AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಸಿನಿಮಾದ ಭರ್ಜರಿ ಒಟಿಟಿ ಡೀಲ್, ಖರೀದಿಸಿದ್ದು ಯಾರು?

Ram Charan: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇತಿಹಾಸ ಬರೆದಿದೆ. ತೆಲುಗು ಚಿತ್ರರಂಗದಲ್ಲಿ ಇನ್ಯಾವ ಸಿನಿಮಾ ಸಹ ಮಾರಾಟವಾಗದ ದುಬಾರಿ ಬೆಲೆಗೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿದೆ. ಶಿವರಾಜ್ ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಹಳ್ಳಿ ಕತೆಯುಳ್ಳ ‘ಪೆದ್ದಿ’ ಸಿನಿಮಾವನ್ನು ಖರೀದಿಸಿದ ಒಟಿಟಿ ಯಾವುದು? ಬೆಲೆ ಎಷ್ಟು?

‘ಪೆದ್ದಿ’ ಸಿನಿಮಾದ ಭರ್ಜರಿ ಒಟಿಟಿ ಡೀಲ್, ಖರೀದಿಸಿದ್ದು ಯಾರು?
Peddi
ಮಂಜುನಾಥ ಸಿ.
|

Updated on: Jun 17, 2025 | 5:41 PM

Share

ರಾಮ್ ಚರಣ್ (Ram Charan) ಮತ್ತೊಮ್ಮೆ ಹಳ್ಳಿಗನ ವೇಷ ಧರಿಸಿದ್ದಾರೆ ‘ಪೆದ್ದಿ’ ಸಿನಿಮಾನಲ್ಲಿ. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಹಳ್ಳಿಯ ಲೋಕಲ್ ಕ್ರಿಕೆಟ್ ಸ್ಟಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿ ಜಾನ್ಹವಿ ಕಪೂರ್. ಸಿನಿಮಾದ ಚಿತ್ರೀಕರಣ ಪ್ರಾರಂಭ ಆದಾಗಿನಿಂದಲೂ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುತ್ತಾ ಬಂದಿದೆ. ಸಿನಿಮಾದ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ದೊಡ್ಡ ಒಟಿಟಿ ಡೀಲ್ ಅನ್ನೇ ಮಾಡಿಕೊಂಡಿದೆ ಸಿನಿಮಾ.

‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಅವರಿಗೆ ವಿಶ್ವಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಹಲವು ದೇಶಗಳಲ್ಲಿ ರಾಮ್ ಚರಣ್ ಸಿನಿಮಾ ವೀಕ್ಷಿಸುತ್ತಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅವರ ‘ಪೆದ್ದಿ’ ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತವನ್ನು ನೆಟ್​ಫ್ಲಿಕ್ಸ್​ ಮುಂಗಡವಾಗಿ ನೀಡಿ ಖರೀದಿ ಮಾಡಿದೆ. ಮೂಲಗಳ ಪ್ರಕಾರ ‘ಪೆದ್ದಿ’ ಸಿನಿಮಾದ ಎಲ್ಲ ಭಾಷೆಯ ಹಕ್ಕುಗಳನ್ನು ಬರೋಬ್ಬರಿ 105 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡಿದೆಯಂತೆ ನೆಟ್​ಫ್ಲಿಕ್ಸ್.

ಇದನ್ನೂ ಓದಿ:ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್​ನಲ್ಲಿ ಅವಘಡ; ಹಲವರಿಗೆ ಗಾಯ

‘ಪೆದ್ದಿ’ ಸಿನಿಮಾದ ಎಲ್ಲ ಭಾಷೆಯ ಆವೃತ್ತಿಯನ್ನು ನೆಟ್​ಫ್ಲಿಕ್ಸ್ ಖರೀದಿ ಮಾಡಿದ್ದು, ನೆಟ್​ಫ್ಲಿಕ್ಸ್​ ರಿಲೀಸ್​ಗಾಗಿ ವಿಶೇಷ ಪ್ರಚಾರದ ಒಪ್ಪಂದವನ್ನು ಸಹ ನಟರೊಡನೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ತೆಲುಗು ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಇತಿಹಾಸ ಈ ವರೆಗೆ ಇಲ್ಲ ಎನ್ನಲಾಗುತ್ತಿದೆ. ‘ಪೆದ್ದಿ’ ಸಿನಿಮಾ ಲೋಕಲ್ ಕತೆಯನ್ನು ಒಳಗೊಂಡಿದ್ದರೂ ಸಹ ಹೈಎಂಡ್ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಅತ್ಯಾಧುನಿಕ ಕ್ಯಾಮೆರಾ ಮತ್ತು ಸೌಂಡ್ ತಂತ್ರಜ್ಞಾನವನ್ನು ಸಿನಿಮಾನಲ್ಲಿ ಬಳಸಲಾಗುತ್ತಿದೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಭಾರಿ ದೊಡ್ಡ ಫ್ಲಾಪ್ ಆಗಿತ್ತು. ಹಾಗಾಗಿ ರಾಮ್ ಚರಣ್​ಗೆ ಹಿಟ್ ಸಿನಿಮಾ ಒಂದರ ಅವಶ್ಯಕತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ‘ಪೆದ್ದಿ’ ಮೇಲೆ ರಾಮ್ ಚರಣ್ ಹೆಚ್ಚು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾ ಅತ್ಯುತ್ತಮವಾಗಿ ಬರುವಂತೆ ಕಾಳಜಿ ವಹಿಸಿದ್ದಾರಂತೆ. ‘ಪೆದ್ದಿ’ ಸಿನಿಮಾವನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಎರಡನೇ ಸಿನಿಮಾ. ಈ ಹಿಂದೆ ‘ಉಪ್ಪೆನ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದರು.

‘ಪೆದ್ದಿ’ ಸಿನಿಮಾದ ಬಳಿಕ ರಾಮ್ ಚರಣ್ ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಹಿಂದಿಯ ಒಂದು ಸಿನಿಮಾನಲ್ಲಿ ಸೋಲೋ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಸಹ ರಾಮ್ ಚರಣ್​ಗೆ ಕತೆ ಹೇಳಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ