ತೆಲುಗು ಚಿತ್ರರಂಗದಲ್ಲಿ ಇದೇ ಮೊದಲು: ಸೆನ್ಸಾರ್ ಮಂಡಳಿಯಿಂದ 36 ಕಟ್, ಅಂಥಹದ್ದೇನಿದೆ ‘ದಸರ’ ಸಿನಿಮಾದಲ್ಲಿ?

ತೆಲುಗಿನ ಬಹುನಿರೀಕ್ಷಿತ ಸಿನಿಮಾ ದಸರ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಆಘಾತ ಎದುರಾಗಿದೆ. ಸೆನ್ಸಾರ್ ಮಂಡಳಿಯು ಬರೋಬ್ಬರಿ 36 ಕಟ್​ಗಳನ್ನು ಸೂಚಿಸಿದೆ. ತೆಲುಗು ಚಿತ್ರರಂಗ ಇತಿಹಾಸದಲ್ಲಿ ಸಿನಿಮಾ ಒಂದಕ್ಕೆ ಇಷ್ಟು ಸಂಖ್ಯೆಯ ಕಟ್ ಸೂಚಿಸಿರುವುದು ಇದೇ ಮೊದಲು.

ತೆಲುಗು ಚಿತ್ರರಂಗದಲ್ಲಿ ಇದೇ ಮೊದಲು: ಸೆನ್ಸಾರ್ ಮಂಡಳಿಯಿಂದ 36 ಕಟ್, ಅಂಥಹದ್ದೇನಿದೆ 'ದಸರ' ಸಿನಿಮಾದಲ್ಲಿ?
ದಸರ ಸಿನಿಮಾ
Follow us
ಮಂಜುನಾಥ ಸಿ.
|

Updated on: Mar 25, 2023 | 5:38 PM

ನಾನಿ (Nani), ಕೀರ್ತಿ ಸುರೇಶ್ (Keerthy Suresh) ನಟನೆಯ ದಸರ (Dasara) ಸಿನಿಮಾ ಇನ್ನೈದು ದಿನದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಆದರೆ ಅದಕ್ಕೆ ಮುನ್ನ ದೊಡ್ಡ ಆಘಾತವೊಂದು ಚಿತ್ರತಂಡಕ್ಕೆ ಎದುರಾಗಿದ್ದು, ಸೆನ್ಸಾರ್ ಮಂಡಳಿಯು ಬರೋಬ್ಬರಿ 36 ಕಟ್​ಗಳನ್ನು ಸೂಚಿಸಿದೆ. ಮಾತ್ರವಲ್ಲದೆ ಕೆಲವು ಮುಖ್ಯ ಸೂಚನೆಗಳನ್ನು ಸಹ ಚಿತ್ರತಂಡಕ್ಕೆ ನೀಡಿದೆ. ಇಷ್ಟು ದೊಡ್ಡ ಸಂಖ್ಯೆಯ ಕಟ್​ಗಳನ್ನು ತೆಲುಗಿನ ಇನ್ಯಾವುದೇ ಸಿನಿಮಾಕ್ಕೆ ಈವರೆಗೆ ನೀಡಲಾಗಿರಲ್ಲ. ಸೆನ್ಸಾರ್​ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದ ಅಪಖ್ಯಾತಿಗೆ ದಸರ ಗುರಿಯಾಗಿದೆ.

ದಸರ ಸಿನಿಮಾವು ಹಳ್ಳಿಯ ಒರಟು ಯುವಕನೊಬ್ಬನ ಕತೆಯಾಗಿದ್ದು, ಸಿನಿಮಾದಲ್ಲಿ ನಾಯಕನದ್ದು ವಿಪರೀತ ಕುಡಿಯುವ ಚಟ. ಬಹಳ ಒರಟು ಸ್ವಭಾವದ ನಾಯಕನ ಪಾತ್ರ ವಿಪರೀತ ವೈಯಲೆನ್ಸ್ ಅನ್ನು ಸಹ ತೆರೆಯ ಮೇಲೆ ಮಾಡುತ್ತದೆ. ಹಾಗಾಗಿಯೇ ಸೆನ್ಸಾರ್ ಮಂಡಳಿಯು ಇಷ್ಟೋಂದು ಕಟ್​ಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್​ಗಳನ್ನು ಸೂಚಿಸಿದೆ. ಒರಟು ಭಾಷೆ ಬಳಸಿದ ಕಡೆಯೂ ಕಟ್​ ಹಾಗೂ ಮ್ಯೂಟ್​ಗಳನ್ನು ಸೂಚಿಸಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.

ಇದೆಲ್ಲೆದರ ಜೊತೆಗೆ ಕುಡಿತದ ದೃಶ್ಯಗಳುಳ್ಳ ಕಡೆಗೆ ಮದ್ಯಪಾನ ವಿರೋಧಿ ಸಂದೇಶವನ್ನು ದೊಡ್ಡ ಫಾಂಟ್​ನಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿರುವ ಜೊತೆಗೆ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಸೂಚಿಸಲಾಗಿದೆ ಹಾಗೂ ಸಂಭಾಷಣೆಗಳ ಸಬ್​ಟೈಟಲ್ ಅನ್ನು ಸಹ ತೆಗೆಯುವಂತೆ ಸೂಚಿಸಿದೆ ಸೆನ್ಸಾರ್ ಮಂಡಳಿ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ.

ತೆಲಂಗಾಣದ ಸಿಂಗಾರೆನಿ ಎಂಬಲ್ಲಿನ ಕಲ್ಲಿದ್ದಲು ಗಣಿ, ಅಲ್ಲಿನ ಕಾರ್ಮಿಕರು ಅವರ ಬದುಕುಗಳನ್ನು ದಸರ ಸಿನಿಮಾದ ಕತೆ ಒಳಗೊಂಡಿದೆ. ಗಣಿಯ ಕಾರ್ಮಿಕನ ಪಾತ್ರದಲ್ಲಿ ನಾನಿ ನಟಿಸಿದ್ದಾರೆ. ಕೀರ್ತಿ ಸುರೇಶ್ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಸಿನಿಮಾವನ್ನು ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರವನ್ನು ಬಹು ಜೋರಾಗಿ ಮಾಡುತ್ತಿದ್ದಾರೆ ನಟ ನಾನಿ. ಸಿನಿಮಾವು ಮಾರ್ಚ್ 30 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್