AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು

Muttiah Muralitharan: ಮುತ್ತಯ್ಯ ಮುರಳೀಧರನ್ ಜೀವನ ಆಧರಸಿದ '800' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರದಲ್ಲಿ ನಿತರಾಗಿರುವ ಮುರಳೀಧರನ್ ಹೈದರಾಬಾದ್​ನಲ್ಲಿ ಸಿನಿಮಾ, ಕ್ರಿಕೆಟ್ ಇನ್ನು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಸ್ಟಾರ್​ಗಳ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಯಾರಾಗಬೇಕು: ಮುರಳೀಧರನ್ ಹೆಸರಿದ್ದು ಇವರನ್ನು
ಮಂಜುನಾಥ ಸಿ.
|

Updated on: Sep 26, 2023 | 4:34 PM

Share

ವಿಶ್ವ ಕ್ರಿಕೆಟ್ ಕಂಡ ಈವರೆಗಿನ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (Muttiah muralitharan). ಆದರೆ ಕ್ರಿಕೆಟ್ ಮೈದಾನದಲ್ಲಿ ಮಾತ್ರವೇ ಮುರಳೀಧರನ್​ ಅವರನ್ನು ಕಂಡ ವಿಶ್ವಕ್ರಿಕೆಟ್ ಪ್ರೇಮಿಗಳ ಅವರ ಜೀವನದ ಹೋರಾಟದ ಬಗ್ಗೆ ಅಷ್ಟಾಗಿ ಅರಿವಿಲ್ಲ. ಬಹಳ ಸಂಕಷ್ಟದ ಬಾಲ್ಯ, ಯೌವ್ವನ ಕಳೆದ ಮುರಳೀಧರನ್, ಇಂದು ವಿಶ್ವಶ್ವೇಷ್ಠನಾಗಿ ಬೆಳೆದು ನಿಂತಿದ್ದಾರೆ. ಮುರಳೀಧರನ್ ಅವರ ಜೀವನ ಕುರಿತಾದ ಸಿನಿಮಾ ‘800’ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದು, ಭಾರತದ ಹಲವು ನಗರಗಳಲ್ಲಿ ಸಿನಿಮಾದ ಪ್ರಚಾರದಲ್ಲಿ ಮುರಳೀಧರನ್ ನಿರತರಾಗಿದ್ದಾರೆ.

ತಮ್ಮ ಜೀವನ ಆಧರಿಸಿದ ‘800’ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್​ಗೆ ಆಗಮಿಸಿದ್ದ ಮುರಳೀಧರನ್ ಅವರಿಗೆ ಮತ್ತೊಬ್ಬ ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಜೊತೆಯಾಗಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾ, ಕ್ರಿಕೆಟ್, ಮುಂದೆ ಬರಲಿರುವ ವಿಶ್ವಕಪ್, ಐಪಿಎಲ್, ಹೈದರಾಬಾದ್ ತಂಡ ಇನ್ನೂ ಹಲವು ವಿಷಯಗಳ ಬಗ್ಗೆ ಮುರಳೀಧರನ್ ಮಾತನಾಡಿದರು.

ಭಾರತದ ಸಿನಿಮಾಗಳನ್ನು ವಿಶೇವಾಗಿ ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಮುರಳೀಧರನ್​ಗೆ, ತೆಲುಗು ಸಿನಿಮಾಗಳ ನಾಯಕರ ತಂಡ ಮಾಡಿದರೆ ಯಾರನ್ನು ಸೇರಿಸಿಕೊಳ್ಳುತ್ತೀರಿ, ಯಾರನ್ನು ಕ್ಯಾಪ್ಟನ್ ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಮುರಳೀಧರನ್, ”ನಾನು ವಿಕ್ಟರಿ ವೆಂಕಟೇಶ್ ಅವರನ್ನು ತಂಡದ ನಾಯಕನನ್ನಾಗಿ ಮಾಡುತ್ತೀನಿ” ಎಂದರು. ತಮ್ಮ ನಿರ್ಧಾರಕ್ಕೆ ಕಾರಣವನ್ನೂ ನೀಡಿದರು.

ಇದನ್ನೂ ಓದಿ:ಚಾಮರಾಜನಗರದಲ್ಲಿಯೂ ಸಾಫ್ಟ್ ಡ್ರಿಂಕ್ ಫ್ಯಾಕ್ಟರಿ ಆರಂಭಿಸಲಿದ್ದಾರೆ ಶ್ರೀಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್

”ವಿಕ್ಟರಿ ವೆಂಕಟೇಶ್ ಕ್ರಿಕೆಟ್​ ಬಹಳ ದೊಡ್ಡ ಫ್ಯಾನ್. ಐಪಿಎಲ್​ನಲ್ಲಿ ಎಸ್​ಆರ್​ಎಚ್ ತಂಡದ ಮ್ಯಾಚ್​ಗಳನ್ನು ಅವರು ತಪ್ಪಿಸುತ್ತಿರಲಿಲ್ಲ. ಹಾಗಾಗಿ ಅವರೇ ಕ್ಯಾಪ್ಟನ್ ಆದರೆ ಸೂಕ್ತ. ನಾನು ತೆಲುಗಿನ ಹಲವು ನಟರನ್ನು ಭೇಟಿ ಆಗಿದ್ದೀನಿ, ಅವರೊಟ್ಟಿಗೆ ಮಾತನಾಡಿದ್ದೀನಿ. ಹಾಗಾಗಿ ತೆಲುಗಿನ ಎಲ್ಲ ದೊಡ್ಡ ನಟರನ್ನು ತಂಡಕ್ಕೆ ಸೇರಿಸುತ್ತೀನಿ. ಜೂ ಎನ್​ಟಿಆರ್, ರಾಮ್ ಚರಣ್, ಪವನ್ ಎಲ್ಲರನ್ನೂ ಸೇರಿಸುತ್ತೀನಿ” ಎಂದರು.

ತಾವು ಹಲವು ತೆಲುಗು ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ ಮುರಳೀಧರನ್, ”ನನಗೆ ‘ಜರ್ಸಿ’ ಸಿನಿಮಾ ಬಹಳ ಇಷ್ಟವಾಯ್ತು. ನಾನಿ ಅಭಿನಯವೂ ನನಗೆ ಬಹಳ ಇಷ್ಟವಾಯ್ತು. ಅವರನ್ನು ಲಕ್ಷ್ಮಣ್ ಅವರೇ ನನಗೆ ಪರಿಚಯಿಸಿದ್ದರು. ಅವರೊಟ್ಟಿಗೆ ಫೋನ್​ನಲ್ಲಿ ಸಹ ಮಾತನಾಡಿದ್ದೇನೆ. ಅವರ ನಟನೆಯೂ ನನಗೆ ಇಷ್ಟ” ಎಂದರು ಮುರಳೀಧರನ್.

ಮುರಳೀಧರನ್ ಜೀವನ ಆಧರಿಸಿದ ‘800’ ಸಿನಿಮಾ ಅಕ್ಟೋಬರ್ 6 ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಮುರಳೀಧರನ್​ನ ಬಾಲ್ಯ ಹಾಗೂ ಅವರ ಕ್ರಿಕೆಟಿಂಗ್ ಜೀವನದ ಮೇಲೆ ಆಧರಿಸಿದೆ. ಅವರು ಮೈದಾನದ ಒಳಗೆ, ಮೈದಾನದ ಹೊರಗೆ ಎದುರಿಸಿದ ಸಮಸ್ಯೆಗಳ ಮೇಲೆ ಸಿನಿಮಾ ಆಧರಿತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು