ಚಿತ್ರರಂಗ ತ್ಯಜಿಸಲಿದ್ದಾರೆ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್, ಎಲ್ಲದಕ್ಕೂ ಕಾರಣ ಪವನ್ ಕಲ್ಯಾಣ್?

‘ಅತಡು’, ‘ಜಲ್ಸಾ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ತೆಲುಗಿಗೆ ನೀಡಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರರಂಗದಿಂದ ದೂರಾಗಲಿದ್ದಾರೆ ಎನ್ನಲಾಗುತ್ತಿದೆ.

ಚಿತ್ರರಂಗ ತ್ಯಜಿಸಲಿದ್ದಾರೆ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್, ಎಲ್ಲದಕ್ಕೂ ಕಾರಣ ಪವನ್ ಕಲ್ಯಾಣ್?
Follow us
|

Updated on:Jun 09, 2024 | 10:10 AM

‘ಅತಡು’, ‘ಜಲ್ಸಾ’, ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅರವಿಂದ ಸಮೇತ’, ‘ಅತ್ತಾರಿಂಟಿಕಿ ದಾರೇದಿ’, ‘ಅಲಾ ವೈಕುಂಟಪುರಂಲೋ’ ಇನ್ನೂ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿರುವ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಬಲು ಜೋರಾಗಿ ಕೇಳಿ ಬರುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರರಂಗ ತೊರೆಯಲು ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರೇ ಕಾರಣ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ಹಾಗೂ ತ್ರಿವಿಕ್ರಮ್ ಆತ್ಮೀಯ ಸ್ನೇಹಿತರು. ತ್ರಿವಿಕ್ರಮ್ ನಿರ್ದೇಶನದ ಮೂರು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಅಲ್ಲದೆ ಪವನ್​ರ ಬೇರೆ ಮೂರು ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ತ್ರಿವಿಕ್ರಮ್ ಬರೆದುಕೊಂಡಿದ್ದಾರೆ. ಇಬ್ಬರ ಆಲೋಚನೆ, ಆದರ್ಶಗಳು ಬಹುತೇಕ ಒಂದೆ ಆಗಿರುವ ಕಾರಣ ಈ ಇಬ್ಬರು ಬಹಳ ಆತ್ಮೀಯರಾಗಿದ್ದು, ಪರಸ್ಪರರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡುತ್ತಿರುತ್ತಾರೆ. ಪವನ್ ಕಲ್ಯಾಣ್​ರ ರಾಜಕೀಯ ಭಾಷಣಗಳನ್ನು ಸಹ ತ್ರಿವಿಕ್ರಮ್ ಬರೆದುಕೊಡುತ್ತಾರೆ ಸುದ್ದಿ ಹರಿದಾಡುತ್ತಿದೆ.

ಇದೀಗ ಹೊಸ ಸುದ್ದಿ ಹರಿದಾಡುತ್ತಿದ್ದು ತ್ರಿವಿಕ್ರಮ್ ಶ್ರೀನಿವಾಸ್, ಸಿನಿಮಾ ರಂಗ ತ್ಯಜಿಸುತ್ತಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಇದೀಗ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದು, ಈ ಬಾರಿ ಅವರಿಗೆ ಮಂತ್ರಿಗಿರಿ ಸಹ ಲಭಿಸಲಿದೆ. ಹಾಗಾಗಿ ತ್ರಿವಿಕ್ರಮ್ ಶ್ರೀನಿವಾಸ್ ಪವನ್​ ಹಾಗೂ ಟಿಡಿಪಿ ಸರ್ಕಾರದ ಸಲಹೆಗಾರರಾಗಿ ನೇಮಕೊಳ್ಳಲಿದ್ದಾರೆ. ಹಾಗಾಗಿ ಚಿತ್ರರಂಗವನ್ನು ತ್ಯಜಿಸಿ ಮುಂದಿನ ಐದು ವರ್ಷಗಳು ಸರ್ಕಾರದ ಸಲಹೆಗಾರರಾಗಿ ವೃತ್ತಿವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಗಳಿಗೆ ಹೆಚ್ಚಳವಾಯ್ತು ಬೇಡಿಕೆ, ದುಪ್ಪಟ್ಟು ಹಣಕ್ಕೆ ಮಾರಾಟ

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತ್ರಿವಿಕ್ರಮ್ ಶ್ರೀನಿವಾಸ್​ರ ಹತ್ತಿರದ ಸಂಬಂಧಿ ನಿರ್ಮಾಪಕ ನಾಗ ವಂಶಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅದೆಲ್ಲ ಸುಳ್ಳು ಸುದ್ದಿ ಅವರು ಚಿತ್ರರಂಗ ಬಿಡುತ್ತಿಲ್ಲ ಎಂದಿದ್ದಾರೆ. ತುಸು ಖಾರವಾಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಾಗ ವಂಶಿ, ‘ರಿಸಲ್ಟ್ ನೋಡಿ ಪತ್ರಕರ್ತರು ಯಾರಾದರೂ ಕೆಲಸ ಬಿಟ್ಟಿದ್ದಾರಾ? ಹಾಗಾದರೆ ಅವರೇಕೆ ಬಿಡುತ್ತಾರೆ?’ ಎಂದಿದ್ದಾರೆ.

ತ್ರಿವಿಕ್ರಮ್ ನಿರ್ದೇಶನದ ‘ಜಲ್ಸಾ’, ‘ಅಜ್ಞಾತವಾಸಿ’, ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಪವನ್ ನಟನೆಯ ‘ತೀನ್ ಮಾರ್’, ‘ಭೀಮ್ಲಾ ನಾಯಕ್’, ‘ಬ್ರೋ’ ಸಿನಿಮಾಗಳಿಗೆ ಚಿತ್ರಕತೆ ಮತ್ತು ಸಂಭಾಷಣೆಯನ್ನು ತ್ರಿವಿಕ್ರಮ್ ಬರೆದಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಅಲ್ಲು ಅರ್ಜುನ್ ಸಿನಿಮಾ ನಿರ್ದೇಶಿಸಲಿದ್ದಾರೆ ತ್ರಿವಿಕ್ರಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:08 am, Sun, 9 June 24

ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ