ಒಟಿಟಿಗೆ ಬಂತು ಕನ್ನಡದ ಹಿಟ್ ಚಿತ್ರ; ಕಥೆಯಲ್ಲಿದೆ ಟ್ವಿಸ್ಟ್ ಮೇಲೆ ಟ್ವಿಸ್ಟ್
ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್' ಕನ್ನಡ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ಶಶಾಂಕ್ ನಿರ್ದೇಶನದ ಈ ಚಿತ್ರ ಬೆಟ್ಟಿಂಗ್ ಲೋಕದ ಬಗ್ಗೆ ವಿಸ್ತಾರವಾಗಿ ವಿವರಿಸುತ್ತದೆ. ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದ್ದು, ಅದರಲ್ಲೂ ಕ್ಲೈಮ್ಯಾಕ್ಸ್ ರೋಚಕವಾಗಿದೆ. ವೀಕೆಂಡ್‌ನಲ್ಲಿ ನೋಡಲು ಇದೊಂದು ಅತ್ಯುತ್ತಮ ಆಯ್ಕೆ. ಈ ಹಿಟ್ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಆನಂದಿಸಿ.

ಈ ವರ್ಷ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದ್ದು ಬಹಳಷ್ಟು ಸಿನಿಮಾಗಳು ಹಿಟ್ ಆಗಿವೆ.‘ಸು ಫ್ರಮ್ ಸೋ’ ಸಿನಿಮಾ ಸಣ್ಣ ಬಜೆಟ್ ಚಿತ್ರವಾದರೂ ನೂರು ಕೋಟಿ ರೂಪಾಯಿ ಕ್ಲಬ್ ಸೇರಿತು. ಅದೇ ರೀತಿ ಕಳೆದ ಅಕ್ಟೋಬರ್ ಅಂತ್ಯಕ್ಕೆ ತೆರೆಗೆ ಬಂದ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಈಗ ಒಟಿಟಿಗೆ ಕಾಲಿಟ್ಟಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಆರಂಭಿಸಿದೆ. ಶಶಾಂಕ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ವೀಕೆಂಡ್‌ನಲ್ಲಿ ನೋಡಲು ಒಂದೊಳ್ಳೆಯ ಆಯ್ಕೆ.
ಚಿತ್ರದ ಒಂದೆಳೆ..
ಕ್ರಿಸ್ಟಿ (ಕೃಷ್ಣ) ನಿಷ್ಠಾವಂತ ಪೊಲೀಸ್ ಕಾನ್ಸ್ಟೆಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ಮಗ. ಆದರೆ, ಈತನಿಗೆ ಒಳ್ಳೆಯ ರೀತಿಯಲ್ಲಿ ಹಣ ಮಾಡಿ ಅಭ್ಯಾಸವೇ ಇಲ್ಲ. ಅಡ್ಡ ದಾರಿ ಹಿಡಿಯುವ ಈತ ಸಾಕಷ್ಟು ಹಣ ಮಾಡುತ್ತಾನೆ. ನಂತರ ಹಣ ಆತನ ಕೈಯಲ್ಲಿ ಉಳಿಯುತ್ತಾ? ಕೊನೆಯಲ್ಲಿ ಏನಾಗುತ್ತದೆ ಎಂಬುದು ಸಿನಿಮಾದ ಕಥೆ.ಡ್ರ್ಯಾಗನ್ ಮಂಜು ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.
After the successful run in theatres, #BratTheMovie Streaming now on#AmazonPrime #ಬ್ರ್ಯಾಟ್ #WatchNow#DarlingKrishna #Shashank@PrimeVideoIN@darlingkrishnaa @Manishakandkur@aanandaaudio @ArjunJanyaMusic@manjukandkur@AnairaGupta pic.twitter.com/OZF5TNr2Ci
— Shashank (@Shashank_dir) November 28, 2025
ಬೆಟ್ಟಿಂಗ್ ವಿಷಯ
ಕನ್ನಡದಲ್ಲಿ ಬೆಟ್ಟಿಂಗ್ ಬಗ್ಗೆ ಒಂದಷ್ಟು ಸಿನಿಮಾಗಳು ಬಂದಿದ್ದವು. ಆದರೆ, ಯಾವುದರಲ್ಲೂ ಮಾಹಿತಿ ವಿಸ್ತಾರವಾಗಿ ಇರಲಿಲ್ಲ. ಆದರೆ, ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾದಲ್ಲಿ ಅದನ್ನು ವಿಸ್ತೃತವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ದಂಧೆ ಹೇಗೆ ನಡೆಯುತ್ತದೆ ಎಂಬುದರ ಇಂಚಿಂಚು ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಬ್ರ್ಯಾಟ್ ವಿಮರ್ಶೆ: ಜೂಜಿನ ಅಡ್ಡೆಯಲ್ಲಿ ಡಾರ್ಲಿಂಗ್ ಕೃಷ್ಣ ಕಮಾಲ್; ಸಂದೇಶದ ಜೊತೆ ಥ್ರಿಲ್
ಕ್ಲೈಮ್ಯಾಕ್ಸ್
‘ಬ್ರ್ಯಾಟ್’ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ಅದರಲ್ಲೂ ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್ ಕೊಡಲಾಗುತ್ತದೆ. ಅಷ್ಟಕ್ಕೂ ಏನು ಆ ಟ್ವಿಸ್ಟ್? ಅದನ್ನು ಸಿನಿಮಾ ನೋಡಿಯೇ ಎಂಜಾಯ್ ಮಾಡಬೇಕು. ವೀಕೆಂಡ್‌ನಲ್ಲಿ ಕನ್ನಡದ್ದೇ ಒಂದು ಸಿನಿಮಾ ನೋಡಿ ಆನಂದಿಸಬೇಕು ಎಂದರೆ ‘ಬ್ರ್ಯಾಟ್’ ಉತ್ತಮ ಆಯ್ಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




