‘ಕ್ಲೈಮ್ಯಾಕ್ಸ್, ಬಿಜಿಎಂ ಇಡೀ ಚಿತ್ರದ ದಿಕ್ಕನ್ನೇ ಬದಲಿಸಿದೆ’; ‘ಜೈಲರ್’ ನೋಡಿದ ಅಭಿಮಾನಿಗಳು ಫಿದಾ

Jailer Movie Twitter Review: ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

‘ಕ್ಲೈಮ್ಯಾಕ್ಸ್, ಬಿಜಿಎಂ ಇಡೀ ಚಿತ್ರದ ದಿಕ್ಕನ್ನೇ ಬದಲಿಸಿದೆ’; ‘ಜೈಲರ್’ ನೋಡಿದ ಅಭಿಮಾನಿಗಳು ಫಿದಾ
ಶಿವಣ್ಣ-ರಜನಿ
Follow us
|

Updated on:Aug 10, 2023 | 12:14 PM

‘ಜೈಲರ್’ ಸಿನಿಮಾ (Jailer Movie) ಬಗ್ಗೆ ಸೃಷ್ಟಿ ಆಗಿದ್ದ ಕ್ರೇಜ್ ಅಷ್ಟಿಷ್ಟಲ್ಲ. ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್​, ತಮನ್ನಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಇಂದು (ಆಗಸ್ಟ್ 10) ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ರಜನಿಕಾಂತ್ (Rajanikanth) ಅಭಿಮಾನಿಗಳು ಚಿತ್ರವನ್ನು ನೋಡಿ ಸಖತ್ ಖುಷಿಪಟ್ಟಿದ್ದಾರೆ. ಎರಡು ಶೇಡ್​ಗಳ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ನೋಡಿದ ಟ್ವಿಟರ್ ಮಂದಿ ಏನು ಹೇಳಿದ್ರು ಅನ್ನೋದಕ್ಕೆ ಇಲ್ಲಿದೆ ಉತ್ತರ.

ರಜನಿಕಾಂತ್ ಅವರ ನಟನೆಯ ‘ಅಣ್ಣಾಥೆ’ ಸಿನಿಮಾ 2021ರಲ್ಲಿ ರಿಲೀಸ್ ಆಯಿತು. ಎರಡು ವರ್ಷಗಳ ಬಳಿಕ ರಜನಿಕಾಂತ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಕಾಂಬೋ ವರ್ಕ್​ ಆಗಿದೆ. ರಜನಿಕಾಂತ್, ಶಿವಣ್ಣ ನಟನೆ ಇಷ್ಟವಾಗಿದೆ.

ರಜನಿಕಾಂತ್ ಕಂಬ್ಯಾಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಅವರು ಮಾಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 70ರ ವಯಸ್ಸಲ್ಲೂ ಅವರು ಈ ರೀತಿ ನಟನೆ ಮಾಡಿದ್ದನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಕೂಡ ಗಮನ ಸೆಳೆದಿದೆ.

ಇದನ್ನೂ ಓದಿ: Jailer Movie Review: ಇದು ಮಾಸ್ ಮಸಾಲ ‘ಜೈಲರ್’; ಇಷ್ಟವಾಗುತ್ತೆ ರಜನಿ, ಶಿವಣ್ಣನ ಖದರ್

ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ‘ವಿಕ್ರಮ್’ ಚಿತ್ರದಲ್ಲಿ ಇದು ಸಾಬೀತಾಗಿತ್ತು. ಈಗ ಅವರು ತಮ್ಮನ್ನು ತಾವು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ. ಅವರ ಹಿನ್ನೆಲೆ ಸಂಗೀತಕ್ಕೆ ಟ್ವಿಟರ್​ನಲ್ಲಿ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ‘ಕ್ಲೈಮ್ಯಾಕ್ಸ್​ ಹಾಗೂ ಚಿತ್ರದ ಬಿಜಿಎಂ ಚಿತ್ರದ ದಿಕ್ಕು ಬದಲಿಸಿದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ಇದೊಂದು ಪಕ್ಕಾ ರಜನಿ ಸಿನಿಮಾ. ಥಿಯೇಟರ್​ನಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿಯೋದು ಪಕ್ಕಾ’ ಎಂದು ಕೆಲವರು ಹೇಳಿದ್ದಾರೆ. ‘ಶಿವರಾಜ್​ಕುಮಾರ್ ಅವರು ಇದ್ದಷ್ಟು ಹೊತ್ತು ಎಲ್ಲರನ್ನೂ ಖುಷಿಪಡಿಸುತ್ತಾರೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ‘ಬ್ಲಾಕ್​ಬಸ್ಟರ್’ ಎಂದು ಘೋಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:03 pm, Thu, 10 August 23

ತಾಜಾ ಸುದ್ದಿ
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್