‘ಬಾಹುಬಲಿ’ ಹೊಸ ಕಥೆ; ‘ಕ್ರೌನ್ ಆಫ್ ಬ್ಲಡ್’ ಟ್ರೇಲರ್ನಲ್ಲಿದೆ ಝಲಕ್
ಮಾಹಿಷ್ಮತಿ ಸಮ್ರಾಜ್ಯದ ಕಥೆ ಸಣ್ಣದಲ್ಲ. ‘ಬಾಹುಬಲಿ 1’ ಸಿನಿಮಾದಲ್ಲಿ ತೋರಿಸಿದ ಕಥೆಗಿಂತಲೂ ಮುನ್ನ ಆ ಸಾಮ್ರಾಜ್ಯದಲ್ಲಿ ಏನೆಲ್ಲ ಆಗಿತ್ತು ಎಂಬುದು ಯಾರಿಗೂ ತಿಳಿದಿಲ್ಲ. ಆ ಕಹಾನಿಯನ್ನು ತಿಳಿಸಲು ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಆ್ಯನಿಮೇಟೆಡ್ ಸೀರಿಸ್ ಬರುತ್ತಿದೆ. ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ ಮೂಲಕ ಮೇ 17ರಿಂದ ಇದು ಪ್ರಸಾರ ಆರಂಭಿಸಲಿದೆ.
ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಈ ಸಿನಿಮಾಗಳ ಕಥೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಅಚ್ಚರಿ ಏನೆಂದರೆ, ಈಗ ಇದೇ ‘ಬಾಹುಬಲಿ’ (Baahubali) ಸಿನಿಮಾದ ಪಾತ್ರಗಳನ್ನು ಇಟ್ಟುಕೊಂಡು ಆ್ಯನಿಮೇಟೆಡ್ ಸೀರಿಸ್ ಬರುತ್ತಿದೆ. ಇದಕ್ಕೆ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ (Baahubali Crown of Blood) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಿಗೆ ಝಲಕ್ ತೋರಿಸಲಾಗಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ (Disney plus Hotstar) ಮೂಲಕ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಪ್ರಸಾರ ಆಗಲಿದೆ.
‘ಬಾಹುಬಲಿ’ ಸಿನಿಮಾದಲ್ಲಿ ನಟ ಪ್ರಭಾಸ್ ಅವರು ಬಾಹುಬಲಿ ಪಾತ್ರ ಮಾಡಿದ್ದರು. ಭಲ್ಲಾಳದೇವನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮಿಂಚಿದ್ದರು. ರಾಜಮಾತೆ ಶಿವಗಾಮಿ ಪಾತ್ರದಲ್ಲಿ ರಮ್ಯಾ ಕೃಷ್ಣ ಗಮನ ಸೆಳೆದಿದ್ದರು. ಸತ್ಯರಾಜ್ ಮಾಡಿದ್ದ ಕಟ್ಟಪ್ಪನ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಈಗ ಈ ಎಲ್ಲ ಪಾತ್ರಗಳನ್ನು ಇಟ್ಟುಕೊಂಡು ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಆ್ಯನಿಮೇಟೆಡ್ ಸೀರಿಸ್ ನಿರ್ಮಾಣ ಆಗಿದೆ.
ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು
ಆ್ಯನಿಮೇಟೆಡ್ ಸೀರಿಸ್ಗಳು ಮಕ್ಕಳಿಗೆ ಮಾತ್ರವಲ್ಲ. ಎಲ್ಲ ವರ್ಗದ ಪ್ರೇಕ್ಷಕರಿಗೂ ಆಸಕ್ತಿ ಮೂಡಿಸುವಂತೆ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿ ಒದಗಿಸುತ್ತಿದೆ. ‘ಗ್ರಾಫಿಕ್ ಇಂಡಿಯಾ’ ಮತ್ತು ‘ಆರ್ಕ ಮೀಡಿಯಾ ವರ್ಕ್ಸ್’ ಸಂಸ್ಥೆಗಳ ಮೂಲಕ ರಾಜಮೌಳಿ, ಶೋಭು ಯರ್ಲಗಡ್ಡ, ದೇವರಾಜನ್ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಜೀವನ್ ಜೆ. ಕಾಂಗ್ ಹಾಗೂ ನವೀನ್ ಜಾನ್ ಅವರ ನಿರ್ದೇಶನ ಈ ಸೀರಿಸ್ಗೆ ಇದೆ.
Mahishmati ke khoon se likhi ek nayi kahani 🔥
Hotstar Specials S.S. Rajamouli’s Baahubali : Crown of Blood streaming from 17th May.#BaahubaliOnHotstar pic.twitter.com/43mwjsGfZS
— Disney+ Hotstar (@DisneyPlusHS) May 2, 2024
ಕನ್ನಡ, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಆ್ಯನಿಮೇಟೆಡ್ ಸೀರಿಸ್ ಸಿದ್ಧವಾಗಿದೆ. ಮೇ 17ರಿಂದ ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ ಒಟಿಟಿ ಮೂಲಕ ಇದರ ಪ್ರಸಾರ ಆಗಲಿದೆ. ಅಷ್ಟಕ್ಕೂ ಇದರಲ್ಲಿ ಕಥೆ ಏನು? ಈಗಾಗಲೇ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾ ನೋಡಿರುವವರಿಗೆ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಆ್ಯನಿಮೇಟೆಡ್ ಸೀರಿಸ್ನಲ್ಲಿ ಹೊಸದೇನು ಸಿಗಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಟ್ರೇಲರ್ನಲ್ಲಿ ಉತ್ತರ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.