ಸಿನಿಮಾ ಸೋತು ಸುಣ್ಣವಾದರೂ ಕಮಲ್ ಹಾಸನ್ ಚಿತ್ರಕ್ಕೆ ತಪ್ಪಿಲ್ಲ ಕಾನೂನು ಹೋರಾಟ

‘ಇಂಡಿಯನ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ತಲುಪಲು ವಿಫಲವಾಗಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುವುದರ ಒಳಗೆ ಒಟಿಟಿಗೆ ಕಾಲಿಟ್ಟಿದೆ. ಚಿತ್ರಕ್ಕೆ ಈಗ ಹೊಸ ತಲೆನೋವು ಆರಂಭ ಆಗಿದೆ. ಕಾನೂನು ಹೋರಾಟಕ್ಕೆ ತಂಡ ರೆಡಿ ಆಗಬೇಕಿದೆ.

ಸಿನಿಮಾ ಸೋತು ಸುಣ್ಣವಾದರೂ ಕಮಲ್ ಹಾಸನ್ ಚಿತ್ರಕ್ಕೆ ತಪ್ಪಿಲ್ಲ ಕಾನೂನು ಹೋರಾಟ
ಕಮಲ್ ಹಾಸನ್
Follow us
ರಾಜೇಶ್ ದುಗ್ಗುಮನೆ
|

Updated on: Aug 30, 2024 | 8:40 AM

‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯವಾಗಿ ಸೋತಿದೆ. ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಟ್ರೋಲ್​ಗಳಿಗೆ ಆಹಾರ ಆಗಿದೆ. ಇದು ಶಂಕರ್ ಅವರ ಖ್ಯಾತಿಗೆ ಪೆಟ್ಟು ಕೊಟ್ಟಿದೆ. ಈ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆದ ತಿಂಗಳ ಒಳಗೆ ಒಟಿಟಿಗೆ ರಿಲೀಸ್ ಆಗಿದೆ. ಒಟಿಟಿಯಲ್ಲೂ ಜನರು ಸಿನಿಮಾ ಅಷ್ಟಾಗಿಯೇನು ಮೆಚ್ಚಿಕೊಂಡಿಲ್ಲ. ಇದು ಮುಗಿದ ಅಧ್ಯಾಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಚಿತ್ರಕ್ಕೆ ಈಗ ಹೊಸ ತಲೆನೋವು ಆರಂಭ ಆಗಿದೆ. ಕಾನೂನು ಹೋರಾಟಕ್ಕೆ ತಂಡ ರೆಡಿ ಆಗಬೇಕಿದೆ.

ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್ ಅವರು ‘ಇಂಡಿಯನ್ 2’ ತಂಡಕ್ಕೆ ನೋಟಿಸ್ ಕಳುಹಿಸಿದ್ದಾರೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನಿಯಮ ಏಕೆ ಪಾಲನೆ ಮಾಡಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ. ಸಾಮಾನ್ಯವಾಗಿ ಥಿಯೇಟರ್​ನಲ್ಲಿ ರಿಲೀಸ್ ಮಾಡಿದ ಸಿನಿಮಾನ ಆದಷ್ಟು ಬೇಗ ಒಟಿಟಿಗೆ ತಂದರೆ ಅವರಿಂದ ಹೆಚ್ಚಿನ ಹಣ ಸಿಗುತ್ತದೆ. ಈ ಕಾರಣಕ್ಕೆ ‘ಇಂಡಿಯನ್ 2’ ನಿರ್ಮಾಪಕರು ತಿಂಗಳ ಒಳಗೆ ಸಿನಿಮಾನ ಒಟಿಟಿಗೆ ತಂದಿದ್ದರು.

ಬಾಲಿವುಡ್ ಸಿನಿಮಾಗಳು ರಿಲೀಸ್ ಆದ 8 ವಾರಗಳ ನಂತರವೇ ಒಟಿಟಿಗೆ ತೆರೆಗೆ ತರಬೇಕು. ಇದು ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್​ ನಡುವೆ ಆದ ಒಪ್ಪಂದ. ಒಂದೊಮ್ಮೆ ಈ ನಿಯಮಕ್ಕೆ ಒಪ್ಪಿಲ್ಲ ಎಂದರೆ ಅವರನ್ನು ಪಿವಿಆರ್​, ಐನಾಕ್ಸ್, ಸಿನಿಪೊಲಿಸ್ ಸೇರಿ ಎಲ್ಲಾ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾನ ಪ್ರದರ್ಶನ ಮಾಡುವುದಿಲ್ಲ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್​ನವರು ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಕ್ಕೆ ಇದೆಂಥಾ ಸ್ಥಿತಿ

ಅಂದಹಾಗೆ ‘ಇಂಡಿಯನ್ 2’ ತಮಿಳು ಸಿನಿಮಾ. ಇದು ಹಿಂದಿಗೂ ಡಬ್ ಆಗಿ ರಿಲೀಸ್ ಆಗಿದೆ ಅಷ್ಟೇ. ಈ ನಿಯಮ ಮುಂಬೈ ಭಾಗದಲ್ಲಿ ಮಾತ್ರ ಇದೆ. ಹೀಗಾಗಿ, ಇದು ತಂಡಕ್ಕೆ ಹೆಚ್ಚು ತೊಂದರೆ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಸದ್ಯ ನಿರ್ಮಾಪಕರು ಸೋಲಿನ ನೋವಿನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.