Kantara Hindi OTT: ‘ಕಾಂತಾರ’ ಹಿಂದಿ ವರ್ಷನ್​ ಒಟಿಟಿ ರಿಲೀಸ್​ ಯಾವಾಗ? ಪ್ರಶ್ನೆಗಳಿಗೆ ಸುಸ್ತಾಗಿ ಡೇಟ್​ ತಿಳಿಸಿದ ರಿಷಬ್​ ಶೆಟ್ಟಿ

Kantara On Netflix | Rishab Shetty: ಉತ್ತರ ಭಾರತದ ಪ್ರೇಕ್ಷಕರ ವಲಯದಲ್ಲಿ ನೆಟ್​ಫ್ಲಿಕ್ಸ್​ ಚಂದಾದಾರರು ಜಾಸ್ತಿ ಇದ್ದಾರೆ. ಹಾಗಾಗಿ ‘ಕಾಂತಾರ’ ಹಿಂದಿ ವರ್ಷನ್ ಪ್ರಸಾರ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಪಡೆದುಕೊಂಡಿದೆ.

Kantara Hindi OTT: ‘ಕಾಂತಾರ’ ಹಿಂದಿ ವರ್ಷನ್​ ಒಟಿಟಿ ರಿಲೀಸ್​ ಯಾವಾಗ? ಪ್ರಶ್ನೆಗಳಿಗೆ ಸುಸ್ತಾಗಿ ಡೇಟ್​ ತಿಳಿಸಿದ ರಿಷಬ್​ ಶೆಟ್ಟಿ
ರಿಷಬ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Dec 07, 2022 | 8:46 AM

ಈ ವರ್ಷ ಬ್ಲಾಕ್​ ಬಸ್ಟರ್​ ಎನಿಸಿಕೊಂಡ ‘ಕಾಂತಾರ’ ಸಿನಿಮಾ (Kantara Movie) ಒಟಿಟಿಗೂ ಕಾಲಿಟ್ಟು ಮೋಡಿ ಮಾಡುತ್ತಿದೆ. ಕನ್ನಡದ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ತುಳು ಹಾಗೂ ಹಿಂದಿಗೂ ಡಬ್​ ಆಗಿ ಬಿಡುಗಡೆ ಆಗಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ವರ್ಷನ್​ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಪ್ರಸಾರ ಆಗುತ್ತಿದೆ. ಆದರೆ ‘ಕಾಂತಾರ’ ಹಿಂದಿ (Kantara Hindi) ವರ್ಷನ್​ ಇನ್ನೂ ಒಟಿಟಿಗೆ ಬಂದಿಲ್ಲ. ಈ ಬಗ್ಗೆ ಉತ್ತರ ಭಾರತದ ಪ್ರೇಕ್ಷಕರು ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ. ಹಿಂದಿಯಲ್ಲಿ ಕಾಂತಾರ ಸ್ಟ್ರೀಮಿಂಗ್​ ಯಾವಾಗ ಶುರುವಾಗಲಿದೆ ಎಂಬುದನ್ನು ಈ ಸ್ವತಃ ರಿಷಬ್​ ಶೆಟ್ಟಿ (Rishab Shetty) ತಿಳಿಸಿದ್ದಾರೆ. ಡಿಸೆಂಬರ್​ 9ರಿಂದ ‘ನೆಟ್​ಫ್ಲಿಕ್ಸ್​’ ಮೂಲಕ ಹಿಂದಿ ಪ್ರೇಕ್ಷಕರು ‘ಕಾಂತಾರ’ ವೀಕ್ಷಿಸಬಹುದು.

ಈ ಸುದ್ದಿಯನ್ನು ತಿಳಿಸಲು ನೆಟ್​ಫ್ಲಿಕ್ಸ್​ ಒಂದು ವಿಶೇಷ ಪ್ರೋಮೋ ಹಂಚಿಕೊಂಡಿದೆ. ಮನೆಯಲ್ಲಿ ಕುಳಿತಿರುವ ರಿಷಬ್​ ಶೆಟ್ಟಿ ಅವರಿಗೆ ಸಾಕಷ್ಟು ಮೆಸೇಜ್​ಗಳು ಬರುತ್ತವೆ. ಎಲ್ಲರೂ ‘ಕಾಂತಾರ’ ಹಿಂದಿ ವರ್ಷನ್​ ಒಟಿಟಿ ರಿಲೀಸ್​ ಬಗ್ಗೆಯೇ ಪ್ರಶ್ನೆ ಕೇಳ್ತಾರೆ. ಉತ್ತರಿಸಲಾಗದೇ ರಿಷಬ್​ ಸುಸ್ತಾಗುತ್ತಾರೆ. ಫುಡ್​ ಡೆಲಿವರಿ ನೀಡಲು ಬಂದ ವ್ಯಕ್ತಿ ಕೂಡ ಅದೇ ಪ್ರಶ್ನೆ ಕೇಳುತ್ತಾನೆ. ಇನ್ನೂ ಸುಮ್ಮನಿದ್ದರೆ ಕಷ್ಟ ಆಗುತ್ತೆ ಅಂತ ತಿಳಿದ ರಿಷಬ್​ ಶೆಟ್ಟಿ ಅವರು ಡೇಟ್​ ಅನೌನ್ಸ್​ ಮಾಡುತ್ತಾರೆ.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ: Rishab Shetty: ‘ಕಾಂತಾರ’ ಹೀರೋ ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಕಲಬುರಗಿ ಅಭಿಮಾನಿಗಳು

ನೆಟ್​ಫ್ಲಿಕ್ಸ್ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಈಗ ವೈರಲ್​ ಆಗಿದೆ. ಉತ್ತರ ಭಾರತದ ಪ್ರೇಕ್ಷಕರ ವಲಯದಲ್ಲಿ ನೆಟ್​ಫ್ಲಿಕ್ಸ್​ ಚಂದಾದಾರರು ಜಾಸ್ತಿ ಇದ್ದಾರೆ. ದಕ್ಷಿಣದಲ್ಲಿ ಅಮೇಜಾನ್​ ಪ್ರೈಂ ಪ್ರಾಬಲ್ಯ ಇದೆ. ಹಾಗಾಗಿ ನೆಟ್​ಫ್ಲಿಕ್ಸ್​ಗೆ ‘ಕಾಂತಾರ’ ಹಿಂದಿ ವರ್ಷನ್​ ಮಾರಾಟವಾಗಿದ್ದರೆ, ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ದಕ್ಷಿಣದ ಭಾಷೆಗಳಲ್ಲಿ ಈ ಚಿತ್ರ ಪ್ರಸಾರ ಆಗುತ್ತಿದೆ.

ಇದನ್ನೂ ಓದಿ: Baba Movie: ಮರು ಬಿಡುಗಡೆ ಆಗ್ತಿದೆ ರಜನಿಕಾಂತ್​ ನಟನೆಯ ‘ಬಾಬಾ’; ಇದಕ್ಕೆ ‘ಕಾಂತಾರ’ ಯಶಸ್ಸು ಕಾರಣವೇ?

‘ಕಾಂತಾರ’ ಸೂಪರ್​ ಹಿಟ್​ ಆದ ಬಳಿಕ ರಿಷಬ್​ ಶೆಟ್ಟಿ ಅವರ ಡಿಮ್ಯಾಂಡ್​ ಹೆಚ್ಚಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಈಗ ಅವರು ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ‘ಕಾಂತಾರ’ ಸಕ್ಸಸ್​ ಆಗುವುದಕ್ಕೂ ಮುನ್ನ ರಿಷಬ್​ ಶೆಟ್ಟಿ ಅವರು ಒಂದಷ್ಟು ಸಿನಿಮಾಗಳನ್ನು ಘೋಷಿಸಿದ್ದರು. ಆ ಪೈಕಿ ಕೆಲವು ಚಿತ್ರಗಳ ಕೆಲಸಗಳು ಕೂಡ ಆರಂಭ ಆಗಿದ್ದವು. ಈಗ ಅವುಗಳನ್ನೇ ಮುಂದುವರಿಸುತ್ತಾರೋ ಅಥವಾ ಹೊಸ ಪ್ರಾಜೆಕ್ಟ್​ ಅನೌನ್ಸ್​ ಮಾಡುತ್ತಾರೋ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:46 am, Wed, 7 December 22

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್