AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liger Trailer: ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಟ್ರೇಲರ್​ ಬಿಡುಗಡೆಗೆ ದಿನಗಣನೆ; ಇಲ್ಲಿದೆ ಸ್ಥಳ-ದಿನಾಂಕದ ಮಾಹಿತಿ

Vijay Devarakonda | Liger Trailer: ‘ಲೈಗರ್​’ ಚಿತ್ರದ ಮೂಲಕ ವಿಜಯ್​ ದೇವರಕೊಂಡ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಾಗಾಗಿ ಪ್ರಚಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

Liger Trailer: ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಟ್ರೇಲರ್​ ಬಿಡುಗಡೆಗೆ ದಿನಗಣನೆ; ಇಲ್ಲಿದೆ ಸ್ಥಳ-ದಿನಾಂಕದ ಮಾಹಿತಿ
ವಿಜಯ್ ದೇವರಕೊಂಡ
TV9 Web
| Edited By: |

Updated on:Jul 19, 2022 | 10:57 AM

Share

ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ನಲ್ಲಿ ಮಿಂಚಲು ಎಲ್ಲ ಸ್ಟಾರ್​ ನಟರು ಪ್ರಯತ್ನಿಸುತ್ತಿದ್ದಾರೆ. ಆ ಪೈಕಿ ವಿಜಯ್​ ದೇವರಕೊಂಡ (Vijay Deverakonda) ಕೂಡ ರೇಸ್​ನಲ್ಲಿ ಇದ್ದಾರೆ. ಟಾಲಿವುಡ್​ನಲ್ಲಿ ಖ್ಯಾತಿ ಪಡೆದ ಬಳಿಕ ಅವರು ಈಗ ಬಾಲಿವುಡ್​ ಮೇಲೆ ಕಣ್ಣಿಟ್ಟಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಈಗಾಗಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಆದರೆ ಅವರು ನಟಿಸಿರುವ ಒಂದು ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗುತ್ತಿರುವುದು ಇದೇ ಮೊದಲು. ಹೌದು, ಅವರು ಅಭಿನಯಿಸಿರುವ ‘ಲೈಗರ್’ (Liger) ಸಿನಿಮಾ ಆಗಸ್ಟ್​ 25ರಂದು ರಿಲೀಸ್​ ಆಗುತ್ತಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನ ಟ್ರೇಲರ್​ (Liger Trailer) ಮೂಲಕ ಸದ್ದು ಮಾಡಲು ಚಿತ್ರತಂಡ ಸಜ್ಜಾಗಿದೆ.

ಬಹುನಿರೀಕ್ಷಿತ ‘ಲೈಗರ್​’ ಸಿನಿಮಾಗೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ವಿಶ್ವವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲೈಗರ್​​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈಗ ಟ್ರೇಲರ್​ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಇದನ್ನೂ ಓದಿ
Image
Kushi Movie: ಸಖತ್ ‘ಖುಷಿ’ಯಲ್ಲಿದ್ದಾರೆ ವಿಜಯ್ ದೇವರಕೊಂಡ- ಸಮಂತಾ; ಏನಿದು ಸಮಾಚಾರ?
Image
ವಿಜಯ್ ದೇವರಕೊಂಡ ಬರ್ತ್​ಡೇಗೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್​
Image
ವಿಜಯ್ ದೇವರಕೊಂಡ ಕಟ್ಟು ಮಸ್ತಾದ ದೇಹ ನೋಡಿ ಫ್ಯಾನ್ಸ್ ಫಿದಾ; ‘ಲೈಗರ್’ ಥೀಮ್ ರಿಲೀಸ್
Image
ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?

ಜುಲೈ 21ರಂದು ‘ಲೈಗರ್​’ ಸಿನಿಮಾದ ಟ್ರೇಲರ್​ ಲಾಂಚ್​ ಆಗಲಿದೆ. ಅದನ್ನು ತಿಳಿಸುವ ಸಲುವಾಗಿ ಒಂದು ಪೋಸ್ಟರ್​ ಹಂಚಿಕೊಳ್ಳಲಾಗಿದೆ. ವಿಜಯ್​ ದೇವರಕೊಂಡ ಅವರ ಮೇಲೆ ಅಟ್ಯಾಕ್​ ಮಾಡಲು 20ಕ್ಕೂ ಅಧಿಕ ಬಾಕ್ಸರ್​ಗಳು ಸುತ್ತುವರಿದಿದ್ದಾರೆ. ಅವರೆಲ್ಲರನ್ನು ಹಿಮ್ಮೆಟ್ಟಿಸಲು ವಿಜಯ್​ ದೇವರಕೊಂಡ ಸಜ್ಜಾಗಿದ್ದಾರೆ. ಈ ರೀತಿಯ ಕಾನ್ಸೆಪ್ಟ್​ನಲ್ಲಿ ಈ ಪೋಸ್ಟರ್​ ಮೂಡಿಬಂದಿದೆ.

ಈ ಚಿತ್ರದ ಮೂಲಕ ವಿಜಯ್​ ದೇವರಕೊಂಡ ಅವರು ಬಾಲಿವುಡ್​ಗೆ ಕಾಲಿಡುತ್ತಿರುವುದರಿಂದ ಪ್ರಚಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೈದರಾಬಾದ್​​ನಲ್ಲಿ ಮತ್ತು ಮುಂಬೈನಲ್ಲಿ ಪ್ರತ್ಯೇಕವಾಗಿ ಟ್ರೇಲರ್​ ಲಾಂಚ್​ ನಡೆಯಲಿದೆ. ಜುಲೈ 21ರಂದು ಬೆಳಗ್ಗೆ 9.30ಕ್ಕೆ ಹೈದರಾಬಾದ್​ನಲ್ಲಿ ಹಾಗೂ ಸಂಜೆ 7.30ಕ್ಕೆ ಹೈದರಾಬಾದ್​ನಲ್ಲಿ ದೊಡ್ಡ ಇವೆಂಟ್​ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರರಾಗಿದ್ದಾರೆ.

ಈ ಮೊದಲು ಬಿಡುಗಡೆ ಮಾಡಲಾಗಿದ್ದ ಫಸ್ಟ್​ ಗ್ಲಿಂಪ್ಸ್​ ವಿಡಿಯೋದಿಂದ ‘ಲೈಗರ್​’ ಸಿನಿಮಾ ಮೇಲೆ ತುಂಬ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ರಿಲೀಸ್​ ಆಗಿರುವ ‘ಅಕ್ಡಿ ಪಕ್ಡಿ..’ ಸಾಂಗ್​ ಸಹ ಧೂಳೆಬ್ಬಿಸುತ್ತಿದೆ. ಇನ್ನೇನಿದ್ದರೂ ಟ್ರೇಲರ್​ ಸದ್ದು ಮಾಡುವುದೊಂದೇ ಬಾಕಿ.

Published On - 10:57 am, Tue, 19 July 22

Follow Us
ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು, ಯಾಕೆ ಗೊತ್ತಾ?
ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು, ಯಾಕೆ ಗೊತ್ತಾ?
ಇಂದು ಈ ರಾಶಿಯವರ ಬಳಿ ಬರಲಿವೆ ಹೊಸ ಹೊಸ ಅವಕಾಶಗಳು!
ಇಂದು ಈ ರಾಶಿಯವರ ಬಳಿ ಬರಲಿವೆ ಹೊಸ ಹೊಸ ಅವಕಾಶಗಳು!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?