Vignesh Shivan: ನಯನತಾರಾ ಪತಿ ವಿಘ್ನೇಶ್​ ಶಿವನ್​ ಟಿ-ಶರ್ಟ್​ ಮೇಲೆ ಧೋನಿ ಆಟೋಗ್ರಾಫ್​; ವಿಡಿಯೋ ವೈರಲ್​

MS Dhoni Autograph: ಕಾಲಿವುಡ್​ ನಿರ್ದೇಶಕ ವಿಘ್ನೇಶ್​ ಶಿವನ್​ ಅವರಿಗೆ ಎಂ.ಎಸ್​. ಧೋನಿ ಎಂದರೆ ಸಖತ್​ ಇಷ್ಟ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ.

Vignesh Shivan: ನಯನತಾರಾ ಪತಿ ವಿಘ್ನೇಶ್​ ಶಿವನ್​ ಟಿ-ಶರ್ಟ್​ ಮೇಲೆ ಧೋನಿ ಆಟೋಗ್ರಾಫ್​; ವಿಡಿಯೋ ವೈರಲ್​
ವಿಘ್ನೇಶ್​ ಶಿವನ್​, ಎಂ.ಎಸ್​. ಧೋನಿ
Follow us
ಮದನ್​ ಕುಮಾರ್​
|

Updated on: Jul 13, 2023 | 10:53 AM

ಕ್ರಿಕೆಟರ್​ ಎಂ.ಎಸ್​. ಧೋನಿ (MS Dhoni) ಅವರಿಗೆ ಚಿತ್ರರಂಗದಲ್ಲಿ ಆಸಕ್ತಿ ಇದೆ. ತಮ್ಮದೇ ನಿರ್ಮಾಣ ಸಂಸ್ಥೆ ಆರಂಭ ಮಾಡಿರುವ ಅವರು ತಮಿಳು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣದ ಮೊದಲ ಚಿತ್ರಕ್ಕೆ ‘ಎಲ್​ಜಿಎಂ’ (LGM Movie) ಎಂದು ಶೀರ್ಷಿಕೆ ಇಡಲಾಗಿದೆ. ‘ಲೆಟ್ಸ್​ ಗೆಟ್​ ಮ್ಯಾರೀಡ್​’ ಎಂಬುದು ಈ ಶೀರ್ಷಿಕೆಯ ಫುಲ್​ಫಾರ್ಮ್​. ಇತ್ತೀಚೆಗೆ ಚೆನ್ನೈನಲ್ಲಿ ‘ಎಲ್​ಜಿಎಂ’ ಸಿನಿಮಾದ ಆಡಿಯೋ ಮತ್ತು ಟ್ರೇಲರ್​ ಲಾಂಚ್​ ಕಾರ್ಯಕ್ರಮ ನಡೆಯಿತು. ಅದರಲ್ಲಿ ಭಾಗಿಯಾಗಿದ್ದ ಧೋನಿ ಅವರನ್ನು ನೋಡಲು ಅನೇಕ ಅಭಿಮಾನಿಗಳು ಬಂದಿದ್ದರು. ಆ ಪೈಕಿ ನಯನತಾರಾ ಅವರ ಪತಿ ವಿಘ್ನೇಶ್​ ಶಿವನ್​ (Vignesh Shivan) ಕೂಡ ಇದ್ದರು. ತಮ್ಮ ಟಿ-ಶರ್ಟ್​ ಮೇಲೆ ಧೋನಿಯವರಿಂದ ಆಟೋಗ್ರಾಫ್​ ಹಾಕಿಸಿಕೊಂಡು ವಿಘ್ನೇಶ್​ ಶಿವನ್​ ಖುಷಿಪಟ್ಟಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಕಾಲಿವುಡ್​ನಲ್ಲಿ ವಿಘ್ನೇಶ್​ ಶಿವನ್​ ಅವರು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಯನತಾರಾ, ವಿಜಯ್​ ಸೇತುಪತಿ, ಸಮಂತಾ ನಟನೆಯ ‘ಕಾದು ವಾಕುಲ ರೆಂಡು ಕಾದಲ್​​’ ಸೇರಿದಂತೆ ಅನೇಕ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರು ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಈಗ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ವಿಘ್ನೇಶ್​ ಶಿವನ್​ ಅವರಿಗೆ ಎಂ.ಎಸ್​. ಧೋನಿ ಎಂದರೆ ಸಖತ್​ ಇಷ್ಟ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ.

‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್​ ಶಿವನ್​ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್

ಭಾರತೀಯ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿ ಎಂ.ಎಸ್​. ಧೋನಿ ಮಾಡಿದ ಸಾಧನೆ ದೊಡ್ಡದು. ಅಲ್ಲದೇ ಐಪಿಎಲ್​ನಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಚೆನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸಿದ ಅವರನ್ನು ಕಂಡರೆ ತಮಿಳುನಾಡು ಮಂದಿಗೆ ಬಹಳ ಪ್ರೀತಿ. ಅಂಥ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ವಿಘ್ನೇಶ್​ ಶಿವನ್​ ಕೂಡ ಇದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟರ್​ನ ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ವಿಘ್ನೇಶ್​ ಶಿವನ್​ ಖುಷಿಪಟ್ಟಿದ್ದಾರೆ. ಧೋನಿ ಕೂಡ ಬಹಳ ಆತ್ಮೀಯವಾಗಿ ಅವರೊಂದಿಗೆ ನಡೆದುಕೊಂಡಿದ್ದಾರೆ.

‘ಧೋನಿ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ತಮಿಳಿನ ‘ಎಲ್​ಜಿಎಂ​’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರಕ್ಕೆ ರಮೇಶ್ ತಮಿಳ್ಮಣಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಯೋಗಿ ಬಾಬು, ಹರೀಶ್ ಕಲ್ಯಾಣ್, ಇವಾನಾ, ನದಿಯಾ, ಮಿರ್ಚಿ ವಿಜಯ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಿವುಡ್​​ನಲ್ಲಿ ಧೋನಿ ಅವರು ಇನ್ನೂ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡುವ ಪ್ಲ್ಯಾನ್​ ಹಾಕಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ