Bigg Boss OTT: ಬಿಗ್​ಬಾಸ್ 3 ಗೆದ್ದ ಸನಾ, ಸಹ ಸ್ಪರ್ಧಿಗಳಿಂದ ವಿರೋಧ

ಬಿಗ್​ಬಾಸ್ ಹಿಂದಿ ಒಟಿಟಿ ಸೀಸನ್ 3 ನಿನ್ನೆಯಷ್ಟೆ ಮುಗಿದಿದ್ದು ಸನಾ ಮಕ್ಬೂಲ್ ಅನ್ನು ವಿಜೇತರನ್ನಾಗಿ ಘೋಷಿಸಲಾಗಿದೆ. ಆದರೆ ಈ ಘೋಷಣೆ ಹಿಂದೆ ಬಿಗ್​ಬಾಸ್ ಆಯೋಜಕರ ಪಕ್ಷಪಾತವಿದೆ ಎಂದು ಸಹ ಸ್ಪರ್ಧಿಗಳೇ ಆರೋಪ ಮಾಡಿದ್ದಾರೆ. ನೆಟ್ಟಿಗರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Bigg Boss OTT: ಬಿಗ್​ಬಾಸ್ 3 ಗೆದ್ದ ಸನಾ, ಸಹ ಸ್ಪರ್ಧಿಗಳಿಂದ ವಿರೋಧ
ಸನಾ ಮಕ್ಬೂಲ್
Follow us
ಮಂಜುನಾಥ ಸಿ.
|

Updated on: Aug 03, 2024 | 4:42 PM

ಬಿಗ್​ಬಾಸ್ ಸ್ಪರ್ಧೆ ಪ್ರಾರಂಭವಾದಾಗಿನಿಂದಲೂ ವಿವಾದಗಳಿಂದಲೇ ಜನಪ್ರಿಯತೆ ಗಳಿಸಿಕೊಂಡು ಬರುತ್ತಿದೆ. ಮನೆಯಲ್ಲಿ ನಡೆಯುವ ಜಗಳ, ಅಸೂಯೆ, ಮೂದಲಿಕೆ, ನಿಂದನೆಗಳೇ ಆ ಶೋನ ಟಿಆರ್​ಪಿ ಪಾಯಿಂಟ್ ಆಗಿದೆ. ಇದೀಗ ಬಿಗ್​ಬಾಸ್ ಒಟಿಟಿ ಬಂದ ಬಳಿಕವಂತೂ ಸ್ಪರ್ಧಿಗಳ ನಾಲಗೆಗೆ ಫಿಲ್ಟರ್ ಇಲ್ಲದಂತಾಗಿದೆ. ಟಿವಿ ಬಿಗ್​ಬಾಸ್​ಗಿಂತಲೂ ಒಟಿಟಿ ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ನಡುವೆ ಜಗಳಗಳು ಹೆಚ್ಚಾಗಿದೆ. ಇನ್ನು ಬಿಗ್​ಬಾಸ್ ವಿನ್ನರ್ ಆಯ್ಕೆಯ ವಿಷಯದಲ್ಲಿ ಪ್ರತಿಬಾರಿ ಪಕ್ಷಪಾತದ ಆರೋಪ ಕೇಳಿ ಬರುತ್ತಲೇ ಇರುತ್ತದೆ. ನಿನ್ನೆಯಷ್ಟೆ ಮುಗಿ ಬಿಗ್​ಬಾಸ್ ಹಿಂದಿ ಒಟಿಟಿ 3 ಸೀಸನ್​ ವಿಚಾರವಾಗಿಯೂ ಇದೇ ಆರೋಪ ಕೇಳಿಬಂದಿದೆ. ಸ್ವತಃ ಸಹ ಸ್ಪರ್ಧಿಗಳೇ ಬಿಗ್​ಬಾಸ್ ವಿನ್ನರ್ ಆಯ್ಕೆಯ ಬಗ್ಗೆ ಅಸಮಾಧಾನ ಮತ್ತು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಗ್​ಬಾಸ್ ಒಟಿಟಿ ಸೀಸನ್ 3 ರ ವಿಜೇತರಾಗಿ ಸನಾ ಮಕ್ಬೂಲ್ ಅನ್ನು ಘೋಷಿಸಲಾಗಿದೆ. ಆದರೆ ಈ ಘೋಷಣೆ ಮನೆಯಲ್ಲಿದ್ದ ಅನೇಕ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಸನಾ ಮಕ್ಬೂಲ್ ಅನ್ನು ಮನೆಯ ಯಾವೊಬ್ಬ ಸದಸ್ಯರೂ ಸಹ ಇಷ್ಟಪಡುತ್ತಿರಲಿಲ್ಲ. ಸನಾ ಎಲ್ಲರೊಡನೆ ಜಗಳವಾಡಿದ್ದರು, ಎಲ್ಲರೊಡನೆ ದ್ವೇಷ ಕಟ್ಟಿಕೊಂಡಿದ್ದರು. ನಟ ರಣ್ವೀರ್ ಶೌರಿಯ ಜೊತೆಗಂತೂ ದೊಡ್ಡ ಜಗಳ ಮಾಡಿದ್ದರು. ಆದರೆ ಕೊನೆಗೆ ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದ ರಣ್ವೀರ್ ಶೌರಿ ಎಲಿಮಿನೇಟ್ ಆಗಿ ಸನಾ ಗೆದ್ದಿದ್ದಾರೆ.

ಇದನ್ನೂ ಓದಿ: ಶುರುವಾಯ್ತು ಮರಾಠಿ ಬಿಗ್​ಬಾಸ್ 5, ಸುದೀಪ್ ಆಪ್ತ ನಿರೂಪಕ

ಈ ಬಗ್ಗೆ ಮಾತನಾಡಿರುವ ನಟ ರಣ್ವೀರ್ ಶೌರಿ, ‘ಆಕೆ ಗೆಲ್ಲುವ ಅಭ್ಯರ್ಥಿಯೇ ಅಲ್ಲ. ಬಿಗ್​ಬಾಸ್​ನ ಕೃಪಾ ದೃಷ್ಟಿ ಆಕೆಯ ಮೇಲೆ ಬಿತ್ತು, ಆಕೆ ವಿನ್ನರ್ ಆದರು. ಶೋನ ಆಯೋಜಕರ ಕರುಣೆಯಿಂದ ಆಕೆ ಗೆದ್ದಿದ್ದಾಳೆ. ಆಕೆ ಗೆಲ್ಲುವ ಅಭ್ಯರ್ಥಿಯೇ ಅಲ್ಲ. ಆಕೆಯದ್ದು ಅನ್ಯಾಯದ ಗೆಲುವು ಎಂದಿದ್ದಾರೆ. ರಣ್ವೀರ್ ಶೌರಿ ಮಾತ್ರವೇ ಅಲ್ಲದೆ ಬಿಗ್​ಬಾಸ್ ಮನೆಯಲ್ಲಿದ್ದು ಹೊರಬಂದ ಹಲವು ಸ್ಪರ್ಧಿಗಳು ಇದನ್ನೇ ಹೇಳಿದ್ದಾರೆ. ಬಿಗ್​ಬಾಸ್​ ರನ್ನರ್ ಅಪ್ ಆದ ರ್ಯಾಪರ್ ನೀಜಿಗೂ ಸಹ ಸನಾ ಗೆಲುವು ಆಶ್ಚರ್ಯ ತಂದಿದೆಯಂತೆ.

ಸನಾ ಮಕ್ಬೂಲ್ ಬಿಗ್​ಬಾಸ್ ಒಟಿಟಿ 3 ರ ವಿಜೇತರಾಗಿದ್ದು 25 ಲಕ್ಷ ರೂಪಾಯಿ ನಗದು ಹಾಗೂ ಟ್ರೋಫಿ ಗೆದ್ದಿದ್ದಾರೆ. ರಣ್ವೀರ್ ಶೌರಿಯ ಹೇಳಿಕೆ ಬಗ್ಗೆ ಮಾತನಾಡಿರುವ ಸನಾ, ಆತ ದ್ವೇಷ ಕಾರಿಕೊಂಡೇ ಇರಲಿ. ನನ್ನ ಜೀವನದಲ್ಲಿ ಆತನ ಮುಖವನ್ನು ಮತ್ತೊಮ್ಮೆ ನೋಡುವ ಯಾವುದೇ ಆಸೆ ನನಗಿಲ್ಲ ಎಂದಿದ್ದಾರೆ. ಅಲ್ಲದೆ, ನಾನು ಮನೆಯ ಮೆಚ್ಚಿನ ಸ್ಪರ್ಧಿ ಆಗಿರಲಿಲ್ಲ ಆದರೆ ನಾನು ಸತ್ಯದ ಪರ ಇದ್ದೆ, ನಾನು ನಂಬಿದ್ದಕ್ಕೆ ನಾನು ಬದ್ಧವಾಗಿದ್ದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ