ಒಟಿಟಿಗೆ ಬಂತು ಜಾನಿ ಡೆಪ್ vs ಅಂಬರ್ ಹರ್ಡ್ ಪ್ರಕರಣ: ಡಾಕ್ಯು ಸರಣಿಯ ಟ್ರೈಲರ್ ಬಿಡುಗಡೆ ಮಾಡಿದ ನೆಟ್​ಫ್ಲಿಕ್ಸ್

Jhonny Depp: ಖ್ಯಾತ ನಟ ಜಾನಿ ಡೆಪ್ ಹಾಗೂ ನಟಿ ಅಂಬರ್ ಹರ್ಡ್ ನಡುವಿನ ಪ್ರಕರಣದ ಡಾಕ್ಯು ಸರಣಿಯನ್ನು ನೆಟ್​ಫ್ಲಿಕ್ಸ್ ನಿರ್ಮಿಸಿದ್ದು, ಟ್ರೈಲರ್ ಬಿಡುಗಡೆ ಮಾಡಿದೆ.

ಒಟಿಟಿಗೆ ಬಂತು ಜಾನಿ ಡೆಪ್ vs ಅಂಬರ್ ಹರ್ಡ್ ಪ್ರಕರಣ: ಡಾಕ್ಯು ಸರಣಿಯ ಟ್ರೈಲರ್ ಬಿಡುಗಡೆ ಮಾಡಿದ ನೆಟ್​ಫ್ಲಿಕ್ಸ್
ಜಾನಿ ಡೆಪ್-ಆಂಬರ್ ಹರ್ಡ್
Follow us
ಮಂಜುನಾಥ ಸಿ.
|

Updated on: Aug 01, 2023 | 5:55 PM

ಹಾಲಿವುಡ್​ನ (Hollywood) ಖ್ಯಾತ ತಾರಾ ದಂಪತಿ ಆಗಿದ್ದ ಜಾನಿ ಡೆಪ್ (Jhonny Depp) ಹಾಗೂ ಅಂಬರ್ ಹರ್ಡ್​ ಕಿತ್ತಾಟ ಕಳೆದ ವರ್ಷ ಭಾರಿ ದೊಡ್ಡದಾಗಿ ಸದ್ದು ಮಾಡಿತ್ತು. ಯಾವ ಮಟ್ಟಿಗೆಂದರೆ ವಿಶ್ವದ ಹಲವು ಭಾಷೆಗಳಲ್ಲಿ ಇವರ ಸುದ್ದಿಗಳು ಪ್ರಸಾರವಾಗಿದ್ದವು, ಯಾವ ಸಿನಿಮಾ, ಕ್ರಿಕೆಟ್, ಫುಟ್​ಬಾಲ್ ಮ್ಯಾಚ್​ಗಳಿಗೂ ಸಿಗದಷ್ಟು ವೀಕ್ಷಣೆ ನ್ಯಾಯಾಲಯದ ಕಲಾಪಗಳ ಲೈವ್ ಪ್ರಸಾರಕ್ಕೆ ಸಿಕ್ಕಿತ್ತು. ಇವರಿಬ್ಬರ ನ್ಯಾಯಾಲಯದ ವಾದ-ವಿವಾದಗಳ ಲೈವ್ ಕಲಾಪ, ಸಾಕ್ಷಿಧಾರರ ಹೇಳಿಕೆ, ಚಾರ್ಜ್​ ಶೀಟ್, ನ್ಯಾಯಾಲಯದ ತೀರ್ಪುಗಳನ್ನೇ ಆಧರಿಸಿ ನೆಟ್​ಫ್ಲಿಕ್ಸ್ ಡಾಕ್ಯು ಡ್ರಾಮಾ ಬಿಡುಗಡೆ ಮಾಡುತ್ತಿದೆ.

ಜಾನಿ ಡೆಪ್-ಅಂಬರ್ ಹರ್ಡ್​ರ ಜನಪ್ರಿಯ ಕೋರ್ಟ್ ಕಲಾಪದ ಡಾಕ್ಯು ಸರಣಿಯನ್ನು ನೆಟ್​ಫ್ಲಿಕ್ಸ್​ ಬಿಡುಗಡೆ ಮಾಡುತ್ತಿದ್ದು, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಇಬ್ಬರ ನಡುವಿನ ಜಗಳವನ್ನು ಬೇರೊಂದು ಕೋನದಿಂದ ನೋಡುವ ಪ್ರಯತ್ನವನ್ನು ನೆಟ್​ಫ್ಲಿಕ್ಸ್ ಮಾಡಿರುವುದು ಡಾಕ್ಯು ಸರಣಿಯ ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಕೇವಲ ಕೋರ್ಟ್ ಕಲಾಪವನ್ನು ಮಾತ್ರವೇ ಡಾಕ್ಯು ಸರಣಿಯ ವಿಷಯವನ್ನಾಗಿ ಇರಿಸಿಕೊಳ್ಳದೆ ಅದರ ಸುತ್ತ ಬೇರೆ-ಬೇರೆ ವ್ಯಕ್ತಿಗಳು ವ್ಯಕ್ತಪಡಿಸಿದ ಅಭಿಪ್ರಾಯ, ಜನರಲ್ಲಿ ಮೂಡಿದ ಅಭಿಪ್ರಾಯ, ಅದಕ್ಕೆ ಕಾರಣವಾದ ಅಂಶಗಳು, ಜಾನಿ ಡೆಪ್-ಅಂಬರ್​ರ ಪ್ರಕರಣ ಚಳವಳಿಯಾಗಿ ರೂಪುಗೊಂಡ ಬಗೆ ಇನ್ನಿತರೆ ವಿಷಯಗಳನ್ನು ನೆಟ್​ಫ್ಲಿಕ್ಸ್​ನ ಡಾಕ್ಯು ಸರಣಿ ಪರೀಕ್ಷೆಗೆ ಒಳಪಡಿಸಲಿದೆ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ತಿಂಗಳ ವರೆಗೆ ವರ್ಜಿನಿಯಾದ ಕೋರ್ಟ್​ನಲ್ಲಿ ಮಾಜಿ ದಂಪತಿಗಳಾದ ಅಂಬರ್ ಹರ್ಡ್ ಹಾಗೂ ಜಾನಿ ಡೆಪ್​ನ ಪ್ರಕರಣದ ವಿಚಾರಣೆ ನಡೆದಿತ್ತು. ಅಂಬರ್ ಹರ್ಡ್, ಪತ್ರಿಕೆಯೊಂದರಲ್ಲಿ ತಾನು ಜಾನಿ ಡೆಪ್​ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಬರೆದಿದ್ದರು. ಇದರ ವಿರುದ್ಧ ಜಾನಿ ಡೆಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇವರಿಬ್ಬರ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ಒಳಗಿಂದ ಲೈವ್ ಮಾಡಲಾಗಿತ್ತು. ಈ ಲೈವ್ ವಿಚಾರಣೆಯನ್ನು ವಿಶ್ವದಾದ್ಯಂತ ಕೋಟ್ಯಂತರ ಮಂದಿ ವೀಕ್ಷಿಸಿದರು. ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿ ಅಭಿಪ್ರಾಯ ದಾಖಲಿಸಿದ್ದರು.

ಇದನ್ನೂ ಓದಿ:Johnny Depp Amber Heard Case: ಮಾಜಿ ಪತ್ನಿ ವಿರುದ್ಧದ ಕೇಸ್ ಗೆದ್ದು ಸುಮಾರು 116 ಕೋಟಿ ರೂ ಪರಿಹಾರ ಪಡೆದ ಖ್ಯಾತ ನಟ ಜಾನಿ ಡೆಪ್​

ಇಬ್ಬರ ನಡುವಿನ ಪ್ರಕರಣದ ವಿಚಾರಣೆಯ ಸುಮಾರು 200 ಗಂಟೆಗಳ ಫೂಟೇಜ್ ಪ್ರಸಾರವಾಗಿತ್ತು. ಇದನ್ನೇ ಇರಿಸಿಕೊಂಡು ಇದಕ್ಕೆ ಇನ್ನಷ್ಟು ಸೇರಿಸಿ ನೆಟ್​ಫ್ಲಿಕ್ಸ್ ಡಾಕ್ಯು ಸೀರೀಸ್ ತಯಾರಿಸಿದೆ. ಅದನ್ನು ಆಗಸ್ಟ್ 8 ರಂದು ಬಿಡುಗಡೆ ಮಾಡುತ್ತಿದ್ದು, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ.

ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಪ್ರಕರಣದಲ್ಲಿ ಅಂತಿಮವಾಗಿ ನಟ ಜಾನಿ ಡೆಪ್​ಗೆ ಗೆಲುವಾಯ್ತು. ಭಾರಿ ಮೊತ್ತದ ನಷ್ಟ ಪರಿಹಾರವನ್ನು ನಟಿ ಅಂಬರ್ ಹರ್ಡ್ ನೀಡಬೇಕಾಗಿ ಬಂತು. ಅಲ್ಲದೆ ಅಂಬರ್ ಹರ್ಡ್ ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡರು. ದೌರ್ಜನ್ಯದ ಆರೋಪ ಹೊತ್ತಿದ್ದ ಜಾನಿ ಡೆಪ್​ಗೆ ಆರೋಪದಿಂದ ಬಿಡುಗಡೆ ದೊರಕಿತು. ಹಾಲಿವುಡ್​ನ ಟಾಪ್ ನಟರಲ್ಲಿ ಒಬ್ಬರೆಂಬ ಖ್ಯಾತಿಯನ್ನು ಡೆಪ್ ಮರಳಿ ಪಡೆದುಕೊಂಡರು. ಆದರೆ ಅವರ ವಿಶ್ವವಿಖ್ಯಾತ ಪಾತ್ರ ಕ್ಯಾಪ್ಟನ್ ಜಾಕ್ ಸ್ಪಾರೋದಿಂದ ಅವರು ಹೊರಗೆ ಬಂದರು. ಆ ಪಾತ್ರವನ್ನು ಇನ್ನು ಮುಂದೆ ಮಾಡುವುದಿಲ್ಲವೆಂದು ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್