AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ‘ನನ್ನ ಬಾಳಲ್ಲೂ ಅಂಥ ಪುಟಗಳಿವೆ’; ನಗುಮುಖದ ಸುಂದರಿ ಮೃಣಾಲ್ ಠಾಕೂರ್ ಕಣ್ಣೀರು

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರ ಬಾಳಲ್ಲೂ ಒಂದಷ್ಟು ಕಹಿಘಟನೆಗಳು ನಡೆದಿರುತ್ತವೆ. ಆ ದಿನಗಳಿಗೆ ಮರಳಿ ಹೋಗಲು ಅನೇಕರಿಗೆ ಇಷ್ಟವಿರುವುದಿಲ್ಲ. ಮೃಣಾಲ್ ಬದುಕಲ್ಲೂ ಅಂಥ ದಿನಗಳಿವೆ.

Mrunal Thakur: ‘ನನ್ನ ಬಾಳಲ್ಲೂ ಅಂಥ ಪುಟಗಳಿವೆ’; ನಗುಮುಖದ ಸುಂದರಿ ಮೃಣಾಲ್ ಠಾಕೂರ್ ಕಣ್ಣೀರು
ರಾಜೇಶ್ ದುಗ್ಗುಮನೆ
|

Updated on:Mar 22, 2023 | 7:37 AM

Share

ನಟಿ ಮೃಣಾಲ್ ಠಾಕೂರ್ (Mrunal Thakur) ಅವರಿಗೆ ‘ಸೀತಾ ರಾಮಂ’ ಸಿನಿಮಾದಿಂದ ದೊಡ್ಡ ಜನಪ್ರಿಯತೆ ಸಿಕ್ಕಿದೆ. ಅವರು ಈ ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲ ಬಾಕ್ಸ್​ ಆಫೀಸ್​ನಲ್ಲೂ ಗೆದ್ದಿದೆ. ಈಗ ಅವರು ಕಣ್ಣೀರು ಹಾಕುತ್ತಿರುವ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ಇದು ಅನೇಕರಿಗೆ ಆತಂಕ ಮೂಡಿಸಿದೆ.  ತಾವು ಅಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಅಂದಹಾಗೆ ಮೃಣಾಲ್​ ಕಣ್ಣೀರು ಹಾಕುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದು ಸಿಂಪತಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರ ಬಾಳಲ್ಲೂ ಒಂದಷ್ಟು ಕಹಿಘಟನೆಗಳು ನಡೆದಿರುತ್ತವೆ. ಆ ದಿನಗಳಿಗೆ ಮರಳಿ ಹೋಗಲು ಅನೇಕರಿಗೆ ಇಷ್ಟವಿರುವುದಿಲ್ಲ. ಹೊರಗಿನಿಂದ ನೋಡುವವರಿಗೆ ಸೆಲೆಬ್ರಿಟಿಗಳಿಗೆ ಕಷ್ಟವೇ ಇರುವುದಿಲ್ಲ ಎನ್ನುವ ಭಾವನೆ ಇರುತ್ತದೆ. ಆದರೆ, ಅಸಲಿಗೆ ಹಾಗಿರುವುದಿಲ್ಲ. ಅನೇಕ ಸೆಲೆಬ್ರಿಟಿಗಳು ತಮ್ಮ ನೋವನ್ನು ಸಮಾಜದ ಎದುರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಮೃಣಾಲ್ ಇದಕ್ಕೆ ಭಿನ್ನ. ಅವರು ಸದ್ಯ ಹಂಚಿಕೊಂಡಿರೋ ಫೋಟೋ ವೈರಲ್ ಆಗಿದೆ.

ಅಳುತ್ತಿರುವ ಫೋಟೋನ ಸ್ಟೇಟಸ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ಅದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ‘ನಿನ್ನೆ ಕಠಿಣವಾಗಿತ್ತು. ಆದರೆ ಇಂದು ನಾನು ಬಲಶಾಲಿ, ಬುದ್ಧಿವಂತೆ ಮತ್ತು ಸಂತೋಷವಾಗಿದ್ದೇನೆ. ಪ್ರತಿಯೊಬ್ಬರ ಕಥೆಗಳಲ್ಲೂ ದೊಡ್ಡದಾಗಿ ಓದಲಾಗದ ಒಂದಷ್ಟು ಪುಟಗಳು ಇದ್ದೇ ಇರುತ್ತದೆ. ಆದರೆ, ನಾನು ಆ ಪುಟಗಳನ್ನು ಏರು ಧ್ವನಿಯಲ್ಲಿ ಓದುತ್ತಿದ್ದೇನೆ. ನಾನು ಕಲಿತ ಪಾಠವನ್ನು ಯಾರಾದರೂ ಕಲಿಯಬೇಕಾಗಿ  ಬರಬಹುದು. ನಿಷ್ಕಪಟ ಮತ್ತು ದುರ್ಬಲವಾಗಿರುವುದು ಒಳ್ಳೆಯದೇ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಟಿ ಮೃಣಾಲ್ ಠಾಕೂರ್​​ಗೆ ಬಂತು ಮದುವೆ ಪ್ರಪೋಸಲ್​; ಒಂದೇ ಮಾತಲ್ಲಿ ರಿಜೆಕ್ಟ್ ಮಾಡಿದ ನಟಿ

ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಮೃಣಾಲ್, ಕಣ್ಣೀರು ಹಾಕುತ್ತಿರುವುದು ಹಳೆಯ ಫೋಟೋ ಎಂದು ಹೇಳಿದ್ದಾರೆ. ತುಂಬಾನೇ ಕಷ್ಟದ ದಿನಗಳಲ್ಲಿ ತೆಗೆದ ಫೋಟೋ ಎಂಬುದನ್ನು ಅವರು ವಿವರಿಸಿದ್ದಾರೆ. ಜೊತೆಗೆ ಇಂದು ಖುಷಿಯಲ್ಲಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಮೃಣಾಲ್ ಠಾಕೂರ್ ಎಷ್ಟೊಂದು ಬೋಲ್ಡ್

ತೆಲುಗಿನ ‘ಸೀತಾ ರಾಮಂ’ ಯಶಸ್ಸಿನ ನಂತರದಲ್ಲಿ ಅವರಿಗೆ ಸಾಕಷ್ಟು ತೆಲುಗು ಸಿನಿಮಾ ಆಫರ್​ಗಳು ಬರುತ್ತಿವೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ನಟಿ ಇದನ್ನು ಸ್ಪಷ್ಟಪಡಿಸಿಲ್ಲ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಸೀತಾ ರಾಮಂ’ ಬಳಿಕ ಹಲವು ಆಫರ್ ಅವರ ಹುಡುಕಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:38 am, Wed, 22 March 23