‘ನನ್ನ ಲುಕ್ಗೆ ಮಫ್ತಿ ಸಿನಿಮಾ ಸ್ಫೂರ್ತಿ’; ಶಿವಣ್ಣನ ಎದುರೇ ಹೇಳಿದ ಬಾಲಯ್ಯ
ನಂದಮೂರಿ ಬಾಲಕೃಷ್ಣರ 'ಅಖಂಡ 2' ಟ್ರೇಲರ್ ಲಾಂಚ್ ಚಿಂತಾಮಣಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಶಿವರಾಜ್‌ಕುಮಾರ್ ಆಗಮಿಸಿದ್ದರು. ಈ ವೇಳೆ ಅವರು ತಮ್ಮ 'ವೀರ ಸಿಂಹ ರೆಡ್ಡಿ' ಸಿನಿಮಾದ ಲುಕ್ ಶಿವರಾಜ್‌ಕುಮಾರ್‌ರ 'ಮಫ್ತಿ' ಚಿತ್ರದಿಂದ ಪ್ರೇರಿತ ಎಂದು ಬಹಿರಂಗಪಡಿಸಿದರು. ಇಬ್ಬರು ನಟರ ನಡುವಿನ ಆತ್ಮೀಯ ಬಾಂಧವ್ಯ ಈ ಸಂದರ್ಭದಲ್ಲಿ ಎದ್ದು ಕಾಣಿಸಿತು.

ನಂದಮೂರಿ ಬಾಲಕೃಷ್ಣ ಅವರು ಆ್ಯಕ್ಷನ್ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಮೊದಲು ತೆರೆಗೆ ಬಂದ ‘ಅಖಂಡ’ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅವರು ‘ಅಖಂಡ 2’ ಸಿನಿಮಾ ಮಾಡಿದ್ದಾರೆ. ಡಿಸೆಂಬರ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ಲಾಂಚ್ ಈ ವೆಂಟ್ ನವೆಂಬರ್ 21ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಬಾಲಯ್ಯ ಅವರು ವೇದಿಕೆಯ ಮೇಲೆ ಒಂದು ಅಚ್ಚರಿಯ ವಿಷಯ ಹೇಳಿದರು.
ಶಿವಣ್ಣ ಹಾಗೂ ಬಾಲಯ್ಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣದಿಂದಲೇ ಈವೆಂಟ್ಗೆ ಅತಿಥಿಯಾಗಿ ತೆರಳಲು ಶಿವಣ್ಣ ಒಪ್ಪಿಕೊಂಡರು. ವೇದಿಕೆ ಮೇಲೆ ಇಬ್ಬರೂ ತಮ್ಮ ನಡುವೆ ಎಂತಹ ಆತ್ಮೀಯತೆ ಇದೆ ಎಂಬುದನ್ನು ತೋರಿಸಿದರು. ಶಿವರಾಜ್‌ಕುಮಾರ್ ಅವರ ಎದುರು ಬಾಲಯ್ಯ ಒಂದು ವಿಶೇಷ ಮಾಹಿತಿ ತೆರೆದಿಟ್ಟರು.
View this post on Instagram
2023ರಲ್ಲಿ ಬಂದ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ಬಾಲಯ್ಯ ಲುಂಗಿ ಉಟ್ಟು, ಕಪ್ಪು ಶರ್ಟ್ ಹಾಕಿ ಕಾಣಿಸಿಕೊಳ್ಳುತ್ತಾರೆ. ಈ ಲುಕ್ ನೋಡಿದ ಅನೇಕರಿಗೆ ಶಿವರಾಜ್‌ಕುಮಾರ್ ಅವರ ‘ಮಫ್ತಿ’ ಸಿನಿಮಾ ನೆನಪಾಗಿದೆ. ಇದು ಮಫ್ತಿ ಸಿನಿಮಾದಿಂದ ಸ್ಫೂರ್ತಿ ತೆಗೆದುಕೊಂಡಿದ್ದು ಎಂದು ಬಾಲಯ್ಯ ಕೂಡ ಒಪ್ಪಿಕೊಂಡರು.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಾಲಯ್ಯ ಮಗಳು ತೇಜಸ್ವಿನಿ
‘ವೀರ ಸಿಂಹ ರೆಡ್ಡಿ ಸಿನಿಮಾ ಮಫ್ತಿ ಸಿನಿಮಾದ ಗೆಟಪ್ನ ಕಾಪಿ ಮಾಡಿದ್ದೇನೆ. ಕಲಾವಿದರನ್ನು ನೋಡಿದಾಗ ನಾವು ಸ್ಫೂರ್ತಿ ಪಡೆಯುತ್ತೇವೆ’ ಎಂದು ಬಾಲಯ್ಯ ಒಪ್ಪಿಕೊಂಡರು. ಆ ಬಳಿಕ ಶಿವರಾಜ್‌ಕುಮಾರ್ ಅವರು ಕನ್ನಡದ ಒಂದಷ್ಟು ಡೈಲಾಗ್ ಹೇಳಿದರು. ನಂತರ ಬಾಲಯ್ಯ ಅವರು ತಮ್ಮ ಸ್ಟೈಲ್ನಲ್ಲಿ ಡೈಲಾಗ್ ಬಿಟ್ಟರು. ಇದು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




