ಓಟಿಟಿಗೆ ಕಾಲಿಟ್ಟ ಲೋಕೇಶ್ ಕನಕರಾಜ್ ನಟನೆಯ ‘ಡಿಸಿ’ ಸಿನಿಮಾ; ಎಲ್ಲಿ ವೀಕ್ಷಿಸಬಹುದು?
ಲೋಕೇಶ್ ಕನಕರಾಜ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ 'ಡಿಸಿ' ಕ್ರೈಮ್ ಆ್ಯಕ್ಷನ್ ಸಿನಿಮಾ ಇದೀಗ ಸನ್ ಎನ್‌ಎಕ್ಸ್‌ಟಿ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಥಿಯೇಟರ್‌ನಲ್ಲಿ 100 ಕೋಟಿಗೂ ಅಧಿಕ ಗಳಿಸಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಈ ಚಿತ್ರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಲಭ್ಯವಿದ್ದು, ಅನಿರುದ್ಧ್ ಹಿನ್ನೆಲೆ ಸಂಗೀತ ಮತ್ತು ಅರುಣ್ ಮಾಥೇಶ್ವರನ್ ನಿರ್ದೇಶನ ಸಿನಿಮಾಗೆ ಮೆರುಗು ನೀಡಿದೆ.

ಮುಖ್ಯಾಂಶಗಳು
- ಒಟಿಟಿಗೆ ಲಗ್ಗೆ ಇಟ್ಟ 'ಡಿಸಿ'
- ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ
- ಪ್ರಸಾರ ಎಲ್ಲೆಲ್ಲಿ?
ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಡಿಸಿ’ ಸಿನಿಮಾ ಈಗ ಓಟಿಟಿ ಅಂಗಳಕ್ಕೆ ಪ್ರವೇಶಿಸಿದೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಕ್ರೈಮ್ ಆ್ಯಕ್ಷನ್ ಡ್ರಾಮಾ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಥಿಯೇಟರ್‌ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.
ಸನ್ ಎನ್ಎಕ್ಸ್‌ಟಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ಇಂದಿನಿಂದ (ಸೆಪ್ಟೆಂಬರ್ 4) ಪ್ರಸಾರವಾಗುತ್ತಿದೆ. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿರುವುದರಿಂದ ಸಿನಿಮಾ ಮತ್ತಷ್ಟು ಸುಲಭದಲ್ಲಿ ಅರ್ಥವಾಗಲಿದೆ.
‘ಡಿಸಿ’ ಸಿನಿಮಾಗೆ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ನಾಯಕಿ ವಾಮಿಮಿ ಗಬ್ಬಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪೋಷಕ ಪಾತ್ರದಲ್ಲಿ ನಟಿಸಿರುವ ಸಂಜನಾ ಕೃಷ್ಣಮೂರ್ತಿ ಗಮನ ಸೆಳೆದಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿರುವ ಈ ಚಿತ್ರ ಓಟಿಟಿಯಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ‘ಡಿಸಿ’ ಸಿನಿಮಾದ ಗಳಿಕೆ
ಲೋಕೇಶ್ ಕನಕರಾಜ್ ನಾಯಕನಾಗಿ ಪಾದಾರ್ಪಣೆ ಮಾಡಿರುವ ‘ಡಿಸಿ’ ಸಿನಿಮಾ 25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 106 ಕೋಟಿ ರೂಪಾಯಿಗೂ ಅಧಿಕ ಒಟ್ಟು ಗಳಿಕೆ ಮಾಡುವ ಮೂಲಕ ಭರ್ಜರಿ ಕಮರ್ಷಿಯಲ್ ಹಿಟ್ ಆಗಿ ಹೊರಹೊಮ್ಮಿದೆ. ಭಾರತದಲ್ಲಿ ಈ ಸಿನಿಮಾ ಒಟ್ಟಾರೆ 66 ರಿಂದ 68 ಕೋಟಿ ನಿವ್ವಳ ಗಳಿಕೆ ಕಂಡಿದೆ. ಭಾರತೀಯ ಮಾರುಕಟ್ಟೆಯ ಒಟ್ಟು ಗಳಿಕೆ 79.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ನಟನೆಯಲ್ಲಿ ಸಕ್ಸಸ್ ಕಂಡರೂ ಬೇಸರದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್: ಯಾಕೆ ಗೊತ್ತಾ?
ನಿರ್ದೇಶನದಲ್ಲಿ ಮುಂದುವರಿಯುತ್ತಾರಾ?
ಲೋಕೇಶ್ ಕನಗರಾಜ್ ಅವರು ‘ಕೈದಿ 2’, ‘ರೊಲೆಕ್ಸ್’ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಬೇಕಿದೆ. ಅವರು ನಟನೆಯಲ್ಲಿ ಬ್ಯುಸಿ ಆಗಿದ್ದರಿಂದ ಈ ಸಿನಿಮಾಗಳನ್ನು ನಿಲ್ಲಿಸಲಾಗಿತ್ತು. ಈಗ ಅವರು ನಿರ್ದೇಶನದಲ್ಲಿ ಮುಂದುವರಿಯುತ್ತಾರಾ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




