ಸದ್ಯ ದಕ್ಷಿಣ ಭಾರತದ ಚಿತ್ರರಂಗ ಟಾಪ್ನಲ್ಲಿದೆ. ಕನ್ನಡ, ತೆಲುಗು ಮೊದಲಾದ ಚಿತ್ರರಂಗದಿಂದ ಅತ್ಯುತ್ತಮ ಸಿನಿಮಾಗಳು ರಿಲೀಸ್ ಆಗುತ್ತಿವೆ. ದೊಡ್ಡ ಬಜೆಟ್ನ ಚಿತ್ರಗಳು ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್ 2’ (KGF Chapter 2), ‘777 ಚಾರ್ಲಿ’, ‘ಆರ್ಆರ್ಆರ್’, ‘ವಿಕ್ರಮ್’ ಮೊದಲಾದ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ. ಈಗ ಭಾರತದ ಎಲ್ಲಾ ಸ್ಟಾರ್ಸ್ಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. Ormax ಮೀಡಿಯಾ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಬಿಡುಗಡೆ ಮಾಡಿದೆ.
2022ರ ಜುಲೈ ಅವಧಿಯ ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಟನೆಯ ‘ಬೀಸ್ಟ್’ ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಿಲ್ಲ. ಆದಾಗ್ಯೂ ಅವರ ಖ್ಯಾತಿ ಕಡಿಮೆ ಆಗಿಲ್ಲ. ‘ವಾರಿಸು’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸತತ ಸೋಲು ಕಾಣುತ್ತಿರುವ ಪ್ರಭಾಸ್ಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಜ್ಯೂ.ಎನ್ಟಿಆರ್ ಇದ್ದಾರೆ. ‘ಆರ್ಆರ್ಆರ್’ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ‘ಪುಷ್ಪ’ ಚಿತ್ರದಿಂದ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಅಲ್ಲು ಅರ್ಜುನ್ಗೆ ನಾಲ್ಕನೇ ಸ್ಥಾನ ಸಿಕ್ಕಿದೆ.
‘ಕೆಜಿಎಫ್ 2’ ಚಿತ್ರದ ಮೂಲಕ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಖ್ಯಾತಿ ಯಶ್ಗೆ ಸಲ್ಲುತ್ತದೆ. ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್ಗೆ ಸಿಕ್ಕಿದೆ.
ರಾಮ್ ಚರಣ್ (6), ಅಕ್ಷಯ್ ಕುಮಾರ್ (7), ಮಹೇಶ್ ಬಾಬು (8), ಸೂರ್ಯ (9), ಅಜಿತ್ ಕುಮಾರ್ (10) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಿವುಡ್ನಲ್ಲಿ ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಬಿಸ್ನೆಸ್ ಮಾಡುತ್ತಿಲ್ಲ. ಹೀಗಾಗಿ, ಬಾಲಿವುಡ್ನಿಂದ ಸ್ಥಾನ ಪಡೆದ ಏಕೈಕ ಹೀರೋ ಎಂಬ ಖ್ಯಾತಿ ಅಕ್ಷಯ್ ಕುಮಾರ್ಗೆ ಸಲ್ಲುತ್ತದೆ.
Ormax Stars India Loves: Most popular male film stars in India (July 2022) #OrmaxSIL pic.twitter.com/XXxPO3RZeT
— Ormax Media (@OrmaxMedia) August 20, 2022
ಇದನ್ನೂ ಓದಿ: Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್ ಆಗಿದೆ ಹಳೇ ಐಡಿ ಕಾರ್ಡ್ ಫೋಟೋ
Ormax ಮೀಡಿಯಾ ಪ್ರತಿ ತಿಂಗಳು ಟಾಪ್ 10 ನಟ-ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪ್ರೇಕ್ಷಕರು ನೀಡುವ ರೇಟಿಂಗ್ ಆಧರಿಸಿ ಸ್ಥಾನಗಳು ನಿಗದಿ ಆಗುತ್ತವೆ.