ಈ ವಾರ ಒಟಿಟಿಗೆ ಬಂದಿವೆ ಕೆಲ ಹಿಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ
OTT Release this week: ಈ ವಾರ ಚಿತ್ರಮಂದಿರಗಳಲ್ಲಿ ಒಳ್ಳೆಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ‘ಕಾಂತಾರ: ಚಾಪ್ಟರ್ 1’, ಧನುಶ್ ನಟನೆಯ ‘ಇಡ್ಲಿ ಕಡೈ’, ಜಾನ್ಹವಿ ಕಪೂರ್ ನಟನೆಯ ಹೊಸ ಹಿಂದಿ ಸಿನಿಮಾಗಳು ಚಿತ್ರಮಂದಿರಗಳಲ್ಲಿದೆ. ಇದರ ನಡುವೆ ಈ ವಾರ ಒಟಿಟಿಗೆ ಸಹ ಕೆಲ ಒಳ್ಳೆಯ, ಚಿತ್ರಮಂದಿರಗಳಲ್ಲಿ ಹಿಟ್ ಆದ ಸಿನಿಮಾಗಳು ಬಂದಿವೆ. ಯಾವುವು? ಪಟ್ಟಿ ಇಲ್ಲಿದೆ ನೋಡಿ...
Updated on:Oct 05, 2025 | 8:32 AM

ಕಳೆದ ವಾರ ಬಿಡುಗಡೆ ಆಗಬೇಕಿದ್ದ ಕಿರೀಟಿ ರೆಡ್ಡಿಯ ‘ಜೂನಿಯರ್’ ಸಿನಿಮಾ ಈ ವಾರ ಅಮೆಜಾನ್ ಪ್ರೈಂ, ಆಹಾ ಒಟಿಟಿ ಹಾಗೂ ರೈಟ್ಸ್ ಪ್ರೈಂಗಳಲ್ಲಿ ಹೀಗೆ ಮೂರು ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.

ರವಿಚಂದ್ರನ್ ನಟನೆಯ ‘ಗೌರಿಶಂಕರ’ ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ‘ಗೌರಿ ಶಂಕರ’ ಸಿನಿಮಾ ಕೇವಲ ನಾಮ್ಕೆ ವಾಸ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.

ಕನ್ನಡತಿ ರುಕ್ಮಿಣಿ ವಸಂತ್ ನಟಿಸಿರುವ ತಮಿಳು ಸಿನಿಮಾ ‘ಮದರಾಸಿ’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ಶಿವಕಾರ್ತಿಕೇಯನ್ ನಾಯಕ. ಖ್ಯಾತ ನಿರ್ದೇಶಕ ಮುರುಗದಾಸ್ ಈ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಅಮೆಜಾನ್ ಪ್ರೈಂಗೆ ಈ ವಾರ ಬಂದಿದೆ.

ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಿಂದಿ ವೆಬ್ ಸರಣಿ ‘ದಿ ಗೇಮ್: ಯು ನೆವರ್ ಪ್ಲೇಯ್ ಅಲೋನ್’ ಇದೇ ವಾರ ಬಿಡುಗಡೆ ಆಗಿದೆ. ಈ ವೆಬ್ ಸರಣಿ ನೆಟ್ಫ್ಲಿಕ್ಸ್ನಲ್ಲಿ ಈ ವಾರದಿಂದ ವೀಕ್ಷಣೆಗೆ ಲಭ್ಯವಿದೆ.

ಬಾಕ್ಸರ್ ಆಗಬೇಕೆಂಬ ಆಸೆಯುಳ್ಳ ವ್ಯಕ್ತಿ ಕೊನೆಗೆ ಡ್ರಗ್ಸ್ ದಾಸನಾಗಿ ಆ ಬಳಿಕ ಹೇಗೆ ಅದರ ವಿರುದ್ಧವೇ ಹೋರಾಟ ನಡೆಸುತ್ತಾನೆ ಎಂಬ ಕತೆಯುಳ್ಳ ‘ಡಾಕುವೊಂದಾ ಮುಂಡಾ 3’ ವೆಬ್ ಸರನಿ ಜೀ5 ನಲ್ಲಿ ಬಿಡುಗಡೆ ಆಗಿದೆ.
Published On - 2:44 pm, Sat, 4 October 25




