‘ಪುಷ್ಪ 2’ ಎದುರು ರಿಲೀಸ್ ಆಗಲಿದೆ ಮತ್ತೆರಡು ದೊಡ್ಡ ಸಿನಿಮಾ? ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್

ಸಂಕ್ರಾಂತಿ ವೇಳೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದ ಎದುರು ತೇಜ ಸಜ್ಜಾ ನಟನೆಯ ‘ಹನುಮಾನ್’ ರಿಲೀಸ್ ಆಗಿ ಗೆಲುವು ಕಂಡಿದೆ. ಹೀಗಾಗಿ, ಚಾನ್ಸ್ ತೆಗೆದುಕೊಳ್ಳೋಕೆ ಕೆಲವರು ಮುಂದಾಗುತ್ತಾರೆ. ಈಗ ‘ಪುಷ್ಪ 2’ ಅಂಥ ದೊಡ್ಡ ಬಜೆಟ್ ಚಿತ್ರದ ಎದುರು ರಿಲೀಸ್ ಆಗೋಕೆ ಕೆಲ ಸಿನಿಮಾಗಳು ರೆಡಿ ಆಗುತ್ತಿವೆ ಎನ್ನಲಾಗಿದೆ.  

‘ಪುಷ್ಪ 2’ ಎದುರು ರಿಲೀಸ್ ಆಗಲಿದೆ ಮತ್ತೆರಡು ದೊಡ್ಡ ಸಿನಿಮಾ? ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್
ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 10, 2024 | 12:18 PM

ನಟ ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮೂಡಿರೋ ನಿರೀಕ್ಷೆ ದೊಡ್ಡದು. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಆಗಿದೆ. ಆಗಸ್ಟ್ 15ರಂದು ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ದಿನಾಂಕದ ಮೇಲೆ ಇನ್ನೂ ಕೆಲವು ಪ್ರಮುಖ ತಂಡಗಳು ಕಣ್ಣಿಟ್ಟಿವೆ ಎಂದು ವರದಿ ಆಗಿದೆ.

ದೊಡ್ಡ ಬಜೆಟ್ ಸಿನಿಮಾ ನಿರ್ಮಾಕರು ಹಬ್ಬದ ಸಂದರ್ಭದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಆದ್ಯತೆ ನೀಡುತ್ತಾರೆ. ಎದುರಿಗೆ ಯಾವುದೇ ಸಿನಿಮಾ ರಿಲೀಸ್ ಆದರೂ ಸ್ಪರ್ಧೆ ಮಾಡಿ ಗೆಲ್ಲುತ್ತೇವೆ ಎನ್ನುವ ಭರವಸೆ ಇರುವ ಕೆಲವರು ಅಖಾಡಕ್ಕೆ ಇಳಿಯುತ್ತಾರೆ. ಈ ಬಾರಿ ಸಂಕ್ರಾಂತಿ ಸಂದರ್ಭದಲ್ಲಿ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಎದುರು ತೇಜ ಸಜ್ಜಾ ನಟನೆಯ ‘ಹನುಮಾನ್’ ರಿಲೀಸ್ ಆಗಿ ಗೆದ್ದಿದೆ. ಹೀಗಾಗಿ, ಚಾನ್ಸ್ ತೆಗೆದುಕೊಳ್ಳೋಕೆ ಕೆಲವರು ಮುಂದಾಗುತ್ತಾರೆ. ಈಗ ‘ಪುಷ್ಪ 2’ ಅಂಥ ದೊಡ್ಡ ಬಜೆಟ್ ಚಿತ್ರದ ಎದುರು ರಿಲೀಸ್ ಆಗೋಕೆ ಕೆಲ ಸಿನಿಮಾಗಳು ರೆಡಿ ಆಗುತ್ತಿವೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಾನಿ ನಟನೆಯ ‘ಸರಿಪೋದ್ ಶನಿವಾರಂ’ ಚಿತ್ರ ಹಾಗೂ ನಾಗ ಚೈತನ್ಯ ನಟನೆಯ ‘ತಾಂಡೇಲ್’ ಚಿತ್ರಗಳು ಆಗಸ್ಟ್ 15ರಂದು ರಿಲೀಸ್ ಆಗೋ ಸಾಧ್ಯತೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಒಟ್ಟೊಟ್ಟಿಗೆ ಮೂರು ದೊಡ್ಡ ಚಿತ್ರಗಳು ರಿಲೀಸ್ ಆದರೆ ಫ್ಯಾನ್ಸ್​ಗೆ ಹಬ್ಬ ಆಗಲಿದೆ. ಕೆಲವು ವರದಿಗಳ ಪ್ರಕಾರ ‘ಪುಷ್ಪ 2’ ಮುಂದಕ್ಕೆ ಹೋದರೆ ಮಾತ್ರ ಈ ಸಿನಿಮಾಗಳು ರಿಲೀಸ್ ಆಗಲಿವೆ ಎಂದು ಹೇಳಲಾಗುತ್ತಿದೆ.

ನಾನಿ ನಟನೆಯ ‘ಸರಿಪೋದ್ ಶನಿವಾರಂ’ ಸಿನಿಮಾಗೆ ವಿವೇಕ್ ಅತ್ರೇಯ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕ್ ಅರುಲ್ ಮೋಹನ್, ಎಸ್​ಜೆ ಸೂರ್ಯ ಮೊದಲಾದವರು ನಟಿಸಿದ್ದಾರೆ. ನಾಗ ಚೈತನ್ಯ ಅವರ ಸಿನಿಮಾನ ಚಂದೂ ಮೊಂಡೇಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ನೈಜ ಘಟನೆ ಆಧರಿಸಿ ಸಿದ್ಧಗೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಪುಷ್ಪ’ ಹಾಗೂ ‘ಪುಷ್ಪ 2‘ ಸಿನಿಮಾಗಳ ಬಗ್ಗೆ ನಿರ್ದೇಶಕ ಸುಕುಮಾರ್ ಮಾತು

ಸದ್ಯಕ್ಕಂತೂ ‘ಪುಷ್ಪ 2’ ತಂಡ ಸಿನಿಮಾ ದಿನಾಂಕವನ್ನು ಮುಂದೂಡಿಕೊಳ್ಳುವ ಆಲೋಚನೆಯಲ್ಲಿ ಇಲ್ಲ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ. ಭರದಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಶೀಘ್ರವೇ ತಂಡ ಜಪಾನ್​ಗೆ ತೆರಳಿ ಶೂಟಿಂಗ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ