ಬಿಗ್ ಬಾಸ್ ಮನೆ ಒಳಗೆ ಬಂದು ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ ಮಹೇಶ್ ಭಟ್

‘ಹಿಂದಿ ಬಿಗ್ ಬಾಸ್’ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್​ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮತ್ತೊಂದು ವಿವಾದ ಆಗಿದೆ.

ಬಿಗ್ ಬಾಸ್ ಮನೆ ಒಳಗೆ ಬಂದು ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ ಮಹೇಶ್ ಭಟ್
ಮಹೇಶ್ ಭಟ್​-ಮನಿಶಾ ರಾಣಿ
Follow us
ರಾಜೇಶ್ ದುಗ್ಗುಮನೆ
|

Updated on: Aug 02, 2023 | 7:11 AM

ಹಿರಿಯ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಹಲವು ವಿವಾದ ಮಾಡಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಸಾಯಲು ಮಹೇಶ್ ಭಟ್ ಕೂಡ ಕಾರಣ ಎಂಬ ಆರೋಪಗಳು ಎದುರಾಗಿದ್ದವು. ರಿಯಾ ಚಕ್ರವರ್ತಿಗೆ ಕುಮ್ಮಕ್ಕು ಕೊಟ್ಟಿದ್ದರ ಹಿಂದೆ ಇವರ ಕೈವಾಡ ಇದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈಗ ಮಹೇಶ್ ಭಟ್ (Alia Bhatt) ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 2’ಗೆ ತೆರಳಿದ್ದ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಗ್ ಬಾಸ್​ನಲ್ಲಿದ್ದ ಮಹಿಳಾ ಸ್ಪರ್ಧಿ ಜೊತೆ ಅವರು ನಡೆದುಕೊಂಡಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ.

‘ಹಿಂದಿ ಬಿಗ್ ಬಾಸ್’ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್​ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ತೆರಳಿ ಮನಿಶಾ ರಾಣಿ ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಇದನ್ನು ಟೀಕಿಸಿದ್ದಾರೆ.

ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳ ಮನೆ ಮಂದಿ ದೊಡ್ಮನೆ ಪ್ರವೇಶಿಸುತ್ತಿದ್ದಾರೆ. ಮಹೇಶ್ ಭಟ್ ಮಗಳು ಪೂಜಾ ಭಟ್ ಕೂಡ ಬಿಗ್ ಬಾಸ್ ಮನೆ ಒಳಗೆ ಇದ್ದಾರೆ. ಹೀಗಾಗಿ, ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಅವರು ಮಗಳ ಜೊತೆ ಮಾತುಕತೆ ನಡೆಸುವ ಬದಲು ಮನಿಶಾ ರಾಣಿ ಕೈ ಹಿಡಿದು ಕುಳಿತಿದ್ದಾರೆ.

ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಮಹೇಶ್ ಭಟ್ ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಮಹೇಶ್ ಅವರು ಮನಿಶಾ ರಾಣಿ ಜೊತೆ ಆಪ್ತವಾಗಿರುವುದನ್ನು ಬೇರೆ ರೀತಿಯುಲ್ಲಿ ಅರ್ಥೈಸಲಾಗಿದೆ. ಮನಿಶಾ ಮಗಳ ಸಮಾನರು. ಆ ರೀತಿಯಲ್ಲೇ ಮಹೇಶ್ ಭಟ್ ಅವರು ನೋಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ವೃತ್ತಿ ಬದುಕಿಗೆ ವಿಲನ್ ಒಬ್ಬರಾ, ಇಬ್ಬರಾ? ನಟಿಯ ಹಿನ್ನಡೆಗೆ ಇವರೇ ಕಾರಣ?

ಮಹೇಶ್ ಭಟ್ ಹಾಗೂ ರಿಯಾ ಚಕ್ರವರ್ತಿ ಒಟ್ಟಾಗಿದ್ದ ಫೋಟೋಗಳು ಈ ಮೊದಲು ವೈರಲ್ ಆಗಿತ್ತು. ಸುಶಾಂತ್​ನ ಜೀವನ ಕೊನೆಗೊಳಿಸುವಂತೆ ರಿಯಾಗೆ ಅವರೇ ಡೀಲ್ ನೀಡಿದ್ದರು ಎಂದು ನೆಟ್ಟಿಗರು ಆರೋಪಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ