ಸಂಭಾವನೆ ಬೇಡ, ಪಾಲು ಕೊಡಿ: ಅಟ್ಲಿ ಷರತ್ತಿಗೆ ಅಲ್ಲು ಅರ್ಜುನ್​ ಒಪ್ಪುತ್ತಾರಾ?

|

Updated on: Mar 31, 2024 | 8:51 PM

ಟಾಲಿವುಡ್​ನ ಸ್ಟಾರ್​ ನಟ ಅಲ್ಲು ಅರ್ಜುನ್​ ಅಭಿನಯಿಸಲಿರುವ ಮುಂದಿನ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡುವಾಗ ಡೈರೆಕ್ಟರ್​ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ ನಿರ್ದೇಶಕ ಅಟ್ಲಿ ಅವರು ಸಂಭಾವನೆ ಬದಲು, ಸಿನಿಮಾದಿಂದ ಬರುವ ಲಾಭದಲ್ಲಿ ಪಾಲು ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಭಾವನೆ ಬೇಡ, ಪಾಲು ಕೊಡಿ: ಅಟ್ಲಿ ಷರತ್ತಿಗೆ ಅಲ್ಲು ಅರ್ಜುನ್​ ಒಪ್ಪುತ್ತಾರಾ?
ಅಲ್ಲು ಅರ್ಜುನ್​, ಅಟ್ಲಿ
Follow us on

ಕಾಲಿವುಡ್​ ನಿರ್ದೇಶಕ ಅಟ್ಲಿ (Atlee) ಅವರು ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿ ಉಳಿದುಕೊಂಡಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರ ಖ್ಯಾತಿ ಹಬ್ಬಿದೆ. ಶಾರುಖ್​ ಖಾನ್​ ಜೊತೆ ‘ಜವಾನ್​’ ಸಿನಿಮಾ ಮಾಡಿ ಅವರು ದೊಡ್ಡ ಗೆಲುವು ಕಂಡರು. ಆ ಬಳಿಕ ಅವರಿಗೆ ಇರುವ ಬೇಡಿಕೆ ಹತ್ತು ಪಟ್ಟ ಅಧಿಕ ಆಗಿದೆ. ಆ ಬೇಡಿಕೆಗೆ ತಕ್ಕಂತೆಯೇ ಅವರ ಸಂಭಾವನೆ (Atlee Remuneration) ಕೂಡ ಹೆಚ್ಚಾಗಿದೆ. ಆದರೆ ಸಂಭಾವನೆ ಬದಲು ಲಾಭದಲ್ಲಿ ಪಾಲು ಕೇಳಲು ಅಟ್ಲಿ ನಿರ್ಧರಿಸಿದ್ದಾರೆ ಎಂದು ಸುದ್ದಿ ಆಗಿದೆ. ಅಲ್ಲು ಅರ್ಜುನ್​ (Allu Arjun) ಜೊತೆಗಿನ ಸಿನಿಮಾಗೆ ಅವರು ಸಂಬಳದ ಬದಲು ಪಾಲು ಕೇಳುತ್ತಿದ್ದಾರೆ ಎಂಬ ಗಾಸಿಪ್​ ಹರಿದಾಡುತ್ತಿದೆ.

ಅಲ್ಲು ಅರ್ಜುನ್​ ಅವರು ಈಗ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆ ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ನಂತರ ಅವರು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಅಷ್ಟರಲ್ಲಾಗಲೇ ನಿರ್ದೇಶಕರ ಸಂಭಾವನೆ ಬಗ್ಗೆ ಟಾಲಿವುಡ್​ ಅಂಗಳಲ್ಲಿ ಗುಸುಗುಸು ಕೇಳಿಬರಲು ಆರಂಭಿಸಿದೆ.

ಇದನ್ನೂ ಓದಿ: ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್​ ಬಂಧನವಾಯ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

‘ಪುಷ್ಪ 2’ ಸಿನಿಮಾ ಗೆದ್ದರೆ ಅಲ್ಲು ಅರ್ಜುನ್​ ಅವರ ಮುಂದಿನ ಸಿನಿಮಾ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಸೃಷ್ಟಿಯಾಗಲಿದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಬೇಕು ಎಂದರೆ ನಿರ್ದೇಶಕರ ಮೇಲೆ ಜವಾಬ್ದಾರಿ ಜಾಸ್ತಿ ಇರುತ್ತದೆ. ಹಾಗಾಗಿ ಅಟ್ಲಿ ಅವರು ಸಂಬಳದ ಬದಲು ಬರುವ ಲಾಭದಲ್ಲಿ ಪಾಲು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಷರತ್ತಿಗೆ ಅಲ್ಲು ಅರ್ಜುನ್​ ಅವರು ಒಪ್ಪುತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ದುಬೈನಲ್ಲಿ ತಮ್ಮದೇ ಮೇಣದ ಪ್ರತಿಮೆ ಅನಾವರಣ ಮಾಡಿದ ‘ಪುಷ್ಪ 2’ ನಟ ಅಲ್ಲು ಅರ್ಜುನ್​

ಸಾಮಾಜಿಕ ಸಂದೇಶ ಸಾರುವಂತಹ ಮಾಸ್​ ಸಿನಿಮಾಗಳನ್ನು ಮಾಡುವ ಮೂಲಕ ಅಟ್ಲಿ ಅವರು ಫೇಮಸ್​ ಆಗಿದ್ದಾರೆ. ಕಾಲಿವುಡ್​ನಲ್ಲಿ ಅವರು ದಳಪತಿ ವಿಜಯ್​ ಜೊತೆ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಟ್ಲಿ ಮತ್ತು ಶಾರುಖ್​ ಖಾನ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಜವಾನ್​’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕಮಾಯಿ ಮಾಡಿತು. ಆ ಬಳಿಕ ಅಟ್ಲಿ ಅವರು ಪ್ಯಾನ್​ ಇಂಡಿಯಾ ನಿರ್ದೇಶಕನಾಗಿ ಮಿಂಚಲು ಆರಂಭಿಸಿದರು. ಅವರ ಮುಂದಿನ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.