದ್ದ ‘ಲುಸೀಫರ್’ ಸಿನಿಮಾದ ಸೂತ್ರವನ್ನೇ ಇಲ್ಲಿ ಬಳಸಲಾಗಿದೆ ಆದರೆ ಕ್ಯಾನ್ವಸ್ ಅನ್ನು ಇನ್ನಷ್ಟು ದೊಡ್ಡದಾಗಿ ಮಾಡಲಾಗಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಮೊದಲ ‘ಲುಸೀಫರ್’ ಸಿನಿಮಾದಲ್ಲಿ ನಾಯಕನ ಉದ್ದೇಶ ತನ್ನ ಕುಟುಂಬ, ತನ್ನ ತಂದೆ ಕಟ್ಟಿದ ಪಕ್ಷವನ್ನು ಉಳಿಸುವುದಾಗಿತ್ತು. ಆದರೆ ಈ ಬಾರಿ ಇಡೀ ರಾಜ್ಯವನ್ನೇ ಉಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಮಾತ್ರವಲ್ಲದೆ ನಾಯಕನ ಮಾಫಿಯಾ ಜಗತ್ತು ಲಂಡನ್, ಟರ್ಕಿಗಳನ್ನು ಸಹ ದಾಟಿದೆ. ನಾಯಕ, ಈಗ ಭಯೋತ್ಪಾದಕರ ವಿರುದ್ಧವೂ ಹೋರಾಡುತ್ತಿದ್ದಾನೆ.
ಇದನ್ನೂ ಓದಿ:ಮೋಹನ್ಲಾಲ್ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್
ಸಿನಿಮಾದ ಟ್ರೈಲರ್ ಮಲಯಾಳಂ ಸೇರಿದಂತೆ ಇನ್ನೂ ಕೆಲ ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆಯನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಾಡಲಾಗುತ್ತಿದೆ. ಸಿನಿಮಾದ ನಿರ್ದೇಶನವನ್ನು ಪೃಥ್ವಿರಾಜ್ ಸುಕುಮಾರ್ ಮಾಡಿದ್ದು, ಈ ಸಿನಿಮಾದಲ್ಲಿಯೂ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ನ ಕೆಲವು ದೃಶ್ಯಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೋಹನ್ ಲಾಲ್ ಅವರ ಆಪ್ತ ಆಂಟೊನಿ ಪೆರಂಬೂರ್.
‘ಎಲ್2: ಎಂಪುರಾನ್’, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ. ಮೊದಲ ಭಾಗದಲ್ಲಿ ಇದ್ದ ಹಲವು ಪಾತ್ರಗಳು ಎರಡನೇ ಭಾಗದಲ್ಲಿಯೂ ಇವೆ. ಟೊವಿನೋ ಥಾಮಸ್, ಮಂಜು ವಾರಿಯರ್ ಸೇರಿದಂತೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾದಲ್ಲಿಯೂ ಇವೆ. ಇದರ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಸಹ ಸೇರಿಕೊಂಡಿವೆ. ಕನ್ನಡದ ನಟ ಕಿಶೋರ್ ಅವರು ಸಹ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಎಲ್2: ಎಂಪುರಾನ್’ ಸಿನಿಮಾ ಮಾರ್ಚ್ 27ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ