AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಯನತಾರಾಗೆ ನಾನು ಅವಮಾನ ಮಾಡಿಲ್ಲ’; ಸ್ಪಷ್ಟನೆ ನೀಡಿದ ಕರಣ್ ಜೋಹರ್

ಕರಣ್ ಜೋಹರ್ ಈ ಬಾರಿ ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ವಿವಾದ ಹುಟ್ಟಿಕೊಳ್ಳಬಹುದಾದ ಪ್ರಶ್ನೆಗಳನ್ನು ಅವರು ಕೇಳುತ್ತಿಲ್ಲ. ಆದಾಗ್ಯೂ ಒಂದು ವಿವಾದ ಆಗಿದೆ.

‘ನಯನತಾರಾಗೆ ನಾನು ಅವಮಾನ ಮಾಡಿಲ್ಲ’; ಸ್ಪಷ್ಟನೆ ನೀಡಿದ ಕರಣ್ ಜೋಹರ್
ಕರಣ್​-ನಯನತಾರಾ
TV9 Web
| Edited By: |

Updated on: Jul 28, 2022 | 3:15 PM

Share

ಕರಣ್ ಜೋಹರ್ (Karan Johar) ಅವರು ‘ಕಾಫಿ ವಿತ್ ಕರಣ್’ ಶೋ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಸೀಸನ್ 7 ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಒಟಿಟಿಯಲ್ಲಿ ಮಾತ್ರ ಈ ಚಾಟ್​ ಶೋ ಪ್ರಸಾರ ಕಾಣುತ್ತಿದೆ ಅನ್ನೋದು ವಿಶೇಷ. ಈ ಬಾರಿಯ ಶೋನಲ್ಲೂ ಕೆಲವು ವಿವಾದಗಳು ಹುಟ್ಟಿಕೊಂಡಿವೆ. ಇದರಲ್ಲಿ ಕರಣ್ ಜೋಹರ್ ಅವರ ನೇರ ತಪ್ಪು ಇಲ್ಲದಿದ್ದರೂ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಈಗ ಕರಣ್ ಸ್ಪಷ್ಟನೆ ನೀಡಿದ್ದಾರೆ.

ಈ ಮೊದಲು ‘ಕಾಫಿ ವಿತ್ ಕರಣ್​’ ಶೋಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಈ ಶೋ ಬ್ಯಾನ್ ಮಾಡುವಂತೆ ಆಗ್ರಹ ಕೇಳಿ ಬಂದ ಉದಾಹರಣೆಯೂ ಇದೆ. ಈ ಕಾರಣಕ್ಕೆ ಕರಣ್ ಜೋಹರ್ ಈ ಬಾರಿ ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ವಿವಾದ ಹುಟ್ಟಿಕೊಳ್ಳಬಹುದಾದ ಪ್ರಶ್ನೆಗಳನ್ನು ಅವರು ಕೇಳುತ್ತಿಲ್ಲ. ಆದಾಗ್ಯೂ ಒಂದು ವಿವಾದ ಆಗಿದೆ.

ಕಳೆದ ವಾರದ ಎಪಿಸೋಡ್​ನಲ್ಲಿ ಅಕ್ಷಯ್ ಕುಮಾರ್ ಹಾಗೂ ಸಮಂತಾ ಅವರು ‘ಕಾಫಿ ವಿತ್​ ಕರಣ್​’ ಶೋಗೆ ಆಗಮಿಸಿದ್ದರು. ಈ ವೇಳೆ ಸಮಂತಾಗೆ ಕರಣ್​ ಜೋಹರ್​ ಒಂದು ಪ್ರಶ್ನೆ ಕೇಳಿದ್ದರು. ‘ದಕ್ಷಿಣ ಭಾರತದಲ್ಲಿ ಈಗ ಟಾಪ್​ ನಟಿ ಯಾರು’ ಎಂಬುದು ಪ್ರಶ್ನೆ ಆಗಿತ್ತು. ಇದಕ್ಕೆ ಸಮಂತಾ ಅವರು ನಯನತಾರಾ ಎಂಬ ಉತ್ತರ ಹೇಳಿದ್ದರು. ‘ನಯನತಾರಾ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ’ ಎಂದು ಕರಣ್ ಉತ್ತರಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಯನತಾರಾ ಫ್ಯಾನ್ಸ್ ಕರಣ್ ಜೋಹರ್ ಮೇಲೆ ಕೆಂಡ ಕಾರಿದ್ದರು.

ಇದಕ್ಕೆ ಕರಣ್ ಜೋಹರ್ ಅವರಿಂದ ಸ್ಪಷ್ಟನೆ ನೀಡುವ ಕೆಲಸ ಆಗಿದೆ. ‘ನಾನು ನಯನತಾರಾಗೆ ಅವಮಾನ ಮಾಡಿಲ್ಲ. Ormax ವರದಿಯಲ್ಲಿ ಏನು ಇತ್ತೋ ನಾನು ಅದನ್ನು ಹೇಳಿದ್ದೇನೆ. ಆ ಪಟ್ಟಿಯಲ್ಲಿ ನಯನತಾರಾ ಅವರ ಹೆಸರು ಇರಲಿಲ್ಲ. ನಯನತಾರಾ ಅಭಿಮಾನಿಗಳು ಈ ಸಂಭಾಷಣೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದಿದ್ದಾರೆ ಕರಣ್. ಈ ಮೂಲಕ ನಯನತಾರಾ ಅಭಿಮಾನಿಗಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ‘ಮನೆಗೆ ನುಗ್ಗಿ ಹೊಡೆದಿದ್ದೆ’; ‘ಕಾಫಿ ವಿತ್ ಕರಣ್​’ ಶೋ ಆರಂಭಕ್ಕೂ ಮುನ್ನ ಕರಣ್ ಜೋಹರ್​ಗೆ ಹಳೆ ಘಟನೆ ನೆನಪಿಸಿದ ಕಂಗನಾ

ಇಂದಿನ (ಜುಲೈ 28) ಎಪಿಸೋಡ್​ನಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅವರು ಆಗಮಿಸುತ್ತಿದ್ದಾರೆ. ಈಗಾಗಲೇ ಈ ಶೋನ ಪ್ರೋಮೋ ಸಾಕಷ್ಟು ವೈರಲ್ ಆಗಿದೆ. ವೈಯಕ್ತಿಕ ಪ್ರಶ್ನೆಗಳನ್ನು ವಿಜಯ್ ದೇವರಕೊಂಡಗೆ ಕೇಳಲಾಗಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ