AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯಲ್ಲಿ ಯಾವಾಗ ಬರಲಿದೆ ‘ಗುಂಟೂರು ಖಾರಂ’? ಸಿನಿಪ್ರಿಯರಿಗೆ ಸಿಹಿ ಸುದ್ದಿ

‘ಗುಂಟೂರು ಖಾರಂ’ ಸಿನಿಮಾಗೆ ದೊಡ್ಡ ಓಪನಿಂಗ್​ ಸಿಕ್ಕಿತು ಎಂಬುದು ನಿಜ. ಆದರೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೇ ಬೇರೆ ಸಿನಿಮಾಗಳ ಪೈಪೋಟಿ ಕೂಡ ಜೋರಾಗಿತ್ತು. ಈ ಎಲ್ಲ ಕಾರಣದಿಂದಾಗಿ ದಿನ ಕಳೆದಂತೆ ಈ ಚಿತ್ರಕ್ಕೆ ಥಿಯೇಟರ್​ನಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಯಿತು. ಹಾಗಾಗಿ ನಿರ್ಮಾಪಕರು ಒಟಿಟಿಯತ್ತ ಮುಖ ಮಾಡಿದ್ದಾರೆ.

ಒಟಿಟಿಯಲ್ಲಿ ಯಾವಾಗ ಬರಲಿದೆ ‘ಗುಂಟೂರು ಖಾರಂ’? ಸಿನಿಪ್ರಿಯರಿಗೆ ಸಿಹಿ ಸುದ್ದಿ
ಮಹೇಶ್​ ಬಾಬು
ಮದನ್​ ಕುಮಾರ್​
|

Updated on: Jan 20, 2024 | 3:20 PM

Share

ನಟ ಮಹೇಶ್​ ಬಾಬು (Mahesh Babu) ಅವರ ಅಭಿಮಾನಿಗಳು ‘ಗುಂಟೂರು ಖಾರಂ’ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್​ ಮಾಡಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಜನವರಿ 12ರಂದು ರಿಲೀಸ್​ ಆದ ಈ ಸಿನಿಮಾ ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಾಗಲೇ ಸಿನಿಮಾದ ಒಟಿಟಿ ರಿಲೀಸ್ (Guntur Kaaram OTT Release)​ ಬಗ್ಗೆ ಸುದ್ದಿ ಹರಿದಾಡುತ್ತಿದೆ. ‘ಗುಂಟೂರು ಖಾರಂ’ (Guntur Kaaram) ಸಿನಿಮಾ ಆದಷ್ಟು ಬೇಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ವರದಿಗಳ ಪ್ರಕಾರ, ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ಫೆಬ್ರವರಿ 2ನೇ ವಾರದಲ್ಲಿ ಈ ಸಿನಿಮಾ ಸ್ಟ್ರೀಮಿಂಗ್​ ಆರಂಭಿಸಲಿದೆ. ಪಕ್ಕಾ ಡೇಟ್ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

‘ಗುಂಟೂರು ಖಾರಂ’ ಸಿನಿಮಾಗೆ ತ್ರಿವಿಕ್ರಂ ಶ್ರೀನಿವಾಸ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ದೊಡ್ಡ ಓಪನಿಂಗ್​ ಸಿಕ್ಕಿತು ಎಂಬುದು ನಿಜ. ಆದರೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೇ ಬೇರೆ ಸಿನಿಮಾಗಳ ಪೈಪೋಟಿ ಕೂಡ ಜೋರಾಗಿದೆ. ಈ ಎಲ್ಲ ಕಾರಣದಿಂದಾಗಿ ದಿನ ಕಳೆದಂತೆ ‘ಗುಂಟೂರು ಖಾರಂ’ ಸಿನಿಮಾಗೆ ಥಿಯೇಟರ್​ನಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಯಿತು. ಹಾಗಾಗಿ ನಿರ್ಮಾಪಕರು ಒಟಿಟಿಯತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್​ ಖಾನ್​; ಮಹೇಶ್​ ಬಾಬು ಫ್ಯಾನ್ಸ್​ಗೆ ಖುಷಿ

ಟಾಲಿವುಡ್​ನ ಯಾವುದೇ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡ ಬಳಿಕ ಒಟಿಟಿಗೆ ಬರಬೇಕು ಎಂದರೆ ಕನಿಷ್ಠ ನಾಲ್ಕು ವಾರಗಳು ಕಳೆದಿರಬೇಕು. ಅದರ ಅಂದಾಜಿನಲ್ಲಿ ಹೇಳುವುದಾದರೆ ‘ಗುಂಟೂರು ಖಾರಂ’ ಸಿನಿಮಾ ಫೆಬ್ರವರಿ 2ನೇ ವಾರದಲ್ಲಿ ಒಟಿಟಿಯಲ್ಲಿ ಲಭ್ಯವಾಗಲಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್​ ಮಾಡಿಕೊಂಡವರು, ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್​ ಮಾಡಬೇಕು ಎನ್ನುವರು ಇನ್ನು ಕೆಲವೇ ದಿನಗಳು ಕಾಯಬೇಕು.

ಇದನ್ನೂ ಓದಿ: Guntur Kaaram: ಮಹೇಶ್​ ಬಾಬು ಮನೆಯಲ್ಲಿ ಪಾರ್ಟಿ ಮಾಡಿದ ನಟಿ ಶ್ರೀಲೀಲಾ

ಮಹೇಶ್​ ಬಾಬು ಜೊತೆ ಶ್ರೀಲೀಲಾ, ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್​ ಮುಂತಾದವರು ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಸಖತ್​ ಮಾಸ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ಸಕ್ಸಸ್​ ಆಗಿದ್ದಕ್ಕೆ ಮಹೇಶ್​ ಬಾಬು ಅವರ ಮನೆಯಲ್ಲಿ ಇತ್ತೀಚೆಗೆ ಪಾರ್ಟಿ ಮಾಡಲಾಯಿತು. ಆ ಪಾರ್ಟಿಯನ್ನು ಚಿತ್ರತಂಡದ ಅನೇಕರು ಹಾಗೂ ಮಹೇಶ್​ ಬಾಬು ಕುಟುಂಬದವರು ಭಾಗಿ ಆಗಿದ್ದರು. ಆ ಸಂದರ್ಭದ ಫೋಟೋಗಳು ವೈರಲ್​ ಆಗಿದೆ. ಮುಂದಿನ ಸಿನಿಮಾದಲ್ಲಿ ಮಹೇಶ್​ ಬಾಬು ಅವರು ನಿರ್ದೇಶಕ ಎಸ್​ಎಸ್​ ರಾಜಮೌಳಿ ಜೊತೆ ಕೈ ಜೋಡಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More