AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆದ ವ್ಯಕ್ತಿಗಳ ಜೊತೆ ಈ ನಟಿಯರಿಗೆ ಮೂಡಿತ್ತು ಪ್ರೀತಿ; ವಿವಾದ ಸೃಷ್ಟಿಸಿದ ಸಂಬಂಧಗಳು

ಮದುವೆ ಆಗದೇ ಇರುವವರ ಜೊತೆ ಪ್ರೀತಿ ಹುಟ್ಟಿದರೆ ಅದನ್ನು ಸಮಾಜ ಸುಲಭದಲ್ಲಿ ಒಪ್ಪುತ್ತದೆ. ಆದರೆ, ಮದುವೆ ಆದವರ ಜೊತೆ ಪ್ರೀತಿ ಮೂಡಿದರೆ? ಇಂಥ ಸಂದರ್ಭದಲ್ಲಿ ವಿವಾದಗಳು ಆಗೋದು ಪಕ್ಕಾ. ಈ ರೀತಿ ವಿವಾದ ಮಾಡಿಕೊಂಡ ಅನೇಕ ನಟಿಯರಿದ್ದಾರೆ.

ಮದುವೆ ಆದ ವ್ಯಕ್ತಿಗಳ ಜೊತೆ ಈ ನಟಿಯರಿಗೆ ಮೂಡಿತ್ತು ಪ್ರೀತಿ; ವಿವಾದ ಸೃಷ್ಟಿಸಿದ ಸಂಬಂಧಗಳು
ಮದುವೆ ಆದ ವ್ಯಕ್ತಿಗಳ ಜೊತೆ ಈ ನಟಿಯರಿಗೆ ಮೂಡಿತ್ತು ಪ್ರೀತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 31, 2023 | 11:38 AM

Share

ಪ್ರೀತಿ, ಪ್ರೇಮ ಯಾವ ಸಂದರ್ಭದಲ್ಲಿ ಯಾರ ಮೇಲೆ ಉಂಟಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮದುವೆ (Wedding) ಆಗದೇ ಇರುವವರ ಜೊತೆ ಪ್ರೀತಿ ಹುಟ್ಟಿದರೆ ಅದನ್ನು ಸಮಾಜ ಸುಲಭದಲ್ಲಿ ಒಪ್ಪುತ್ತದೆ. ಆದರೆ, ಮದುವೆ ಆದವರ ಜೊತೆ ಪ್ರೀತಿ ಮೂಡಿದರೆ? ಇಂಥ ಸಂದರ್ಭದಲ್ಲಿ ವಿವಾದಗಳು (Controversy) ಆಗೋದು ಪಕ್ಕಾ. ಈ ರೀತಿ ವಿವಾದ ಮಾಡಿಕೊಂಡ ಅನೇಕ ನಟಿಯರಿದ್ದಾರೆ. ಮದುವೆ ಆದ ಪುರುಷರ ಜೊತೆ ಸುತ್ತಾಡಿ ಸುದ್ದಿ ಆದವರ ಬಗ್ಗೆ ಇಲ್ಲಿದೆ ವಿವರ.

ನಯನತಾರ

ನಯನತಾರಾ ಅವರ ಲವ್ ಅಫೇರ್ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ ಜೊತೆ ಪ್ರೀತಿಯಲ್ಲಿ ಇದ್ದರು. ಆಗಲೇ ಪ್ರಭುದೇವ ಅವರಿಗೆ ಮದುವೆ ಆಗಿತ್ತು. 1995ರಲ್ಲಿ ರಮಾಲತಾ ಜೊತೆ ಪ್ರಭುದೇವ ವಿವಾಹ ಆದರು. ಮದುವೆ ಬಳಿಕ ನಯನತಾರಾ ಮೇಲೆ ಪ್ರಭುದೇವ ಅವರಿಗೆ ಪ್ರೀತಿ ಮೂಡಿತು. ನಯನತಾರಾ ಪ್ರೀತಿಯನ್ನು ರಮಾಲತಾ ವಿರೋಧಿಸಿದರು. ಪ್ರಭುದೇವ ಎರಡನೇ ಮದುವೆ ಆದರೆ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಾಗಿ ರಮಾಲತಾ ಅವರಿಗೆ ಬೆದರಿಕೆ ಹಾಕಿದರು. ನಂತರ ಪ್ರಭುದೇವ ಜೊತೆ ನಯನತಾರಾ ಬ್ರೇಕಪ್ ಮಾಡಿಕೊಂಡರು. 2011ರಲ್ಲಿ ಪ್ರಭುದೇವ ಹಾಗೂ ರಮಾಲತಾ ವಿಚ್ಛೇದನ ಪಡೆದರು.

ಶ್ರುತಿ ಹಾಸನ್

‘3’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಧನುಶ್ ಹಾಗೂ ಶ್ರುತಿ ಹಾಸನ್ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿತ್ತು. ಆದರೆ, ಇದನ್ನು ಶ್ರುತಿ ಹಾಸನ್ ಅಲ್ಲಗಳೆದಿದ್ದರು. ಗೆಳೆಯನಾಗಿ ಹಾಗೂ ಕಲಾವಿದನಾಗಿ ಧನುಶ್ ಅವರನ್ನು ಗೌರವಿಸುತ್ತೇನೆ ಎಂದಿದ್ದರು. ಆದರೆ, ಈ ಬಗ್ಗೆ ಸುದ್ದಿ ಜೋರಾಗಿಯೇ ಚರ್ಚೆ ಆಗಿತ್ತು. 2012ರಲ್ಲಿ ‘3’ ಸಿನಿಮಾ ರಿಲೀಸ್ ಆಯಿತು.

ರೇಖಾ

ನಟಿ ರೇಖಾ ಅವರು ಬಾಲಿವುಡ್ ಸ್ಟಾರ್ ಹೀರೋ ಅಮಿತಾಭ್ ಬಚ್ಚನ್ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು ಎನ್ನಲಾಗಿತ್ತು. ಈ ವಿಚಾರ ವರ್ಷಗಳ ಕಾಲ ಚರ್ಚೆ ಆಗಿತ್ತು.

ಶ್ರೀದೇವಿ

ಬೋನಿ ಕಪೂರ್ ಹಾಗೂ ಅವರ ಪತ್ನಿ ಮೋನಾ ಶೌರಿ ಕಪೂರ್ ಮದುವೆ ಆಗಿದ್ದರು. ಮೋನಾ ಜೊತೆ ದಾಂಪತ್ಯ ಜೀವನ ನಡೆಸುವಾಗಲೇ ಶ್ರೀದೇವಿ ಅವರು ಬೋನಿ ಕಪೂರ್ ಬಾಳಲ್ಲಿ ಬಂದರು. ಈ ಕಾರಣಕ್ಕೆ ಮೋನಾ ಹಾಗೂ ಬೋನಿ ಬೇರೆ ಆದರು. ಬೋನಿ ಕಪೂರ್ ಅವರು ಮೋನಾಗೆ ವಿಚ್ಛೇದನ ನೀಡುವ ಮೊದಲೇ ಶ್ರೀದೇವಿ ಗರ್ಭಿಣಿ ಆಗಿದ್ದರು ಎನ್ನಲಾಗಿದೆ. 1996ರಲ್ಲಿ ಮೋನಾಗೆ ಡಿವೋರ್ಸ್ ನೀಡಿ ಅದೇ ವರ್ಷ ಶ್ರೀದೇವಿಯನ್ನು ಬೋನಿ ಮದುವೆ ಆದರು.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ಯಿಂದ ಕೇಸರಿ ಬಿಕಿನಿ ತನಕ: 2023ರಲ್ಲಿ ಬಾಲಿವುಡ್​ ಮಂದಿಯ ವಿವಾದ ಒಂದೆರಡಲ್ಲ

ಸಾರಿಕಾ ಠಾಕೂರ್

ಕಮಲ್ ಹಾಸನ್ ಅವರು 80ರ ದಶಕದಲ್ಲಿ ವಾಣಿ ಗಣಪತಿ ಅವರನ್ನು ಮದುವೆ ಆದರು. ಆದರೆ, ಇವರ ಸಂಬಂಧ ಮುರಿದು ಬಿತ್ತು. ಇದಕ್ಕೆ ಕಾರಣ ಆಗಿದ್ದು ಸಾರಿಕಾ ಠಾಕೂರ್ ಎನ್ನಲಾಗಿದೆ. ಸಾರಿಕಾ ಜೊತೆ ಕಮಲ್ ಹಾಸನ್ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 1988ರಲ್ಲಿ ವಾಣಿಗೆ ವಿಚ್ಛೇದನ ನೀಡಿ ಅದೇ ವರ್ಷ ಸಾರಿಕಾರನ್ನು ಮದುವೆ ಆದರು ಕಮಲ್. 2004ರಲ್ಲಿ ಸಾರಿಕಾ ಅವರಿಂದ ಕಮಲ್ ದೂರ ಆದರು.

ಕಾವ್ಯಾ ಮಾಧವನ್

ದಿಲೀಪ್ ಹಾಗೂ ಮಂಜು ವಾರಿಯರ್ ಮದುವೆ ಆಗಿದ್ದರು. 1998ರಲ್ಲಿ ಇವರ ವಿವಾಹ ನೆರವೇರಿತ್ತು. ಆದರೆ, 2015ರಲ್ಲಿ ಇವರ ಸಂಬಂಧ ಕೊನೆ ಆಯಿತು. ಇದಕ್ಕೆ ಕಾರಣ ಆಗಿದ್ದು ಕಾವ್ಯಾ ಮಾಧವನ್ ಎನ್ನಲಾಗಿದೆ. ಕಾವ್ಯಾ ಜೊತೆ ದಿಲೀಪ್ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರಲ್ಲಿ ದಿಲೀಪ್ ಹಾಗೂ ಕಾವ್ಯಾ ವಿವಾಹ ಆದರು.

ಅಮಲಾ ಪೌಲ್

ವಿಷ್ಣು ವಿಶಾಲ್ ಹಾಗೂ ರಜಿನಿ ವಿಚ್ಛೇದನ ಪಡೆದರು. ಈ ವೇಳೆ ಅಮಲಾ ಪೌಲ್ ಹಾಗೂ ಜ್ವಾಲಾ ಗುಟ್ಟಾ ಹೆಸರನ್ನು ಎಳೆದು ತರಲಾಯಿತು. ಆದರೆ, ಇದನ್ನು ಅಮಲಾ ಅಲ್ಲಗಳೆದರು. ಬಳಿಕ ವಿಷ್ಣು ವಿಶಾಲ್ ಅವರು ಜ್ವಾಲಾ ಅವರನ್ನು ಮದುವೆ ಆಗಿದ್ದಾರೆ.

ಸಿಮ್ರನ್

ಸಿಮ್ರನ್ ಅವರು ನಟ ಕಮಲ್ ಹಾಸನ್ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿತ್ತು. ಆದರೆ, ಅವರು ಇದನ್ನು ಅಲ್ಲಗಳೆದರು. ಆ ಬಳಿಕ ಸಾರಿಕಾ ಅವರನ್ನು ಕಮಲ್ ಹಾಸನ್ ಮದುವೆ ಆದರು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಮತ್ತೆರಡು FIR ದಾಖಲು

ಆಂಡ್ರಿಯಾ ಜೆರೆಮಿಯಾ

ತಮಿಳು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಆಂಡ್ರಿಯಾ ಜೆರೆಮಿಯಾ ಅವರು ತಮ್ಮ ರಿಲೇಶನ್​ಶಿಪ್ ವಿಚಾರದ ಬಗ್ಗೆ ಮಾತನಾಡಿದ್ದರು. ಅವರು ಮದುವೆ ಆದ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದರಂತೆ. ಇದರಿಂದ ಅವರಿಗೆ ಸಾಕಷ್ಟು ಬೇಸರ ಇದೆ. ಅವರು ಸಂಬಂಧ ಹೊಂದಿದ್ದು ನಿರ್ದೇಶಕ ಸೆಲ್ವರಾಘವನ್ ಜೊತೆ ಎನ್ನಲಾಗಿದೆ. ಸೆಲ್ವರಾಘವನ್​ ಸಂಸಾರ ಹಾಳಾಗಲು ಆಂಡ್ರಿಯಾ ಕಾರಣ ಎನ್ನಲಾಗಿದೆ.

ವನಿತಾ ವಿಜಯ್​ಕುಮಾರ್

ವನಿತಾ ವಿಜಯ್ ಕುಮಾರ್ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರ ಮಾಜಿ ಪತಿ ಪೀಟರ್ ಪೌಲ್ ಇತ್ತೀಚೆಗೆ ತೀರಿಕೊಂಡರು. ಪೀಟರ್ ಪೌಲ್ ಮದುವೆ ಆಗಿದ್ದರು. ಈ ವೇಳೆ ವನಿತಾ ಹಾಗೂ ಪೀಟರ್​ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ವನಿತಾ ಅವರನ್ನು ಪೀಟರ್ ಮದುವೆ ಆದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.