ಜೀ5 ಒಟಿಟಿಯಲ್ಲಿ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’: ರಿಷಿಗೆ ಶುಭ ಹಾರೈಸಿದ ರವಿಚಂದ್ರನ್​

| Updated By: ಮದನ್​ ಕುಮಾರ್​

Updated on: Jul 20, 2022 | 7:15 AM

ZEE5 | Kannada Movie: ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಚಿತ್ರಕ್ಕೆ ‘ಕ್ರೇಜಿ ಸ್ಟಾರ್’ ರವಿಚಂದ್ರನ್​ ಸಾಥ್ ನೀಡಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಸಿನಿಮಾ ಬಗ್ಗೆ ರವಿಚಂದ್ರನ್​ ಬರೆದುಕೊಂಡಿದ್ದಾರೆ.

ಜೀ5 ಒಟಿಟಿಯಲ್ಲಿ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’: ರಿಷಿಗೆ ಶುಭ ಹಾರೈಸಿದ ರವಿಚಂದ್ರನ್​
ರಿಷಿ
Follow us on

ಒಟಿಟಿಯಲ್ಲಿ ಹಲವು ಕನ್ನಡ ಸಿನಿಮಾಗಳು ಲಭ್ಯವಾಗುತ್ತಿವೆ. ಇತ್ತೀಚಿಗೆ ರಿಲೀಸ್​ ಆದ ಅನೇಕ ಸಿನಿಮಾಗಳನ್ನು ‘ಜೀ5’ ಒಟಿಟಿ ( ZEE5) ಮೂಲಕ ನೋಡಬಹುದು. ಈಗ ಕನ್ನಡದ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಖ್ಯಾತ ನಟ ರಿಷಿ (Rishi) ಮುಖ್ಯ ಪಾತ್ರ ಮಾಡಿದ್ದಾರೆ. ಟ್ರೇಲರ್​ ಮೂಲಕ ಕಥೆಯ ಎಳೆಯನ್ನು ಬಿಟ್ಟುಕೊಡಲಾಗಿದೆ. ಹೇಗಾದರೂ ಮಾಡಿ ಸಾಯಬೇಕು ಎಂದುಕೊಂಡರೂ ಸಾಯಲಾಗದ ಯುವಕನ ಕಥೆಯನ್ನು ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ (Nodi Swamy Ivanu Irode Heege) ಸಿನಿಮಾ ಒಳಗೊಂಡಿದೆ. ಈ ಟ್ರೇಲರ್​ ತುಂಬ ಫನ್ನಿಯಾಗಿ ಮೂಡಿಬಂದಿದೆ. ಆ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಮೂಡಿಸಲು ಯಶಸ್ವಿ ಆಗಿದೆ.

‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದ ನಟ ರಿಷಿ ಅವರು ಈಗ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಚಿತ್ರದ ಮೂಲಕ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಜೀ5 ಮೂಲಕ ಜುಲೈ 22ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರಿಷಿ ಅವರು ಈ ಬಾರಿ ಕೂಡ ಇಂಟರೆಸ್ಟಿಂಗ್​ ಕಥೆಯನ್ನೇ ಸೆಲೆಕ್ಟ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಈ ಚಿತ್ರಕ್ಕೆ ‘ಕ್ರೇಜಿ ಸ್ಟಾರ್’ ರವಿಚಂದ್ರನ್​ ಅವರು ಸಾಥ್ ನೀಡಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ಬಗ್ಗೆ ರವಿಚಂದ್ರನ್​ ಬರೆದುಕೊಂಡಿದ್ದಾರೆ. ಟ್ರೇಲರ್​ ಲಿಂಕ್​ ಕೂಡ ಶೇರ್​ ಮಾಡಿಕೊಂಡಿದ್ದಾರೆ. ಚಿತ್ರತಂಡಕ್ಕೆ ಅವರು ಶುಭ ಹಾರೈಸಿದ್ದಾರೆ.

‘ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಈ ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಪಿಡುಗು ಹೆಚ್ಚಾಗುತ್ತಿದೆ. ಈ ಎರಡು ಗಂಭೀರ ವಿಚಾರಗಳನ್ನು ಇಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಥೆ ಸೀರಿಯಸ್ ಆಗಿ ಸಾಗುತ್ತಿದ್ದರೂ ನಾಯಕನ ಕಷ್ಟ ಕಂಡಾಗ ಪ್ರೇಕ್ಷಕರಿಗೆ ನಗು ಬರುತ್ತದೆ’ ಎಂದಿದ್ದಾರೆ ರಿಷಿ.

ಧನ್ಯಾ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವಾ ಎಸ್. ಭಾರಧ್ವಜ್, ಭಾವನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾದ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಸ್ಲಾಹುದ್ದೀನ್ ಎನ್.ಎಸ್. ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮ್ರೇಜ್ ಸೂರ್ಯವಂಶಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.