65 ಕೋಟಿ ರೂ. ಹಗರಣ; ಕನ್ನಡದ ‘ಜ್ಯೂಲಿ’ ನಟ ಡೀನೋ ಮೋರಿಯಾ ಮೇಲೆ ಇಡಿ ದಾಳಿ

ಮುಂಬೈನ ಮಿಥಿ ನದಿ ಹೂಳು ತೆಗೆಯುವ ಯೋಜನೆಯಲ್ಲಿ ಅಕ್ರಮ ನಡೆದಿದೆ.ಇದರ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಬಹುಭಾಷಾ ನಟ ಡೀನೋ ಮೋರಿಯಾ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 65 ಕೋಟಿ ರೂಪಾಯಿಗಳ ಅಕ್ರಮದ ಆರೋಪದಲ್ಲಿ ಡೀನೋ ಅವರ ಹಣಕಾಸಿನ ವ್ಯವಹಾರಗಳನ್ನು ಇಡಿ ತನಿಖೆ ಮಾಡುತ್ತಿದೆ.

65 ಕೋಟಿ ರೂ. ಹಗರಣ; ಕನ್ನಡದ ‘ಜ್ಯೂಲಿ’ ನಟ ಡೀನೋ ಮೋರಿಯಾ ಮೇಲೆ ಇಡಿ ದಾಳಿ
ಡೀನೋ

Updated on: Jun 06, 2025 | 12:48 PM

ಮುಂಬೈನ ಮಿಥಿ ನದಿ ಹೂಳು ತೆಗೆಯುವ ಯೋಜನೆಯಲ್ಲಿ ನಡೆದ ಅಕ್ರಮದಲ್ಲಿ ಬಹುಭಾಷಾ ನಟ ಡೀನೋ ಮೋರಿಯಾ (Dino Morea) ಅವರ ಮುಂಬೈನ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಇಂದು (ಜೂನ್ 6) ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದಲ್ಲಿ ಈ ಮೊದಲು ಮುಂಬೈ ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದರು. ಈಗ ಇಡಿ ದಾಳಿಯಿಂದ ಅವರು ಕಂಗೆಟ್ಟಿದ್ದಾರೆ.

ಮಿಥಿ ನದಿ ಹೂಳು ತೆಗೆಯುವ ಪ್ರಕರಣ ತುಂಬಾನೇ ದೊಡ್ಡದಿದೆ. ಬರೋಬ್ಬರಿ 65 ಕೋಟಿ ರೂಪಾಯಿ ಅಕ್ರಮ ಇಲ್ಲಿ ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ಮುಂಬೈ ಹಾಗೂ ಕೇರಳದ 15 ಕಡೆಗಳಲ್ಲಿ ಇಡಿ ದಾಳಿ ನಡೆಸಿದೆ. ಈ ಪೈಕಿ ನಟ ಡೀನೋ ಮೋರಿಯಾ ಅವರ ನಿವಾಸ, ಬಾಂಬೆ ನಗರದ ಸಹಾಯಕ ಇಂಜಿಯರ್ ಪ್ರಶಾಂತ್ ರಾಮುಗಡೆ ಅವರ ಮನೆ ಸೇರಿದೆ.  ಡೀನೋ ಮೋರಿಯಾ ಅವರನ್ನು ಶಿವಸೇನೆ (ಠಾಕ್ರೆ ಬಣ) ಯುವ ನಾಯಕ ಮತ್ತು ಶಾಸಕ ಆದಿತ್ಯ ಠಾಕ್ರೆ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲಾಗಿದೆ.

ಡೀನೋಗೂ ಈ ಪ್ರಕರಣಕ್ಕೂ ಏನು ಸಂಬಂಧ?

ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಕೇತನ್ ಕದಮ್ ಮತ್ತು ಡೀನೋ ನಡುವೆ 2019ರಿಂದ 2022ರ ನಡುವೆ ಹಲವು ಹಣಕಾಸಿನ ವಹಿವಾಟುಗಳು ನಡೆದಿವೆ. ಆರ್ಥಿಕ ಅಪರಾಧಗಳ ವಿಭಾಗವು ಈ ವಿಷಯವನ್ನು ತನಿಖೆ ಮಾಡುತ್ತಿದೆ. ಆರ್ಥಿಕ ಅಪರಾಧಗಳ ವಿಭಾಗವು ಡೀನೋ ಮೋರಿಯಾ ಮತ್ತು ಅವರ ಸಹೋದರ ಸ್ಯಾಂಟಿನೊ ಅವರ ಬಳಿ ಕೆಲವು ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿತ್ತು. ಈ ವೇಳೆ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಇದನ್ನೂ ಓದಿ
ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು
ರಕ್ಷಿತ್ ಶೆಟ್ಟಿ ಜನ್ಮದಿನ: ನಟನ ಎದುರು ಇರೋ ಪ್ರಶ್ನೆಗೆ ಸಿಗುತ್ತಾ ಉತ್ತರ?
‘ಸರಿಗಮಪ’ದಲ್ಲಿ ಇತಿಹಾಸ ನಿರ್ಮಿಸಿದ ಮಹಿಳಾ ಸ್ಪರ್ಧಿಗಳು; ವಿನ್ನರ್ ಯಾರು?
ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ

ಏನಿದು ಹಗರಣ?

ಮುಂಬೈನ ಮಿಥಿ ನದಿಯಿಂದ ಹೂಳು ತೆಗೆಯುವ ಈ ಯೋಜನೆ ಕಳೆದ 20 ವರ್ಷಗಳಿಂದ ನಡೆಯುತ್ತಿದೆ. ಇದಕ್ಕಾಗಿ 1100 ಕೋಟಿ ರೂ.ಗಳ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಒಟ್ಟು 18 ಗುತ್ತಿಗೆದಾರರಿಗೆ ಈ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಅವರಲ್ಲಿ ಹಲವರನ್ನು ಪ್ರಶ್ನಿಸಲಾಯಿತು. ಈ ಹಗರಣದಲ್ಲಿ ಕೆಲವು ಅಕ್ರಮ ನಡೆದಿದ್ದು, ಇದರಿಂದ ಮುಂಬೈ ಪಾಲಿಕೆಗೆ 65.54 ಕೋಟಿ ರೂ ನಷ್ಟ ಉಂಟಾಗಿದೆ ಎಂಬ ಆರೋಪವಿದೆ. ಈಗ ಇಡಿ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದೆ. ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಸರಿಗಮಪ ಸೀಸನ್ 21’ ವಿನ್ನರ್ ಆದ ಶಿವಾನಿ ಸ್ವಾಮಿ; ಉಳಿದವರಿಗೆ ಎಷ್ಟನೇ ಸ್ಥಾನ?

ಕನ್ನಡದಲ್ಲೂ ನಟನೆ

ಡೀನೋ ಮೋರಿಯಾ ಬೆಂಗಳೂರು ಮೂಲವನ್ನು ಹೊಂದಿದ್ದಾರೆ. ಅವರು ಹುಟ್ಟಿದ್ದು ಇಲ್ಲಿಯೇ. ಅವರು ನಟ, ನಿರ್ಮಾಪಕ ಹಾಗೂ ಮಾಡೆಲ್. ಅವರು ಕನ್ನಡದಲ್ಲಿ ‘ಜ್ಯೂಲಿ’ ಹೆಸರಿನ ಚಿತ್ರ ಮಾಡಿದ್ದರು. ರಮ್ಯಾ ಈ ಚಿತ್ರಕ್ಕೆ ನಾಯಕಿ. ಹಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.