AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Doora Theera Yaana Review: ಹೊಂದಾಣಿಕೆಗೆ ಹೊಸ ಅರ್ಥ ಹುಡುಕುವ ‘ದೂರ ತೀರ ಯಾನ’

Doora Theera Yaana Review: ಹೊಂದಾಣಿಕೆಗೆ ಹೊಸ ಅರ್ಥ ಹುಡುಕುವ ‘ದೂರ ತೀರ ಯಾನ’
Doora Theera Yaana
ದೂರ ತೀರ ಯಾನ
UA
  • Time - 138 Minutes
  • Released - 11 July 2025
  • Language - Kannada
  • Genre - Drama , Musical , Romantic
Cast - ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್, ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ ಮುಂತಾದವರು.
Director - ಮಂಸೋರೆ
3
Critic's Rating
ಮದನ್​ ಕುಮಾರ್​
| Edited By: |

Updated on:Jul 18, 2025 | 5:37 PM

Share

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮಂಸೋರೆ (Mansore) ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾದ ಕಥಾಹಂದರವನ್ನು ಆಯ್ಕೆ ಮಾಡಿಕೊಂಡು ಅವರು ಸಿನಿಮಾ ಮಾಡುತ್ತಾರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’, ‘19-20-21’ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಈಗ ಅವರು ‘ದೂರ ತೀರ ಯಾನ’ (Doora Theera Yaana) ಸಿನಿಮಾದಲ್ಲಿ ಕೂಡ ಒಂದು ವಿಶೇಷವನ್ನು ಕಹಾನಿಯನ್ನು ಹೇಳಿದ್ದಾರೆ. ಈ ಸಿನಿಮಾದಲ್ಲಿ ನೋಡುವವರಿಗೆ ಒಂದು ಕಥೆ ಸಿಗುತ್ತದೆ ಎಂಬುದಕ್ಕಿಂತಲೂ ಒಂದು ಅನುಭವ ಸಿಗುತ್ತದೆ ಎನ್ನಬಹುದು.

ಪ್ರೀತಿ ಹೇಗೆ ಶುರುವಾಗುತ್ತದೆ ಹಾಗೂ ಆ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳಲಾಗುತ್ತದೆ ಎಂಬುದನ್ನು ಈಗಾಗಲೇ ಸಾವಿರಾರು ಸಿನಿಮಾಗಳು ತೋರಿಸಿವೆ. ಆದರೆ ಆ ಪ್ರೀತಿ ಒಂದು ವೇಳೆ ಅಂತ್ಯವಾಗುವಂತಿದ್ದರೆ ಅದನ್ನು ಎಷ್ಟು ಗೌರವಯುತವಾಗಿ ಬ್ರೇಕಪ್ ಮಾಡಿಕೊಳ್ಳಬಹುದು ಎಂಬುದನ್ನು ತೆರೆ ಮೇಲೆ ತೋರಿಸುವ ಸಿನಿಮಾಗಳು ತೀರಾ ವಿರಳ. ಆ ರೀತಿಯ ಒಂದು ಅಪರೂಪದ ವಿಷಯವನ್ನು ಮಂಸೋರೆ ಅವರು ‘ದೂರ ತೀರ ಯಾನ’ ಸಿನಿಮಾದಲ್ಲಿ ಹೇಳಿದ್ದಾರೆ.

ದಂಪತಿ ಅಥವಾ ಪ್ರೇಮಿಗಳ ನಡುವಿನ ಹೊಂದಾಣಿಕೆಯ ಬದುಕಿನ ಬಗ್ಗೆ ಸಮಾಜದಲ್ಲಿ ಒಂದಷ್ಟು ಸಿದ್ಧ ಸೂತ್ರಗಳಿವೆ. ಆದರೆ ಆ ಸೂತ್ರಗಳನ್ನು ಪಾಲಿಸುವ ವ್ಯಕ್ತಿಗಳು ನಿಜವಾಗಿಯೂ ಖುಷಿಯಾಗಿ ಇರಲು ಸಾಧ್ಯವಾ ಎಂಬ ಪ್ರಶ್ನೆ ಎದುರಾಗುತ್ತದೆ. ಜೆನ್ ಜೀ ತಲೆಮಾರಿನವರು ಪ್ರಾಯಕ್ಕೆ ಬಂದಿರುವ ಈ ಕಾಲಘಟ್ಟದಲ್ಲಿ ಇದು ತುಂಬ ಪ್ರಸ್ತುತವಾದ ಪ್ರಶ್ನೆ ಎನಿಸಿಕೊಳ್ಳುತ್ತದೆ. ಅದಕ್ಕೆ ಉತ್ತರ ಹುಡುಕುವ ರೀತಿಯಲ್ಲಿ ‘ದೂರ ತೀರ ಯಾನ’ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ
Image
ಜಂಗಲ್ ಮಂಗಲ್ ವಿಮರ್ಶೆ: ಲಾಕ್​ ಡೌನ್ ಪ್ರೇಮಕಥೆ ನಡುವೆ ಒಂದಷ್ಟು ರೋಚಕತೆ
Image
Hebbuli Cut Review: ನಕ್ಕು ನಗಿಸುತ್ತಲೇ ಕರಾಳ ಸತ್ಯ ತೆರೆದಿಡುವ ಸಿನಿಮಾ
Image
Review: ನಗಿಸಿ, ಅಳಿಸಿ ಮನರಂಜನೆ ನೀಡುವ ‘ಸಿತಾರೆ ಜಮೀನ್ ಪರ್’
Image
‘ಎಡಗೈ’ಯಿಂದ ಸರಣಿ ಅಪಘಾತ; ಕ್ರೈಮ್​ನಲ್ಲೂ ನಗಿಸೋ ದಿಗಂತ

ಈ ಸಿನಿಮಾದ ಕಥೆ ಸರಳವಾಗಿದೆ. 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಪ್ರೇಮಿಗಳಿಗೆ ತಮ್ಮ ನಡುವೆ ಏನೋ ಹೊಂದಾಣಿಕೆಯ ಸಮಸ್ಯೆ ಎದುರಾಗಿದೆ ಎಂಬುದು ಅರಿವಿಗೆ ಬರುತ್ತದೆ. ಅದನ್ನು ಅರಿತುಕೊಳ್ಳಲು ಇಬ್ಬರೂ ಒಟ್ಟಿಗೆ ಕೆಲವು ದಿನಗಳಮಟ್ಟಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆ ಪ್ರವಾಸದ ಅಂತ್ಯದಲ್ಲಿ ಅವರು ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಜರ್ನಿಯಲ್ಲಿ ಅವರಿಗೆ ಸಾಕಷ್ಟು ವಿಷಯಗಳ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಅದೇನು ಎಂಬುದನ್ನು ಸಿನಿಮಾದಲ್ಲಿ ನೋಡಿ ತಿಳಿಯಬೇಕು.

ತುಂಬಾ ಕ್ಲಾಸ್ ಆದಂತಹ ರೀತಿಯಲ್ಲಿ ‘ದೂರ ತೀರ ಯಾನ’ ಸಿನಿಮಾ ಮೂಡಿಬಂದಿದೆ. ಸರಳ ಸಂಭಾಷಣೆಗಳ ಮೂಲಕ ವಿಷಯವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಆಗಿದೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಅವರ ಸಂಗೀತ ಈ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಇದೊಂದು ಜರ್ನಿ ಸಿನಿಮಾ ಆದ್ದರಿಂದ ಶೇಖರ್ ಚಂದ್ರ ಅವರ ಛಾಯಾಗ್ರಹಣದ ಕೆಲಸ ಕೂಡ ಎದ್ದು ಕಾಣಿಸಿದೆ. ಪ್ರಿಯಾಂಕಾ ಕುಮಾರ್ ಮತ್ತು ವಿಜಯ್ ಕೃಷ್ಣ ಅವರು ಇಡೀ ಸಿನಿಮಾದಲ್ಲಿ ಆವರಿಸಿದ್ದಾರೆ. ಸಹಜಾಭಿನಯದ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ‘ದೂರ ತೀರ ಯಾನ’ ಪಯಣ ಮತ್ತು ಪ್ರೇಮದ ಕತೆ: ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ

ಎಲ್ಲ ವರ್ಗದ ಪ್ರೇಕ್ಷಕರಿಗೆ ಈ ಸಿನಿಮಾದ ಕಥೆ ಕನೆಕ್ಟ್ ಆಗದೇ ಇರಬಹುದು. ಪಾತ್ರಗಳ ತೊಳಲಾಟ ಅಷ್ಟು ಗಂಭೀರವಲ್ಲ ಎನಿಸಬಹುದು. ನಿಧಾನಗತಿಯ ನಿರೂಪಣೆಯಿಂದ ತಾಳ್ಮೆಯ ಪರೀಕ್ಷೆಯೂ ಆಗಬಹುದು. ಇಂಥ ಕೆಲವು ಮೈನಸ್ ಅಂಶಗಳ ನಡುವೆಯೂ ಇಂದು ಅನುಭವ ನೀಡುವ ಸಿನಿಮಾವಾಗಿ ‘ದೂರ ತೀರ ಯಾನ’ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:42 pm, Fri, 11 July 25

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ