ದೊಡ್ಡ ಮೊತ್ತಕ್ಕೆ ‘ಗಾಡ್ ಫಾದರ್’ ಒಟಿಟಿ ಹಕ್ಕು ಖರೀದಿಸಿದ ನೆಟ್ಫ್ಲಿಕ್ಸ್; ಇದಕ್ಕೆ ಸಲ್ಮಾನ್ ಖಾನ್ ಕಾರಣ?
ಚಿರಂಜೀವಿ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವರ್ಷ ತೆರೆಗೆ ಬಂದ ಅವರ ನಟನೆಯ ‘ಆಚಾರ್ಯ’ ಸಿನಿಮಾ ಮಕಾಡೆ ಮಲಗಿತು. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ದೊಡ್ಡ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.
‘ಮೆಗಾಸ್ಟಾರ್’ ಚಿರಂಜೀವಿ (Chiranjeevi) ಹಾಗೂ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ‘ಗಾಡ್ ಫಾದರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಟಾಲಿವುಡ್ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅದಕ್ಕೂ ಮೊದಲು ಈ ಚಿತ್ರದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಖರೀದಿ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಲ್ಮಾನ್ ಖಾನ್ (Salman Khan) ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣದಿಂದಲೇ ಒಟಿಟಿ (OTT) ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಹೇಳಿದ್ದಾರೆ.
ಚಿರಂಜೀವಿ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವರ್ಷ ತೆರೆಗೆ ಬಂದ ಅವರ ನಟನೆಯ ‘ಆಚಾರ್ಯ’ ಸಿನಿಮಾ ಮಕಾಡೆ ಮಲಗಿತು. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ದೊಡ್ಡ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ. ಆದರೆ, ಚಿರಂಜೀವಿಗೆ ಇರುವ ಜನಪ್ರಿಯತೆ ಕುಗ್ಗಿಲ್ಲ. ‘ಗಾಡ್ ಫಾದರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಆಗಿದ್ದು, ಆ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಚೌಹಾಣ್, ಟುವಿನೋ ಥಾಮಸ್ ಹಾಗೂ ವಿವೇಕ್ ಓಬೆರಾಯ್ ನಟಿಸಿದ್ದರು. ‘ಗಾಡ್ ಫಾದರ್’ ಚಿತ್ರದಲ್ಲಿ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಅಭಿನಯಿಸಿದ್ದಾರೆ.
‘ಲೂಸಿಫರ್’ ಸಿನಿಮಾ 30 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 175 ಕೋಟಿ ರೂಪಾಯಿ. ಈಗ ಈ ಚಿತ್ರ ತೆಲುಗಿಗೆ ದೊಡ್ಡ ಬಜೆಟ್ನಲ್ಲಿ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾದಲ್ಲಿ ಅವರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ ಸುದೀಪ್
ಮೂಲಗಳ ಪ್ರಕಾರ ನೆಟ್ಫ್ಲಿಕ್ಸ್ ‘ಗಾಡ್ ಫಾದರ್’ ಚಿತ್ರದ ಒಟಿಟಿ ಹಕ್ಕನ್ನು 57 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಉಳಿದ ಒಟಿಟಿಗೆ ಹೋಲಿಸಿದರೆ ನೆಟ್ಫ್ಲಿಕ್ಸ್ ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿ ಮಾಡಲು ಆಸಕ್ತಿ ತೋರಿಸುವುದು ಕೊಂಚ ಕಡಿಮೆಯೇ. ಆದಾಗ್ಯೂ ‘ಗಾಡ್ ಫಾದರ್’ ಚಿತ್ರವನ್ನು ನೆಟ್ಫ್ಲಿಕ್ಸ್ ಖರೀದಿಸಿದೆ. ಸಲ್ಮಾನ್ ಖಾನ್ ನಟಿಸಿದ್ದಾರೆ ಹಾಗೂ ಚಿತ್ರಕ್ಕೆ ಸೃಷ್ಟಿ ಆಗಿರುವ ಹೈಪ್ನಿಂದ ಸಿನಿಮಾ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ.