ಮಹಿಳೆಯರ ಆಭರಣ ತೊಟ್ಟು ನರ್ತಿಸಿದ ಸ್ಟಾರ್ ನಟ, ವಾವ್ ಎಂದ ಅಭಿಮಾನಿಗಳು
ನಮ್ಮ ಭಾರತೀಯ ಚಿತ್ರರಂಗ ಪುರುಷಪ್ರಧಾನ, ಚಿತ್ರರಂಗಗಳು ನಿರ್ಮಿಸುವ ಸಿನಿಮಾಗಳು ಸಹ ಪುರುಷ ಪ್ರಧಾನ. ಸೂಪರ್ ಸ್ಟಾರ್ಗಳ ಸಿನಿಮಾಗಳಂತೂ ಏಕಪಕ್ಷೀಯವಾಗಿ ಪುರುಷ ಪ್ರಧಾನ ಕತೆಗಳನ್ನೇ ಒಳಗೊಂಡಿರುತ್ತವೆ. ಆದರೆ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು ಇದೀಗ ಸ್ತ್ರೀ ಸಂವೇದನೆಯನ್ನು ಅದ್ಭುತವಾಗಿ ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.

ಭಾರತೀಯ ಚಿತ್ರರಂಗ ಪುರುಷ ಪ್ರಧಾನ. ಚಿತ್ರರಂಗವೂ ಪುರುಷ ಪ್ರಧಾನ, ಅವರು ಮಾಡುವ ಸಿನಿಮಾಗಳು ಸಹ ಸಂಪೂರ್ಣವಾಗಿ ಪುರುಷ ಪ್ರಧಾನ. ಸ್ಟಾರ್ ನಟರುಗಳು ತಮ್ಮ ಪುರುಷತ್ವ ತೋರಿಸುವ ಡೈಲಾಗುಗಳನ್ನು ಪುಂಖಾನುಪುಂಖವಾಗಿ ಹೊಡೆಯುತ್ತಾರೆ. ನಾಯಕಿಯರ ಸೊಂಟ ಗಿಲ್ಲಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ನೂರಾರು ಖಳರನ್ನು ಹೊಡೆದುರುಳಿಸಿ ಗಂಡಸ್ತನದ ಪ್ರದರ್ಶನ ಮಾಡುತ್ತಾರೆ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು, ತಮ್ಮೊಳಿಗೆ ಸ್ತ್ರೀಸಂವೇದನೆಯನ್ನು ತೆರೆಯ ಮೇಲೆ ತೋರಿಸಿದ್ದಾರೆ. ಈ ಕಾರಣಕ್ಕೆ ಪ್ರಶಂಸೆಗೆ ಸಹ ಗುರಿಯಾಗಿದ್ದಾರೆ.
ಮೋಹನ್ಲಾಲ್ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೋಹನ್ಲಾಲ್ ಹಲವು ಆಕ್ಷನ್, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಸೂಕ್ಷ್ಮ ಸಂವೇದನೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಮೋಹನ್ಲಾಲ್ ನಟಿಸಿರುವ ಆಭರಣ ಜಾಹೀರಾತೊಂದು ಸಖತ್ ಸದ್ದು ಮಾಡುತ್ತಿದೆ. ಸ್ಟಾರ್ ನಟರುಗಳು ಆಭರಣ ಜಾಹೀರಾತುಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಆದರೆ ಮೋಹನ್ಲಾಲ್ ಇತ್ತೀಚೆಗಷ್ಟೆ ವಿನ್ಸ್ಮೆರಾ ಜುವೆಲ್ಸ್ ಆಭರಣ ಮಳಿಗೆಗಳ ಜಾಹೀರಾತಿನಲ್ಲಿ ನಟಿಸಿದ್ದು, ಮೋಹನ್ಲಾಲ್ ಅವರು ಜಾಹೀರಾತಿನಲ್ಲಿ ಸ್ತ್ರೀಸಂವೇದನೆಯ ಪ್ರದರ್ಶನ ಮಾಡಿರುವ ರೀತಿಯ ಕಾರಣಕ್ಕೆ ಈ ಜಾಹೀರಾತು ಭಾರಿ ವೈರಲ್ ಆಗಿದೆ. ಜಾಹೀರಾತು ನಿರ್ಮಾಣದ್ದೆ ಜಾಹೀರಾತನ್ನು ವಿನ್ಸ್ಮೆರಾ ಜುವೆಲ್ಸ್ ಮಾಡಿದೆ.
ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್ ಪಡೆದ ಸಂಭಾವನೆ ಎಷ್ಟು?
ಜಾಹೀರಾತು ಹೀಗಿದೆ, ‘ಮೋಹನ್ಲಾಲ್ ವಿನ್ಸ್ಮೆರಾ ಜುವೆಲ್ಸ್ ಆಭರಣದ ಶೂಟಿಂಗ್ಗೆಂದು ಲೊಕೇಶನ್ಗೆ ಬರುತ್ತಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಜಾಹೀರಾತಿನ ಚಿತ್ರೀಕರಣ ಮಾಡಲು ಸಜ್ಜಾಗಿರುತ್ತಾರೆ. ಜಾಹೀರಾತಿನಲ್ಲಿ ನಾಯಕಿಯಾಗಿ ನಟಿಸುವ ಮಾಡೆಲ್ ಸಹ ಅಲ್ಲಿಯೇ ಇರುತ್ತಾರೆ. ಆ ಮಾಡೆಲ್, ಕತ್ತಿನಲ್ಲಿ ವಿನ್ಸ್ಮೆರಾ ಜುವೆಲ್ಸ್ ಬ್ರ್ಯಾಂಡಿನ ನೆಕ್ಲೆಸ್ ಇರುತ್ತದೆ. ಟಚ್ ಅಪ್ ಮಾಡಿಕೊಳ್ಳುವ ಮುಂಚೆ ಆ ಮಾಡೆಲ್ ತನ್ನ ಮೈಮೇಲಿನ ಆಭರಣಗಳನ್ನು ಅಲ್ಲಿಯೇ ಒಂದು ಪೆಟ್ಟಿಗೆಯಲ್ಲಿ ಇಡುತ್ತಾಳೆ.
ಮೋಹನ್ಲಾಲ್ ನಟಿಸಿರುವ ಜಾಹೀರಾತು
ಇದನ್ನು ಮೋಹನ್ಲಾಲ್ ಗಮನಿಸುತ್ತಾರೆ. ಅದಾದ ಸ್ವಲ್ಪ ಹೊತ್ತಿಗೆ ಮೋಹನ್ಲಾಲ್ ಶೂಟಿಂಗ್ ಸೆಟ್ನಿಂದ ಹೊರ ಹೋಗುವುದನ್ನು ನಿರ್ದೇಶಕ ವರ್ಮಾ ಗಮನಿಸುತ್ತಾರೆ. ಅಷ್ಟರಲ್ಲೇ ಸೆಟ್ನಲ್ಲಿದ್ದ ಆಭರಣ ಕಳುವಾಗಿದೆ ಎಂದು ಗೊತ್ತಾಗುತ್ತದೆ. ಆದರೆ ಆ ಆಭರಣವನ್ನು ಮೋಹನ್ಲಾಲ್ ತೆಗೆದುಕೊಂಡು ಹೋಗಿರುತ್ತಾರೆ. ಮಹಿಳೆಯರ ಆಭರಣಗಳನ್ನು ತಾವು ಧರಿಸಿಕೊಂಡು ಮಹಿಳೆಯರ ರೀತಿಯಲ್ಲಿಯೇ ಕನ್ನಡಿ ಮುಂದೆ ನಿಂತು ಶೃಂಗಾರ ಮಾಡಿಕೊಂಡು ನೃತ್ಯ ಮಾಡುತ್ತಿರುತ್ತಾರೆ ತಮ್ಮ ಕ್ಯಾರವ್ಯಾನ್ನಲ್ಲಿ.
ಮೋಹನ್ಲಾಲ್ ಅಂಥಹಾ ದೊಡ್ಡ ಸೂಪರ್ ಸ್ಟಾರ್ ಹೀಗೆ ಭಿನ್ನವಾಗಿ ಸ್ತ್ರೀಸಂವೇದನೆಯನ್ನು ವ್ಯಕ್ತಪಡಿಸಿರುವುದಕ್ಕೆ, ಗೌರವಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




