‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು’; ಇದು ಸೋನು ಶ್ರೀನಿವಾಸ್ ಗೌಡ ಪಾಠ

ಸೋನು ಶ್ರೀನಿವಾಸ್ ಗೌಡ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ. ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದರಿಂದ ಟೀಕೆಗೆ ಒಳಗಾಗಿದ್ದರು. ಈ ಕಾರಣದಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದರು.

‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು’; ಇದು ಸೋನು ಶ್ರೀನಿವಾಸ್ ಗೌಡ ಪಾಠ
ಸೋನು
Edited By:

Updated on: Aug 24, 2022 | 9:00 PM

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ವಾರ ಅನೇಕ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಅವರು ಬಚಾವ್ ಆಗಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಈ ಕಾರಣದಿಂದ ಅವರು ಸೇವ್ ಆಗುತ್ತಿದ್ದಾರೆ. ಅವರ ಮಾತುಗಳು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವರಿಗೆ ಅವರ ಮಾತುಗಳು ಕಾಮಿಡಿ ಎನಿಸುತ್ತಿದೆ. ಈಗ ಲವ್ ಮಾಡುವವರಿಗೆ ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಸೋನು ಒಂದು ಟಿಪ್ಸ್ ನೀಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ. ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದರಿಂದ ಟೀಕೆಗೆ ಒಳಗಾಗಿದ್ದರು. ಈ ಕಾರಣದಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಬಿಗ್ ಬಾಸ್ ಮನೆಗೆ ಅವರು ಕಾಲಿಟ್ಟಾಗ ಅನೇಕರು ಇದೇ ವಿಚಾರ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಆದರೆ, ಸೋನು ಈಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮದ ವಿಚಾರ ಚರ್ಚೆಗೆ ಬಂತು. ರೂಪೇಶ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ನಡೆದ ಪ್ರೇಮ ಕಥೆ ಒಂದನ್ನು ಹೇಳಿಕೊಂಡರು. ‘ಒಂದು ಹುಡುಗಿ ದಿನಾ ದೇವಸ್ಥಾನಕ್ಕೆ ಬರುತ್ತಿದ್ದಳು. ನನ್ನ ಫ್ರೆಂಡ್ಸ್ ಎಲ್ಲರೂ ಅವಳಿಗೆ ಲೈನ್ ಹೊಡೆಯುತ್ತಿದ್ದರು. ಅವಳು ನನಗೆ ಬೀಳಲ್ಲ ಎಂದು ನಾನು ಸುಮ್ಮನೆ ಇದ್ದೆ. ರಕ್ಷಾ ಬಂಧನದ ದಿನ ಎಲ್ಲರಿಗೂ ಆಕೆ ರಾಖಿ ಕಟ್ಟಿದಳು. ನನಗೆ ಕಟ್ಟಿಲ್ಲ’ ಎಂದರು ರೂಪೇಶ್.

ಇದನ್ನೂ ಓದಿ
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’: ಡೇಂಜರ್ ಜೋನ್​ನಲ್ಲಿ 7 ಮಂದಿ; ಸೋನು ಶ್ರೀನಿವಾಸ್ ಗೌಡ ಬಚಾವ್​

ಈ ವೇಳೆ ಸೋನು ಗೌಡ ಅವರು, ‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್​ಪಾಸ್​ ಇರಬಾರದು’ ಎಂದರು. ಈ ಮೂಲಕ ಲವ್​​ ಟಿಪ್ಸ್ ಕೊಟ್ಟರು. ‘ಲವ್​ ಟೈಮ್​ವೇಸ್ಟ್​. ಫ್ರೆಂಡ್​ಶಿಪ್ ಮುಖ್ಯ’ ಎಂದು ಕೂಡ ಸೋನು ಹೇಳಿದರು. ಅವರು ಹೇಳಿದ್ದನ್ನು ಕೇಳಿ ರಾಕೇಶ್ ಅವರು ನೇರವಾಗಿ ಉತ್ತರ ಕೊಟ್ಟರು. ‘ಯಾವುದೇ ರಿಲೇಶನ್​ಶಿಪ್​ನಲ್ಲಿ ರೆಸ್ಪೆಕ್ಟ್ ಮುಖ್ಯ’ ಎಂದರು ರಾಕೇಶ್.