ಬಾಳಿವುಡ್ ಬೆಡಗಿ ಕಂಗನಾ ರಣಾವತ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡ ಬೆನ್ನಲ್ಲೇ ಡಿಲೀಟ್ ಮಾಡಿದ್ದರು. ಅದರಲ್ಲಿ ಹೊಸ ಸಮಾಚಾರ ಒಂದಿತ್ತು. ಅದೇನು ಎಂಬುದಕ್ಕೆ ಉತ್ತರ ಏಕ್ತಾ ಕಪೂರ್ ಶೇರ್ ಮಾಡಿದ ವಿಡಿಯೋದಲ್ಲಿದೆ. ಹೌದು. ಹಿಂದಿ ಕಿರುತೆರೆ ಹಾಗೂ ಬಾಲಿವುಡ್ನಲ್ಲಿ ಏಕ್ತಾ ಕಪೂರ್ (Ekta Kapoor) ದೊಡ್ಡ ಹೆಸರು. ಹಲವು ಸೂಪರ್ ಹಿಟ್ ಧಾರವಾಹಿಗಳನ್ನು ನಿರ್ಮಿಸಿದ ಕೀರ್ತಿ ಅವರಿಗಿದೆ. ಇದೀಗ ಹೊಸ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಸೂಚ್ಯವಾಗಿ ತಮ್ಮ ಹೊಸ ಪ್ರಯತ್ನದ ಕುರಿತು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಏಕ್ತಾ ತಮ್ಮ ವಿಡಿಯೋದಲ್ಲಿ ರಿಯಾಲಿಟಿ ಶೋ (Reality Show) ಮಾದರಿಯ ಶೋ ಅದು ಎಂಬುದನ್ನು ಹೇಳಿದ್ದಾರೆ. ಆದರೆ ನೃತ್ಯ ಅಥವಾ ಹಾಡುಗಾರಿಕೆ ಇವುಗಳಲ್ಲಿ ಅವರಿಗೆ ಆಸಕ್ತಿ ಇಲ್ಲವಂತೆ. ಹೊಸ ಪ್ರಯತ್ನ ಇದಾಗಿರಲಿದೆ ಎಂದು ಅವರು ಹೇಳಿದ್ದಾರೆ. ಈ ಹೊಸ ಪ್ರಾಜೆಕ್ಟ್ಗೆ ಹಲವರು ಕಾಯುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದು ಏಕ್ತಾ ಹೇಳಿದ್ದಾರೆ. ಹಲವು ಮೂಲಗಳ ಪ್ರಕಾರ ಈ ಶೋನಲ್ಲಿ ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಭಾಗಿಯಾಗಲಿದ್ದಾರೆ!
ಕಂಗನಾ ಪ್ರಸ್ತುತ ಹಲವು ಸಿನಿಮಾ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಅವರು ಹೊಸ ಪ್ರಯತ್ನಕ್ಕೆ ಕೈಜೋಡಿಸಲಿದ್ದಾರೆ ಎಂಬ ಮಾಹಿತಿ ಬಾಲಿವುಡ್ ಅಂಗಳದಿಂದ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಂಗನಾ ಕೂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಜತೆಗೆ ಈ ಸುದ್ದಿಯನ್ನು ನಿಜ ಎಂದಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಕಂಗನಾ ಡಿಲೀಟ್ ಮಾಡಿದ ಪೋಸ್ಟ್ನಲ್ಲಿ ಏನಿತ್ತು?
ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದ್ದಿ ಹಂಚಿಕೊಂಡಿದ್ದರು. ‘ಲೇಡಿ ಬಾಸ್ ಏಕ್ತಾ ಕಪೂರ್ ನಿರ್ಮಾಣದ ಶೋವನ್ನು ನಡೆಸಿಕೊಡಲಿದ್ದೇನೆ’ ಎಂದು ಅವರು ಹೇಳಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ಅನೌನ್ಸ್ ಆಗುವವರೆಗೆ ವಿಷಯ ಸರ್ಪ್ರೈಸ್ ಆಗಿರಲಿ ಎಂಬ ಕಾರಣಕ್ಕೆ ಅವರು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಅಸಲಿಗೆ ಅಭಿಮಾನಿಗಳಿಗೆ ಈಗಾಗಲೇ ವಿಷಯ ಮುಟ್ಟಿದ್ದು, ಸಖತ್ ಥ್ರಿಲ್ ಆಗಿದ್ದಾರೆ.
ಏನಿದು ಹೊಸ ಶೋ? ಅದು ಹೇಗಿರಲಿದೆ?
ಏಕ್ತಾ ಕಪೂರ್ ನಿರ್ಮಾಣದ ಈ ಹೊಸ ಶೋ ಸಖತ್ ಕುತೂಹಲ ಹುಟ್ಟಿಸುವಂತಿದೆ. ಕಾರಣ ಅಮೇರಿಕಾದ ಜನಪ್ರಿಯ ರಿಯಾಲಿಟಿ ಶೋವಾದ ‘ಟೆಂಪ್ಟೇಶನ್ ಐಲ್ಯಾಂಡ್’ನಂತೆಯೇ ಇದೂ ಮೂಡಿಬರಲಿದೆ ಎನ್ನಲಾಗಿದೆ. ಯುವಕರು ಮತ್ತು ಯುವತಿಯರು ಐಲ್ಯಾಂಡ್ ಒಂದರಲ್ಲಿ ಲಾಕ್ ಆಗುತ್ತಾರೆ. ಅವರಿಗೆ ವಿವಿಧ ಟಾಸ್ಕ್ಗಳನ್ನು ನೀಡಲಾಗುತ್ತದೆ. ಅದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಲಾಗುತ್ತದೆ. ಇದು ಈ ಶೋನ ಮೂಲ ರೂಪ.
ಕಂಗನಾ ಈ ಶೋನಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಮಾತ್ರ ಹೊತ್ತಿಲ್ಲ. ನಿರ್ಣಾಯಕಿ ಅಥವಾ ಪೊಲೀಸ್ ಎಂದು ಅವರನ್ನು ಗುರುತಿಸಲಾಗುತ್ತದೆ. ಟಾಸ್ಕ್ ನೀಡುವುದು ಅದನ್ನು ನಿರ್ಣಯ ಮಾಡುವುದು ಕಂಗನಾ ಕೆಲಸವಾಗಿರುತ್ತದೆ. ಈ ಶೋ ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗಲಿದೆ. ಇಂದು ಅಂದರೆ ಫೆ.3ರಂದು ಶೋ ಕುರಿತು ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್ ಬಾಸ್ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ
ಹಲವು ಆತಂಕಗಳ ನಡುವೆಯೇ ಬಾಕ್ಸಾಫೀಸ್ನಲ್ಲಿ ಭರಪೂರ ಬೆಳೆ ತೆಗೆದ ‘ಬಂಗಾರ್ರಾಜು’; ಕಲೆಕ್ಷನ್ ಎಷ್ಟು ಗೊತ್ತಾ?