ದಿವಂಗತ ರಾಮೋಜಿ ರಾವ್ ಹಳೆ ವಿಡಿಯೋ ವೈರಲ್, ಜಗನ್ ವಿರುದ್ಧ ತೀವ್ರ ಆಕ್ರೋಶ

ಆಂಧ್ರದ ಅತ್ಯಂತ ದೊಡ್ಡ ಉದ್ಯಮಿ ರಾಮೋಜಿ ರಾವ್ ನಿನ್ನೆ ನಿಧನ ಹೊಂದಿದ್ದಾರೆ. ಆದರೆ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋ ಹರಿದಾಡುತ್ತಿದ್ದು, ಜಗನ್ ಸರ್ಕಾರ ಕೊಟ್ಟ ಹಿಂಸೆಯಿಂದಲೇ ಅವರು ನಿಧನ ಹೊಂದಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.

ದಿವಂಗತ ರಾಮೋಜಿ ರಾವ್ ಹಳೆ ವಿಡಿಯೋ ವೈರಲ್, ಜಗನ್ ವಿರುದ್ಧ ತೀವ್ರ ಆಕ್ರೋಶ
ರಾಮೋಜಿ ರಾವ್
Follow us
|

Updated on: Jun 09, 2024 | 8:12 AM

ಸಿನಿಮಾ, ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದ್ದ ಧೀಮಂತ ವ್ಯಕ್ತಿ ರಾಮೋಜಿ ರಾವ್ (Ramoji Rao) ನಿನ್ನೆ (ಜೂನ್ 08) ನಿಧನ ಹೊಂದಿದ್ದಾರೆ. ರಾಮೋಜಿ ಫಿಲಂ ಸಿಟಿ, ಈಟಿವಿ, ಈನಾಡು ಅಂಥಹಾ ಉನ್ನತ ಸಂಸ್ಥೆಗಳನ್ನು ಕಟ್ಟಿ ದೊಡ್ಡದಾಗಿ ಬೆಳೆಸಿದ್ದಲ್ಲದೆ ಇನ್ನೂ ಕೆಲವು ಉದ್ಯಮಗಳಲ್ಲಿ ತೊಡಗಿಕೊಂಡು ಯಶಸ್ವಿಗೊಳಿಸಿದ್ದರು ರಾಮೋಜಿ ರಾವ್. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿನ್ನೆ ಮುಂಜಾನೆ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಆದರೆ ಇದೀಗ ರಾಮೋಜಿ ರಾವ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಆ ವಿಡಿಯೋದಿಂದ ಜಗನ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ನಿತ್ರಾಣರಾಗಿ ಹಾಸಿಗೆ ಮೇಲೆ ಮಲಗಿದ್ದರೂ ಬಿಡದೆ ಅಮಾನವೀಯವಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿರುವ ವಿಡಿಯೋ ಅದಾಗಿದೆ.

ರಾಮೋಜಿ ರಾವ್ ಹಾಗೂ ಜಗನ್ ಸರ್ಕಾರಕ್ಕೆ ಮೊದಲಿನಿಂದಲೂ ಸಮಸ್ಯೆ. 2023 ರಲ್ಲಿ ಹೊರಬಂದ ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಆಂಧ್ರ ಸರ್ಕಾರವು ರಾಮೋಜಿ ರಾವ್​ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಮಾತ್ರವಲ್ಲದೆ ಆ ವೇಳೆಗಾಗಲೆ ಹಾಸಿಗೆ ಹಿಡಿದಿದ್ದ ರಾಮೋಜಿ ರಾವ್ ಅವರನ್ನು ವಿಚಾರಣೆ ಹೆಸರಲ್ಲಿ ಸಾಕಷ್ಟು ಹಿಂಸೆಯನ್ನೂ ನೀಡಿತು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ರಾಮೋಜಿ ರಾವ್ ನಿಧನಕ್ಕೆ ಪ್ರಧಾನಿ ಮೋದಿ, ಅಲ್ಲು ಅರ್ಜುನ್, ರಾಮ್ ಚರಣ್, ರಾಜಮೌಳಿ ಸೇರಿ ಅನೇಕರ ಸಂತಾಪ

ಈಗ ಹರಿದಾಡುತ್ತಿರುವ ವಿಡಿಯೋ ಕಳೆದ ವರ್ಷದ್ದಾಗಿದ್ದು, ಬೆಡ್​ಮೇಲೆ ಮಲಗಿರುವ ರಾಮೋಜಿ ರಾವ್ ಅವರನ್ನು ಕೆಲವು ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರಾಮೋಜಿ ರಾವ್ ಅವರು, ನನಗೆ ಹೃದಯ ಸಮಸ್ಯೆ ಇದೆ, ಎದೆ ನೋವುತ್ತಿದೆ, ನನಗೆ ಉಸಿರಾಡಲು ಸಹ ಸಮಸ್ಯೆ ಆಗುತ್ತಿದೆ ಎಂದು ಕಷ್ಟಪಟ್ಟು ಹೇಳುತ್ತಿದ್ದರೂ ಸಹ ಅಧಿಕಾರಿಗಳು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸುಮಾರು 8-10 ಅಧಿಕಾರಿಗಳು ರಾಮೋಜಿ ರಾವ್ ಅವರ ಬೆಡ್ ಪಕ್ಕದಲ್ಲಿಯೇ ಕುರ್ಚಿಗಳನ್ನು ಹಾಕಿಕೊಂಡು ಕೂತು ಚಿಕಿತ್ಸೆಗೂ ಅವಕಾಶ ಕೊಡದೆ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಲ್ಲದೆ, ರಾಮೋಜಿ ರಾವ್ ಅವರ ಕುಟುಂಬದೊಟ್ಟಿಗೆ ಸಹ ಅಧಿಕಾರಿಗಳು ಕಠಿಣವಾಗಿ ವರ್ತಿಸಿರುವ, ಮಾತನಾಡಿರುವ ದೃಶ್ಯಗಳು ಸಹ ವಿಡಿಯೋನಲ್ಲಿವೆ.

ರಾಮೋಜಿ ರಾವ್ ಅವರು ಆಂಧ್ರದ ಬಹುದೊಡ್ಡ ಉದ್ಯಮಿಯಾಗಿದ್ದರು. ರಾಮೋಜಿ ಗ್ರೂಪ್, ಈನಾಡು ಮೀಡಿಯಾ, ಮಾರ್ಗದರ್ಶಿ ಚಿಟ್‌ಫಂಡ್ಸ್, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ರಾಮೋಜಿ ಫಿಲ್ಮ್‌ಸಿಟಿ, ಕಲಾಂಜಲಿ ಕಂಪನಿ, ಡಾಲ್ಫಿನ್ ಹೋಟೆಲ್ ಗ್ರೂಪ್ ಇನ್ನೂ ಹಲವು ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಬೆಳೆಸಿದ್ದರು. ತೆಲುಗು ಮಾತ್ರವೇ ಅಲ್ಲದೆ ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಮಾಧ್ಯಮ ಹಾಗೂ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ರಾಮೋಜಿ ರಾವ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್