ಸಲ್ಮಾನ್ ಹತ್ಯೆಗೆ ಈ ವರ್ಷವೂ ನಡೆದಿತ್ತು ಸಂಚು; ದುರಂತ ತಪ್ಪಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಲಾರೆನ್ಸ್ ಗ್ಯಾಂಗ್​ನ ಕೆಲವರು ಸಲ್ಲು ಫ್ಯಾನ್ಸ್​ ಎಂದು ಹೇಳಿಕೊಂಡು ಶೇರಾನ ಫ್ರೆಂಡ್​ಶಿಪ್​ ಬೆಳೆಸುವ ಪ್ರಯತ್ನ ಮಾಡಿದ್ದರು. ಇದರಿಂದ ಸುಲಭವಾಗಿ ಸಲ್ಲು ಚಲನವಲನ ತಿಳಿಯಬಹುದು ಎಂಬುದು ಇವರ ಆಲೋಚನೆ ಆಗಿತ್ತು.

ಸಲ್ಮಾನ್ ಹತ್ಯೆಗೆ ಈ ವರ್ಷವೂ ನಡೆದಿತ್ತು ಸಂಚು; ದುರಂತ ತಪ್ಪಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ಸಲ್ಮಾನ್
TV9kannada Web Team

| Edited By: Rajesh Duggumane

Sep 16, 2022 | 11:45 AM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಹತ್ಯೆ ಮಾಡಲು 2018ರಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ ವಿಚಾರ ಇತ್ತೀಚೆಗೆ ರಿವೀಲ್ ಆಗಿತ್ತು. ಶಾಕಿಂಗ್ ವಿಚಾರ ಎಂದರೆ ಸಲ್ಲುನ ಹತ್ಯೆ ಮಾಡಲು ಪ್ಲ್ಯಾನ್ ಬಿ ಇತ್ತು. ಫಾರ್ಮ್​​ಹೌಸ್ ಬಳಿ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಈ ವರ್ಷ ಪ್ಲ್ಯಾನ್ ರೂಪುಗೊಂಡಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಇದು ಸಲ್ಲು ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಫ್ಯಾನ್ಸ್ ಕೋರುತ್ತಿದ್ದಾರೆ.

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಬಹುಬೇಡಿಕೆಯ ನಟ. ವಿವಾದಗಳ ಮೂಲಕ ಅವರು ಅನೇಕ ಬಾರಿ ಸುದ್ದಿ ಆಗಿದ್ದಿದೆ. ರಾಜಸ್ಥಾನದಲ್ಲಿ ಅವರು ಕೃಷ್ಣಮೃಗ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಬಿಷ್ಣೋಯ್ ಸಮುದಾಯದವರಿಗೆ ಕೃಷ್ಣಮೃಗ ದೇವರ ಸಮಾನ. ಈ ಪ್ರಾಣಿಯನ್ನು ಸಲ್ಮಾನ್ ಖಾನ್ ಹತ್ಯೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೊಲ್ಲಲು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ.

2018ರಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಲು ಪ್ಲ್ಯಾನ್ ನಡೆದಿತ್ತು. ಆದರೆ, ಅದು ವಿಫಲವಾಯಿತು. ಪ್ಲ್ಯಾನ್ ಬಿಗೆ ಲಾರೆನ್ಸ್ ಆಪ್ತರಲ್ಲಿ ಒಬ್ಬರಾದ ಕಪಿಲ್ ಪಂಡಿತ್ ನೇತೃತ್ವ ವಹಿಸಿಕೊಂಡಿದ್ದ. ಈತ ಶಾರ್ಪ್​ ಶೂಟರ್. ಇತ್ತೀಚೆಗೆ ಇಂಡೋ-ಪಾಕ್ ಬಾರ್ಡರ್​ ಸಮೀಪ ಆತನನ್ನು ಬಂಧಿಸಲಾಗಿದೆ. ಈತನ ವಿಚಾರಣೆ ವೇಳೆ ಪ್ಲ್ಯಾನ್ ಬಿ ವಿಚಾರ ಬೆಳಕಿಗೆ ಬಂದಿದೆ.

ಲಾರೆನ್ಸ್ ಅತ್ಯಾಪ್ತರಾದ ಸಂತೋಷ್ ಜಾಧವ್ ಹಾಗು ಸಚಿನ್ ಬಿಷ್ಣೋಯ್ ಜತೆ ಕಪಿಲ್ ನಿರಂತರವಾಗಿ ಸಂಪರ್ಕದಲ್ಲಿದ್ದ. ಸಲ್ಮಾನ್ ಖಾನ್ ಅವರು ಮುಂಬೈ ಹೊರವಲಯದಲ್ಲಿರುವ ಪನ್​ವೇಲ್​ನಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಈ ಫಾರ್ಮ್​ಹೌಸ್ ದಾರಿಯಲ್ಲಿ ಕಪಿಲ್ ಒಂದು ಮನೆಯನ್ನು ಬಾಡಿಗೆ ತೆಗೆದುಕೊಂಡು ಸಲ್ಲು ಅವರ ಚಲನವಲನಗಳನ್ನು ಗಮನಿಸುತ್ತಿದ್ದ.

ಈ ವರ್ಷದ ಆರಂಭದಲ್ಲಿ ತಿಂಗಳಿಗೂ ಅಧಿಕ ಕಾಲ ಕಪಿಲ್ ಪಂಡಿತ್ ತನ್ನ ಸಹಚರರ ಜತೆ ಅಲ್ಲಿಯೇ ಇದ್ದ. ಅಲ್ಲಿ ಉಳಿದುಕೊಂಡಿದ್ದವರ ಬಳಿ ಸಣ್ಣ ಗನ್​, ಪಿಸ್ತೂಲ್​ಗಳು ಇದ್ದವು. ಸಲ್ಮಾನ್ ಖಾನ್ ಮೇಲೆ ಆಟ್ಯಾಕ್ ಮಾಡಲು ಈ ಗನ್ ಬಳಕೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಅವರು ಇದ್ದರು.

ಸಲ್ಮಾನ್ ಖಾನ್ ಅವರು ಪನ್ವೇಲ್​ಗೆ ಬರುವಾಗ ತನ್ನ ಬಾಡಿಗಾರ್ಡ್​ ಶೇರಾ ಅವರ ಜತೆ ಮಾತ್ರ ಬರುತ್ತಾರೆ. ಬೇರೆ ಯಾವುದೇ ರೀತಿಯ ಭದ್ರತೆಯನ್ನು ಅವರು ಹೊಂದಿರುವುದಿಲ್ಲ. ಈ ವಿಚಾರವನ್ನು ಬಿಷ್ಣೋಯ್ ಗ್ಯಾಂಗ್​ನವರು ಗಮನಿಸಿದ್ದರು. ಇಬ್ಬರೇ ಇದ್ದಾಗ ದಾಳಿ ಮಾಡುವುದು ಸುಲಭ ಎಂಬುದು ಅವರ ಆಲೋಚನೆ ಆಗಿತ್ತು.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಮತ್ತು ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ

ಇದನ್ನೂ ಓದಿ

ಸಲ್ಮಾನ್ ಖಾನ್​​ ಫಾರ್ಮ್​​ಹೌಸ್​ಗೆ ತೆರಳುವ ರಸ್ತೆ ಉತ್ತಮ ಗುಣಮಟ್ಟದಲ್ಲಿಲ್ಲ. ಈ ಕಾರಣಕ್ಕೆ ಸಲ್ಲು ಕಾರಿನ ವೇಗ ಕೇವಲ 25 ಕಿ.ಮೀ ಇರುತ್ತದೆ ಎಂಬುದು ಬಿಷ್ಣೋಯ್​ ಗ್ಯಾಂಗ್​ಗೆ ತಿಳಿದಿತ್ತು. ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಲಾರೆನ್ಸ್ ಗ್ಯಾಂಗ್​ನ ಕೆಲವರು ಸಲ್ಲು ಫ್ಯಾನ್ಸ್​ ಎಂದು ಹೇಳಿಕೊಂಡು ಶೇರಾನ ಫ್ರೆಂಡ್​ಶಿಪ್​ ಬೆಳೆಸುವ ಪ್ರಯತ್ನ ಮಾಡಿದ್ದರು. ಇದರಿಂದ ಸುಲಭವಾಗಿ ಸಲ್ಲು ಚಲನವಲನ ತಿಳಿಯಬಹುದು ಎಂಬುದು ಇವರ ಆಲೋಚನೆ ಆಗಿತ್ತು. ಏಪ್ರಿಲ್ ತಿಂಗಳಲ್ಲಿ ಸಲ್ಮಾನ್ ಖಾನ್ ಫಾರ್ಮ್​ಹೌಸ್​ಗೆ ಎರಡು ಬಾರಿ ಭೇಟಿ ನೀಡಿದ್ದರು. ಆದರೆ, ಇವರು ಹತ್ಯೆ ಮಾಡುವ ಚಾನ್ಸ್ ಮಿಸ್ ಮಾಡಿಕೊಂಡಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada