‘ಫಾರ್ಮಾ’ ವೆಬ್ ಸಿರೀಸ್ನಲ್ಲಿ ನಿವಿನ್ ಪೌಲಿ; ಮೊದಲ ಬಾರಿಗೆ ಒಟಿಟಿ ಲೋಕಕ್ಕೆ ಕಾಲಿಟ್ಟ ನಟ
‘ನೂರಾರು ಸತ್ಯ ಘಟನೆಗಳಿಂದ ಪ್ರೇರಿತವಾಗಿ ತಯಾಗುತ್ತಿರುವ ಈ ವೆಬ್ ಸಿರೀಸ್ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದೆ’ ಎಂದು ನಿರ್ದೇಶಕ ಪಿಆರ್ ಅರುಣ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಿವಿನ್ ಪೌಲಿ ಅವರು ಒಟಿಟಿ ಪ್ಲಾಟ್ಫಾರ್ಮ್ಗೆ ಕಾಲಿಡುತ್ತಿರುವುದರಿಂದ ‘ಫಾರ್ಮಾ’ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ (Nivin Pauly) ಅವರು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆಗಲಿರುವ ‘ಫಾರ್ಮಾ’ ವೆಬ್ ಸೀರೀಸ್ (Pharma Web Series) ಮೂಲಕ ಒಟಿಟಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ‘ಫೈನಲ್ಸ್’ ಚಿತ್ರದಿಂದ ಖ್ಯಾತಿ ಗಳಿಸಿದ ನಿರ್ದೇಶಕ ಪಿಆರ್ ಅರುಣ್ ಅವರು ಈ ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಮೂವೀ ಮಿಲ್’ ಸಂಸ್ಥೆ ಮೂಲಕ ಇದು ನಿರ್ಮಾಣ ಆಗಿದೆ. ಅನೇಕ ಹೀರೋಗಳು ಒಟಿಟಿ ಜಗತ್ತಿಗೆ ಕಾಲಿಟ್ಟು ಯಶಸ್ಸು ಕಂಡಿದ್ದಾರೆ. ಇದೇ ಮೊದಲ ಬಾರಿಗೆ ನಿವಿನ್ ಪೌಲಿ ಕೂಡ ಒಟಿಟಿ (OTT) ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೂ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಒಂದು ಕಾಲದಲ್ಲಿ ನಿವಿನ್ ಪೌಲಿ ಅವರು ‘ಬೆಂಗಳೂರು ಡೇಸ್’, ‘ಪ್ರೇಮಂ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಅದೇ ಕಾರಣಕ್ಕಾಗಿ ಅವರು ಒಟಿಟಿಗೆ ಎಂಟ್ರಿ ನೀಡಿದ್ದಾರೆ. ನಿವಿನ್ ಪೌಲಿ ಅವರು ವೆಬ್ ಸರಣಿಯಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಅದು ಈಗ ನಿಜವಾಗಿದೆ. ಈ ವೆಬ್ ಸರಣಿಯಲ್ಲಿ ನಟಿಸುತ್ತಿರುವುದಕ್ಕೆ ನಿವಿನ್ ಪೌಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಬಗೆಯ ಪಾತ್ರಗಳಿಗೆ ಒಗ್ಗುವ ನಿವಿನ್ ಪೌಲಿ ಈಗ ಮಾಲಿವುಡ್ನ ಜನಪ್ರಿಯ ನಟರಲ್ಲಿ ಒಬ್ಬರು
ಅನೇಕ ಸತ್ಯ ಘಟನೆಗಳನ್ನು ಆಧರಿಸಿ ‘ಫಾರ್ಮಾ’ ವೆಬ್ ಸರಣಿ ಮೂಡಿಬರುತ್ತಿದೆ. ‘ನೂರಾರು ಸತ್ಯ ಘಟನೆಗಳನ್ನು ಆಧರಿಸಿ ತಯಾರಾದ ಈ ವೆಬ್ ಸಿರೀಸ್ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದೆ’ ಎಂದು ನಿರ್ದೇಶಕ ಪಿಆರ್ ಅರುಣ್ ಹೇಳಿದ್ದಾರೆ. ಬಾಲಿವುಡ್ನ ರಜತ್ ಕಪೂರ್ ಅವರು ಇದರಲ್ಲಿ ಒಂದು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಮಲಯಾಳಂ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ ಎಂಬುದು ವಿಶೇಷ.
ಇದನ್ನೂ ಓದಿ: ಒಟಿಟಿಗೆ ಬರ್ತಿದೆ ಎರಡು ಡಿಸಾಸ್ಟರ್ ಸಿನಿಮಾ; ಇಲ್ಲಾದರೂ ಸಿಗುತ್ತಾ ಗೆಲುವು?
ಅಭಿನಂದನ್ ರಾಮಾನುಜನ್ ಅವರು ‘ಫಾರ್ಮಾ’ ವೆಬ್ ಸಿರೀಸ್ಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಜೇಕ್ಸ್ ಬಿಜಾಯ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಜಿತ್ ಸಾರಂಗ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 2010ರಿಂದಲೂ ನಿಮಿನ್ ಪೌಲಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಒಟಿಟಿ ಪ್ಲಾಟ್ಫಾರ್ಮ್ಗೆ ಕಾಲಿಡುತ್ತಿರುವುದರಿಂದ ‘ಫಾರ್ಮಾ’ ಮೇಲೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.