AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದು ಗದ್ದಲ ಇಲ್ಲದೇ ಸೈಲೆಂಟ್​ ಆಗಿ ಒಟಿಟಿಗೆ ಬಂತು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ

ಜನವರಿ 25ರ ರಾತ್ರಿಯಿಂದಲೇ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ - ಸೈಡ್​ ಬಿ’ ಸಿನಿಮಾ ಸ್ಟ್ರೀಮಿಂಗ್​ ಆಗುತ್ತಿದೆ. ರಕ್ಷಿತ್​ ಶೆಟ್ಟಿ ನಟನೆಯ ಈ ಸಿನಿಮಾದ ಒಟಿಟಿ ರಿಲೀಸ್​ ಬಗ್ಗೆ ಹೆಚ್ಚೇನೂ ಪ್ರಚಾರ ನೀಡಿಲ್ಲ. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡಬಹುದು.

ಸದ್ದು ಗದ್ದಲ ಇಲ್ಲದೇ ಸೈಲೆಂಟ್​ ಆಗಿ ಒಟಿಟಿಗೆ ಬಂತು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ
‘ಸಪ್ತ ಸಾಗರದಾಚೆ ಎಲ್ಲೋ - ಸೈಡ್​ ಬಿ’
ಮದನ್​ ಕುಮಾರ್​
|

Updated on: Jan 26, 2024 | 3:40 PM

Share

ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ (SSE Side B) ಸಿನಿಮಾ ಬಿಡುಗಡೆಯಾಗಿ ಬಹಳ ದಿನಗಳು ಕಳೆದಿವೆ. ವಿಮರ್ಶಕರಿಂದ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. 2023ರ ನವೆಂಬರ್ 17ರಂದು ತೆರೆಕಂಡಿದ್ದ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಫ್ಯಾನ್ಸ್​ ಕಾಯುತ್ತಿದ್ದರು. ಈಗ ಸದ್ದು ಗದ್ದಲ ಇಲ್ಲದೇ ‘ಅಮೇಜಾನ್​ ಪ್ರೈಂ ವಿಡಿಯೋ’ (Amazon Prime Video) ಮೂಲಕ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಥಿಯೇಟರ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡಬಹುದು. ರಕ್ಷಿತ್​ ಶೆಟ್ಟಿ (Rakshit Shetty) ಜೊತೆ ರುಕ್ಮಿಣಿ ವಸಂತ್​ ಮತ್ತು ಚೈತ್ರಾ ಆಚಾರ್​ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಪಾರ್ಟ್​ನಲ್ಲಿ ಮೂಡಿಬಂತು. ಮೊದಲ ಭಾಗವನ್ನು ‘ಸೈಡ್​ ಎ’ ಹಾಗೂ ಎರಡನೇ ಭಾಗವನ್ನು ‘ಸೈಡ್​ ಬಿ’ ಎಂದು ಕರೆಯಲಾಯಿತು. ಒಂದು ಗಾಢವಾದ ಪ್ರೇಮಕಥೆ ಈ ಸಿನಿಮಾದಲ್ಲಿ ಇದೆ. ಹೇಮಂತ್​ ಎಂ. ರಾವ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಸೈಡ್​ ಎ’ ನೋಡಿ ಮೆಚ್ಚಿಕೊಂಡವರು ಈಗ ಒಟಿಟಿಯಲ್ಲಿ ‘ಸೈಡ್​ ಬಿ’ ನೋಡಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: SSE Side B: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ತಂಡಕ್ಕೆ ‘ಕತ್ತೆ’ ಎಂದು ಹೊಗಳಿದ ಕಿಚ್ಚ ಸುದೀಪ್​

ಜನವರಿ 25ರ ರಾತ್ರಿಯಿಂದಲೇ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾ ಸ್ಟ್ರೀಮಿಂಗ್​ ಆಗುತ್ತಿದೆ. ಈ ಬಗ್ಗೆ ಹೆಚ್ಚೇನೂ ಪ್ರಚಾರ ನೀಡಿಲ್ಲ. ಬಹುನಿರೀಕ್ಷಿತ ಸಿನಿಮಾದ ಒಟಿಟಿ ರಿಲೀಸ್​ ವೇಳೆ ಚಿತ್ರತಂಡದವರು ಒಂದಷ್ಟು ಪ್ರಚಾರ ಮಾಡುವುದು ವಾಡಿಕೆ. ಆದರೆ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಚಿತ್ರದ ಒಟಿಟಿ ರಿಲೀಸ್​ ಕುರಿತು ಅಷ್ಟೇನೂ ಪ್ರಚಾರ ಮಾಡಲಾಗಿಲ್ಲ.

ಇದನ್ನೂ ಓದಿ: ಗಣರಾಜ್ಯೋತ್ಸವದ ಪ್ರಯುಕ್ತ ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ಬಿಡುಗಡೆ

ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಮನು ಎಂಬ ಪಾತ್ರ ಮಾಡಿದ್ದಾರೆ. ಪ್ರೀತಿಗಾಗಿ ಮತ್ತು ಪ್ರೀತಿಸಿದವಳಿಗಾಗಿ ಜೀವನದಲ್ಲಿ ಸಾಕಷ್ಟು ರಿಸ್ಕ್​ಗಳನ್ನು ತೆಗೆದುಕೊಳ್ಳುವ ಆ ಪಾತ್ರವನ್ನು ರಕ್ಷಿತ್​ ಶೆಟ್ಟಿ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕಿಯರಾದ ರುಕ್ಮಿಣಿ ವಸಂತ್​ ಹಾಗೂ ಚೈತ್ರಾ ಆಚಾರ್​ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗೋಪಾಲಕೃಷ್ಣ ದೇಶಪಾಂಡೆ ಅವರು ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಚರಣ್​ ರಾಜ್​ ಸಂಗೀತ ನಿರ್ದೇಶನ, ಅದ್ವೈತ್​ ಗುರುಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ