AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮನ ಅದೃಷ್ಟ ಅಣ್ಣನಿಗೂ ಸೋಕಿತೆ, ಸಾಲು ಸಾಲು ಸಿನಿಮಾ ಗಿಟ್ಟಿಸಿಕೊಳ್ಳುತ್ತರುವ ಕಲ್ಯಾಣ್ ರಾಮ್

Kalyan Ram: ತಮ್ಮ ಜೂ ಎನ್​ಟಿಆರ್ ಅದೃಷ್ಟ ಅಣ್ಣ ಕಲ್ಯಾಣ್ ರಾಮ್​ಗೂ ಸೋಕಿದಂತಿದೆ. ತಮ್ಮ ವೃತ್ತಿ ಜೀವನದ ಅತ್ಯಂತ ದೊಡ್ಡ ಬಜೆಟ್ ಸಿನಿಮಾವನ್ನು ಕಲ್ಯಾಣ್ ಒಪ್ಪಿಕೊಂಡಿದ್ದಾರೆ.

ತಮ್ಮನ ಅದೃಷ್ಟ ಅಣ್ಣನಿಗೂ ಸೋಕಿತೆ, ಸಾಲು ಸಾಲು ಸಿನಿಮಾ ಗಿಟ್ಟಿಸಿಕೊಳ್ಳುತ್ತರುವ ಕಲ್ಯಾಣ್ ರಾಮ್
ಕಲ್ಯಾಣ್-ಜೂ ಎನ್​ಟಿಆರ್
ಮಂಜುನಾಥ ಸಿ.
| Edited By: |

Updated on:Jul 07, 2023 | 6:52 AM

Share

ಜೂ ಎನ್​ಟಿಆರ್ (Jr NTR) ತೆಲುಗಿನ ಸ್ಟಾರ್ ನಟ. ಆರ್​ಆರ್​ಆರ್ (RRR) ಸಿನಿಮಾದ ಬಳಿಕ ಜೂ ಎನ್​ಟಿಆರ್ ಮಾರುಕಟ್ಟೆ ಹತ್ತುಪಟ್ಟಾಗಿದೆ. ತೆಲುಗು ಮಾತ್ರವೇ ಅಲ್ಲದೆ ಬಾಲಿವುಡ್, ಹಾಲಿವುಡ್​ಗಳಿಂದಲೂ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಜೂ ಎನ್​ಟಿಆರ್ ಹಾಗೂ ಕಲ್ಯಾಣ್ ರಾಮ್ ಸ್ವಂತ ಅಣ್ಣ ತಮ್ಮಂದಿರು ಆದರೆ ತಮ್ಮ ಜೂ ಎನ್​ಟಿಆರ್​ಗೆ ಸಿಕ್ಕ ಯಶಸ್ಸು ಕಲ್ಯಾಣ್ ರಾಮ್​ಗೆ (Kalyan Ram) ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಮತ್ತೆ ಸಾಲು-ಸಾಲು ಸಿನಿಮಾ ಅವಕಾಶಗಳನ್ನು ಕಲ್ಯಾಣ್ ರಾಮ್ ಬಾಚಿಕೊಳ್ಳುತ್ತಿದ್ದಾರೆ.

ಜೂನಿಯರ್ ಎನ್ ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ನಿನ್ನೆ (ಜುಲೈ 05) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ದಿನ ಅವರ ನಟನೆಯ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಆಗಿ ಭರವಸೆ ಮೂಡಿಸಿದೆ. ಅದರ ಜೊತೆಗೆ ಕಲ್ಯಾಣ್ ರಾಮ್​ರ 21 ಸಿನಿಮಾ ಸಹ ಘೋಷಣೆ ಆಗಿದೆ. ಎನ್ ಟಿಆರ್ ಆರ್ಟ್ಸ್ ಬ್ಯಾನರ್ ಹಾಗೂ ಅಶೋಕ ಕ್ರಿಯೇಷನ್ ಅಡಿಯಲ್ಲಿ ಕಲ್ಯಾಣ್ ರಾಮ್​ರ 21ನೇ ಸಿನಿಮಾ ಮೂಡಿಬರುತ್ತಿದ್ದು ಸಿನಿಮಾಕ್ಕೆ ಅಶೋಕ್ ವರ್ಧನ್ ಮುಪ್ಪಾ ಮತ್ತು ಸುನಿಲ್ ಬಲುಸು ಅವರು ಹಣ ತೊಡಗಿಸಿದ್ದಾರೆ. ಪ್ರದೀಪ್ ಚಿಲುಕುರಿ ನಿರ್ದೇಶನ ಮಾಡುತ್ತಿದ್ದಾರೆ.

ನಂದಮೂರಿ ಕಲ್ಯಾಣ್ ರಾಮ್ ಈ ವರೆಗೆ ಮಧ್ಯಮ ಬಜೆಟ್ ಸಿನಿಮಾಗಳನ್ನು ಮಾತ್ರವೇ ಮಾಡುತ್ತಾ ಬಂದಿದ್ದಾರೆ ಆದರೆ ಅವರ ಮುಂದಿನ ಸಿನಿಮಾ ಅವರ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಆಗಲಿದೆ. ಈ ಸಿನಿಮಾ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಕಥಾಹಂದರ ಒಳಗೊಂಡಿರಲಿದೆ. ಸಿನಿಮಾದಲ್ಲಿ ಕಲ್ಯಾಣ್ ರಾಮ್ ಹಿಂದೆಂದೂ ಕಾಣದ ಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಕೃಷ್ಣ ಭಂಡಾರಿ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ. ಸಿನಿಮಾದ ಇತರೆ ಪಾತ್ರವರ್ಗ ಇನ್ನಷ್ಟೆ ಆಯ್ಕೆ ಆಗಬೇಕಿದ್ದು ಆ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಬ್ರಿಟೀಷ್ ಸೀಕ್ರೆಟ್ ಏಜೆಂಟ್ ಆದ ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್

ಈ ಹಿಂದೆ ಎಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿಯೇ ಕಲ್ಯಾಣ್ ರಾಮ್ ನಟಿಸಿ ನಿರ್ಮಾಣ ಸಹ ಮಾಡಿದ್ದ ಬಿಂಬಿಸಾರ ಸಿನಿಮಾ ಬಿಡುಗಡೆ ಆಗಿ ಯಶಸ್ಸು ಗಳಿಸಿತ್ತು. ಆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಜೂ ಎನ್​ಟಿಆರ್ ಅತಿಥಿಯಾಗಿ ಆಗಮಿಸಿದ್ದರು. ಈಗ ಇದೇ ಬ್ಯಾನರ್ ಅಡಿ ಜೂ.ಎನ್​ಟಿಆರ್ ನಟನೆಯ ದೇವರ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಜೂ ಎನ್​ಟಿಆರ್ ಗಾಗಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾ ಸಹ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ಕಲ್ಯಾಣ್ ರಾಮ್ 2003 ರಲ್ಲಿ ತೊಲಿ ಚೂಪುಲು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟರು. ಅವರಿಗಿಂತಲೂ ಐದು ವರ್ಷ ಚಿಕ್ಕವರಾದ ಜೂ ಎನ್​ಟಿಆರ್ ಅಣ್ಣನಿಗಿಂತಲೂ ಎರಡು ವರ್ಷ ಮುಂಚೆಯೇ ನಿನ್ನು ಚೂಡಾಲನಿ ಸಿನಿಮಾದ ಮೂಲಕ ನಾಯಕ ನಟರಾಗಿದ್ದರು. ಕಲ್ಯಾಣ್ ರಾಮ್​ರ ವೃತ್ತಿ ಗ್ರಾಫು ಸಾಮಾನ್ಯ ಎನ್ನುವಂತಿದೆ ಈವರೆಗೆ ಅವರಿಗೆ ದೊಡ್ಡ ಹಿಟ್ ಸಿನಿಮಾ ಸಿಕ್ಕಿಲ್ಲ. ಒಂದು ಹಂತದಲ್ಲಿ ಚಿತ್ರರಂಗದಿಂದಲೇ ದೂರಾಗಿದ್ದರು ಆದರೆ ಇತ್ತೀಚೆಗೆ ಒಂದರ ಮೇಲೊಂದು ಸಿನಿಮಾಗಳು ಕಲ್ಯಾಣ್​ ರಾಮ್​ಗೆ ಧಕ್ಕುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 pm, Thu, 6 July 23